ಬೀದರ್ ನಗರದ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿಯೊಳಗೆ ನಾಲ್ಕು ಅಡಿ ಉದ್ದದ ಹಾವು ನುಗ್ಗಿದ್ದು, ಗಾಬರಿಗೊಂಡ ಸಿಬ್ಬಂದಿ ಕಚೇರಿಯಿಂದ ಹೊರಗೆ ಓಡಿದ ಪ್ರಸಂಗ ನಡೆಯಿತು.
“ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹಾವನ್ನು ಕಂಡ ಕಚೇರಿ ಸಿಬ್ಬಂದಿ ಕೆಲಸಬಿಟ್ಟು ಉರಗ ತಜ್ಞರನ್ನು ಕರೆಸಿ ಹಾವನ್ನು ಹಿಡಿದ ಬಳಿಕ ಸಿಬ್ಬಂದಿ ನಿಟ್ಟುಸಿರು ಬಿಟ್ಟರು” ಎಂದು ಭೀಮ್ ಆರ್ಮಿ ಸಂಘಟನೆಯ ಘಾಳೆಪ್ಪಾ ಲಾಧಾಕರ್ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ದಲಿತ ಯುವತಿಗೆ ಲೈಂಗಿಕ ದೌರ್ಜನ್ಯ; ಡಿವೈಎಸ್‌ಪಿ ಕಚೇರಿ ಎದುರು ದಸಂಸ ಧರಣಿ
“ಇದೇ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಿವೆ. ವಸತಿ ನಿಲಯದಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳಿದ್ದು, ಹಾವು, ಚೇಳುಗಳಂತಹ ವಿಷಕಾರಿ ಜಂತುಗಳು ಓಡಾಡುವ ಭೀತಿ ಎದುರಾಗಿದೆ. ಹೀಗಾಗಿ ಮಕ್ಕಳ ಸುರಕ್ಷತೆಗಾಗಿ ವಸತಿ ನಿಲಯದ ಸುತ್ತಲೂ ಬೆಳೆದಿರುವ ಹುಲ್ಲು, ಗಿಡಗಂಟಿಯನ್ನು ಸ್ವಚ್ಛಗೊಳಿಸಬೇಕು” ಎಂದು ಆಗ್ರಹಿಸಿದರು.