ನಾವು ಗುರುಗಳಿಗೆ ಗೌರವ ನೀಡಿದಷ್ಟು ನಮ್ಮ ಗೌರವವು ಕೂಡ ಹೆಚ್ಚಾಗುತ್ತಾ ಹೋಗುತ್ತದೆ. ನಾವು ಈ ಹಂತಕ್ಕೆ ಬೆಳೆಯಲು ಅವರುಗಳೇ ಕಾರಣ ಎಂದು ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಟಿ.ದಿನೇಶ್ ಬಿಳಗುಂಬ ತಿಳಿಸಿದರು.
ಅವರು ಬಿಳಗುಂಬ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮತ್ತು ಸರಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಮಾತನಾಡಿ, ತಂದೆ ತಾಯಿಗೆ ನೀಡುವ ಗೌರವವನ್ನು ಗುರುಗಳಿಗೂ ನೀಡಿದರೆ ನಾವು ಉತ್ತಮವಾಗಿ ಗುರಿ ಮುಟ್ಟಬಹುದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪರಿಸರ ಪ್ರೇಮಿ ಬಿ.ಟಿ.ರಾಜೇಂದ್ರ ಮಾತನಾಡಿ, ನಾವು ವ್ಯಾಸಂಗ ಮಾಡುವಾಗ ಸರಕಾರಿ ಸೌಲಭ್ಯಗಳು ತುಂಬಾ ಕಡಿಮೆ. ಇಂದಿನ ಮಕ್ಕಳಿಗೆ ಸರಕಾರಿ ಸೌಲಭ್ಯಗಳು ಹೆಚ್ಚು. ಸಂಘ ಸಂಸ್ಥೆಗಳು ದಾನಿಗಳು ಮಕ್ಕಳಿಗೆ ಪ್ರೋತ್ಸಾಹಿಸುತ್ತಿದ್ದಾರೆ ಎಂದರು.
ಕನ್ನಡ ಪಾಠಶಾಲೆಯ ಅನಿಲ್ ಮಾತನಾಡಿ, ನಾನು ಶಾಲಾ ವಿದ್ಯಾರ್ಥಿಗಳೊಂದಿಗೆ ಮತ್ತು ಶಿಕ್ಷಕರೊಂದಿಗೆ ನಿರಂತರವಾಗಿ ಹಿರಿಯ ವಿದ್ಯಾರ್ಥಿಯಾಗಿದ್ದೇನೆ ಎಂದರು.

ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ನಾಗಬೈರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನವನ್ನು ನಮ್ಮ ಶಿಕ್ಷಕರಿಗೆ ಕೊಡುಗೆಯಾಗಿ ನೀಡಿರುವುದು ನಮ್ಮ ಪುಣ್ಯ. ಅವರ ಆದರ್ಶ ಗುಣಗಳನ್ನು ನಾವು ನೀವು ಅಳವಡಿಸಿಕೂಂಡರೆ ಅದು ಅವರಿಗೆ ನಾವುಗಳು ನೀಡುವ ಗೌರವ ಎಂದರು.
ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಅವರು ಸಂಗ್ರಹಿಸಿದ ಹಣದಿಂದ ಶಿಕ್ಷಕರಿಗೆ ಆಟವನ್ನಾಡಿಸಿ ಬಹುಮಾನ ನೀಡಿದರು. ಪ್ರೌಢಶಾಲೆಯ ಎಲ್ಲಾ ಶಿಕ್ಷಕರನ್ನು ಮತ್ತು ಸಿಬ್ಬಂದಿಯನ್ನು ಬಿ.ಟಿ.ರಾಜೇಂದ್ರ ವತಿಯಿಂದ ಗೌರವಿಸಲಾಯಿತು. ಇದೆ ಸಂದರ್ಭದಲ್ಲಿ ಕ್ಲಸ್ಟರ್ ಅಂತದಲ್ಲಿ ಗೆದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಹೇಮಂತ್, ಶ್ರೀಧರ್ ಮತ್ತು ಸ್ನೇಹಿತರಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾರ್ಪೊರೇಶನ್ ಬ್ಯಾಂಕ್ ಮ್ಯಾನೇಜರ್ ದಿನೇಶ್, ಸಿಬ್ಬಂದಿ ರಸಾಕ್ ಶಿಕ್ಷಕರಿಗೆ ವಂದಿಸಿದರು.

ಸಿ.ಆರ್.ಪಿ ರಮೇಶ್, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಲತಾ, ಶಿಕ್ಷಕರಾದ ಉಮೇಶ್ ಶಿಕ್ಷಕರ ಕುರಿತು ಹಾಡನ್ನಾಡಿದರು. ವೇದಿಕೆಯಲ್ಲಿ ಶಿಕ್ಷಕರಾದ ಮಹಾದೇವಯ್ಯ, ಶ್ರೀಧರ್, ಚಂದ್ರಪ್ಪಾ, ರಾಮಕೃಷ್ಣ, ಅಹಿಶಾ, ಸುಜಾತ, ರೇಖಾ, ದಿವ್ಯ ರಾಮಯ್ಯ ಮುಂತಾದರಿದ್ದರು ಮತ್ತು ಎಲ್ಲಾ ವಿಧ್ಯಾರ್ಥಿಗಳಿಗೆ ಶಿಕ್ಷಕರಿಗೆ ಸಿಹಿ ವಿತರಿಸಲಾಯಿತು.
