ಗಯಾನಾದಲ್ಲಿ ನಡೆದ ಟಿ20 ವಿಶ್ವಕಪ್ 2024ರಲ್ಲಿ ಭಾರತ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಪರ ಕೊನೆಯ ಬಾರಿಗೆ ಆಡಿದ್ದ ಆಲ್ ರೌಂಡರ್ ಮೊಯಿನ್ ಅಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್‌ನ ಮುಂಬರುವ ವೈಟ್-ಬಾಲ್ ಕ್ರಿಕೆಟ್ ಸರಣಿಗೆ ಕಡೆಗಣಿಸಿದ ಬಳಿಕ ಈ ಬೆಳವಣಿಗೆ ಕಂಡು ಬಂದಿದೆ.
ಡೈಲಿ ಮೇಲ್‌ನಲ್ಲಿ ಇಂಗ್ಲೆಂಡ್‌ನ ಮಾಜಿ ನಾಯಕ ನಾಸರ್ ಹುಸೇನ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೊಯಿನ್ ಅಲಿ, “ನನಗೆ 37 ವರ್ಷ ವಯಸ್ಸಾಗಿದೆ ಮತ್ತು ಈ ತಿಂಗಳ ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಲಿಲ್ಲ” ಎಂದು ಪ್ರಸ್ತಾಪಿಸಿದ್ದಾರೆ.
ಇದನ್ನು ಓದಿದ್ದೀರಾ? ಅಂತಾರಾಷ್ಟ್ರೀಯ, ದೇಶೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್
“ನಾನು ಇಂಗ್ಲೆಂಡ್‌ಗಾಗಿ ಸಾಕಷ್ಟು ಕ್ರಿಕೆಟ್ ಆಡಿದ್ದೇನೆ. ಇದು ಮುಂದಿನ ಪೀಳಿಗೆಗೆ ಸಮಯವಾಗಿದೆ ಎಂಬುದು ಇದರಿಂದ ತಿಳಿದುಬರುತ್ತದೆ. ಇದು ಸರಿಯಾದ ಸಮಯ ಎಂದು ನನಗೆ ಭಾವಿಸುತ್ತದೆ. ನಾನು ನನ್ನ ಪಾತ್ರವನ್ನು ಮಾಡಿದ್ದೇನೆ” ಎಂದು ನಿವೃತ್ತಿ ಘೋಷಿಸಿದ ಅಲಿ ಹೇಳಿದ್ದಾರೆ.
“ನಾನು ಕಾಯಬಹುದು, ಮತ್ತೆ ಇಂಗ್ಲೆಂಡ್‌ಗಾಗಿ ಆಡಲು ಪ್ರಯತ್ನಿಸಬಹುದು. ಆದರೆ ವಾಸ್ತವದಲ್ಲಿ ನಾನು ಹಾಗೆ ಮಾಡುವುದಿಲ್ಲ ಎಂದು ನನಗೆ ತಿಳಿದಿದೆ. ನಾನು ಇನ್ನು ಆಡಲು ಸಾಧ್ಯವಿಲ್ಲ ಎಂದುಕೊಂಡು ನಾನು ನಿವೃತ್ತಿಯಾಗುತ್ತಿಲ್ಲ. ನಾನು ಇನ್ನೂ ಆಡಬಲ್ಲೆ. ಆದರೆ ವಿಷಯ ಹೇಗಿದೆ ಎಂದು ನಾನು ಅರ್ಥಮಾಡಿಕೊಳ್ಳುತ್ತೇನೆ” ಎಂದು ಮೊಯಿನ್ ಹೇಳಿದರು.
2014ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮೊಯಿನ್ 6678 ಅಂತಾರಾಷ್ಟ್ರೀಯ ರನ್‌ಗಳನ್ನು ಗಳಿಸಿದ್ದಾರೆ ಮತ್ತು 366 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 2019 ಕ್ರಿಕೆಟ್ ವಿಶ್ವಕಪ್ ಮತ್ತು 2022 ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿದ್ದರು.
Moeen Ali retires from international cricket
— Cricketopia (@CricketopiaCom) September 8, 2024
250 runs and 20 wickets in a test series ✔️
An ODI hundred in less than 60 balls ✔️
A Test Hat-trick ✔️
A Ten-for in a test ✔️
World Cup Winner ✔️ pic.twitter.com/Vs0gzlhT4i
