ಕಲಬುರಗಿ ನಗರದ ಕೇಂದ್ರೀಯ ಬಸ್ ನಿಲ್ದಾಣದ ಎದುರಿನ ಖಾಸಗಿ ಆಸ್ಪತ್ರೆಯ ಹೈಲೈಟ್ ಬೋರ್ಡ್‌ಗಾಗಿ ಹಾಕಿದ್ದ ಕಂಬದಲ್ಲಿ ಪ್ರವಹಿಸುತ್ತಿದ್ದ ವಿದ್ಯುತ್ ಸ್ಪರ್ಶದಿಂದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದ ನಿವಾಸಿ ಮುಹಮ್ಮದ್ ಇರ್ಶಾದ್ ಸಾವನ್ನಪ್ಪಿದವರು ಎಂದು ತಿಳಿದು ಬಂದಿದೆ.
ಮೃತರು ತನ್ನ ಗರ್ಭಿಣಿ ಸಹೋದರಿಗೆ ಚಿಕಿತ್ಸೆಗೆಂದು ಶನಿವಾರ ಶಹಾಪುರದಿಂದ ಕಲಬುರಗಿ ನಗರದ ನ್ಯೂ ಲೈಫ್ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆಯಲ್ಲಿ ಆಸ್ಪತ್ರೆ ಆವರಣದಲ್ಲಿರುವ ಹೈಲೈಟ್ ಬೋರ್ಡ್ ಕಂಬವನ್ನು ಸ್ಪರ್ಶಿಸಿದಾಗ ದುರ್ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಆಟವಾಡಲು ಹೋದ ಬಾಲಕ ನೀರಿನ ಗುಂಡಿಗೆ ಬಿದ್ದು ಸಾವು
ವಿದ್ಯುತ್ ಆಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯ ಆಡಳಿತ ವ್ಯವಸ್ಥೆ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.