ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!

Date:

Advertisements

ಡೊಳ್ಳು ಹೊಟ್ಟೆ ಗಣಪನಿಗೆ ಮೂಷಿಕ(ಇಲಿ)ವು ವಾಹನ ಎಂಬುದು ಹಿಂದೂಗಳ ನಂಬಿಕೆ. ಗಣೇಶ ಚತುರ್ಥಿಯನ್ನು ದೇಶದ ಹಿಂದೂ ಬಾಂಧವರು ಆಚರಿಸಿಕೊಳ್ಳುವುದು ಸಾಮಾನ್ಯ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮುಸ್ಲಿಮರ ಮನೆಯಲ್ಲಿಯೂ ಕೂಡ ಆಚರಣೆ ಮಾಡುತ್ತಿರುವ ಸುದ್ದಿಗಳನ್ನು ಎಲ್ಲ ವರ್ಷ ಓದುತ್ತೇವೆ.

ಇಲಿಗಳು ಮನೆಯಲ್ಲಿದ್ದರೆ ಬಟ್ಟೆ, ದವಸ ಧಾನ್ಯಗಳನ್ನು ಹಾಳು ಮಾಡುತ್ತವೆ. ಇದರಿಂದಾಗಿ ನಿತ್ಯದ ಜೀವನದಲ್ಲಿ ವಿಘ್ನಗಳು ಎದುರಾಗುತ್ತವೆ. ನಮ್ಮ ನಿತ್ಯದ ಬದುಕಿನಲ್ಲಿ ಯಾವುದೇ ವಿಘ್ನಗಳು ಬಾರದಿರಲಿ ಎಂದು ಗಣಪತಿಯನ್ನು ಆರಾಧಿಸುತ್ತಾರೆ. ಆದರೆ, ಈ ಗೌರಿಸುತನ ವಾಹನವಾಗಿರುವ ಇಲಿಗೂ ಕೂಡಾ ಒಂದು ದಿನ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ವಿಶಿಷ್ಠ ಆಚರಣೆಯನ್ನು ಉತ್ತರ ಕರ್ನಾಟಕದಲ್ಲಿ ಬಹುತೇಕರು ಆಚರಿಸುತ್ತಾರೆ, ಅದರಲ್ಲಿಯೂ ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಮುಸ್ಲಿಂ ನೇಕಾರ ಕುಟುಂಬಗಳು ಭಕ್ತಿಯಿಂದ ಇಲಿ ಹಬ್ಬ ಆಚರಿಸುತ್ತಾರೆ.

ಈಗಾಗಲೇ ಗಣೇಶ ಹಬ್ಬವನ್ನು ಆಚರಿಸಿರುವ ಜನ, ಈಗ ಗಣೇಶನ ವಾಹನ ಇಲಿಯನ್ನು ಪೂಜಿಸುತ್ತಾರೆ. ಅದರಲ್ಲಿಯೂ ನೇಕಾರರು ಅಧಿಕ ಜನರಿರುವ ಕೊಪ್ಪಳ ತಾಲೂಕಿನ ಭಾಗ್ಯನಗರ ಗ್ರಾಮದಲ್ಲಿ ಇಲಿ ಹಬ್ಬವನ್ನು ಸಂಪ್ರದಾಯ ಬದ್ದವಾಗಿ ಆಚರಿಸುತ್ತಾರೆ.

Advertisements

ನೇಕಾರರು ಸೇರಿದಂತೆ ಬೇರೆ ಬೇರೆ ಸಮುದಾಯದ ಜನರ ಮನೆಯಲ್ಲಿ ಮಗ್ಗಗಳು ಇರುವುದರಿಂದ ಎಲ್ಲರೂ ಇಲಿಯನ್ನು ಆರಾಧಿಸುತ್ತಾರೆ. ಗಣೇಶನ ಹಬ್ಬದಂತೆ ಶ್ರದ್ಧಾಭಕ್ತಿಯಿಂದ ಇಲಿರಾಯನನ್ನು ಪೂಜಿಸುವ ಮೂಲಕ ಇಲಿರಾಯನನ್ನು ಸಂತೃಪ್ತಿ ಪಡಿಸುತ್ತಾರೆ.

ಚಿತ್ರಗಾರರ ಮನೆಯಿಂದ ಮಣ್ಣಿನಿಂದ ಮಾಡಿದ ಇಲಿಗಳ ಮೂರ್ತಿಗಳನ್ನು ತಂದು ಪೂಜೆ ಸಲ್ಲಿಸಲಾಗುತ್ತದೆ. ಮನೆಯಲ್ಲಿ ಓಡಾಡುವ ಇಲಿಗಳು ಮಗ್ಗಗಳ ನೂಲನ್ನು ಹಾಗೂ ತಯಾರಿಸಿದ ಸೀರೆಗಳನ್ನು ಹಾಳು ಮಾಡದಿರಲಿ ಎಂಬುದಕ್ಕೆ ಇಲ್ಲಿ ಇಲಿಯನ್ನು ಪೂಜಿಸಲಾಗುತ್ತದೆ.

ಇಲಿರಾಯನ ಪೂಜೆಗೆ ಕಡುಬು, ಚಕ್ಕುಲಿ, ಉಂಡೆ, ಕರಜಿಕಾಯಿ, ಸಂಡಿಗೆ, ಹಪ್ಪಳ, ಹೋಳಿಗೆ ಸೇರಿದಂತೆ ನಾನಾ ಬಗೆಯ ಭಕ್ಷ್ಯಗಳನ್ನು ತಯಾರಿಸಿ ನೈವೇದ್ಯ ಮಾಡುತ್ತಾರೆ. ಈ ಮೂಲಕ ಇಲಿರಾಯ ತಮ್ಮ ಮಗ್ಗಗಳಿಗೆ, ನೂಲುಗಳಿಗೆ ತೊಂದರೆ ಕೊಡದಿರಲಿ ಎಂದು ಬೇಡಿಕೊಳ್ಳುತ್ತಾರೆ. ಇಲಿಪೂಜೆ ಮಾಡಿದರೆ ಇಲಿಗಳು ಮಗ್ಗಗಳಿಗೆ, ನೂಲಿಗೆ ತೊಂದರೆ ಕೊಡೋದಿಲ್ಲ ಎಂಬ ನಂಬಿಕೆ ನೇಕಾರರದ್ದು.

ಇಲಿ ಪೂಜೆ ಯಾಕೆ ಮಾಡಲಾಗುತ್ತದೆ ಎಂದು ಪ್ರಶ್ನಿಸಿದಾಗ ನಮ್ಮೊಂದಿಗೆ ಮಾತನಾಡಿದ ನೇಕಾರರಾಗಿರುವ ಪೀರ್ ಸಾಬ್‌ ಬೈರಾಪುರ, “ಸುಮಾರು 20 ವರ್ಷಗಳಿಂದ ಈ ಸಂಪ್ರದಾಯ ಆಚರಿಸುತ್ತಾ ಬಂದಿದ್ದೇವೆ. ನಮ್ಮ ಮುತ್ತಜ್ಜ ಕಾಲದಲ್ಲಿ ವಂಶ ಪರಂಪರೆಯಾಗಿ ಆಚರಣೆ ಸಲ್ಲಿಸುತ್ತಾ ಇದ್ದೀವಿ. ಪ್ರತಿ ವರ್ಷವೂ ಗಣೇಶ ಚತುರ್ಥಿಯ ಮರುದಿನ ಇಲಿ ಹಬ್ಬಕ್ಕಾಗಿ ಮನೆಯಲ್ಲಿ ಅದ್ದೂರಿಯಾಗಿ ಆಚರಿಸುತ್ತೇವೆ. ಮನೆಯಲ್ಲಿ ವಿವಿಧ ರೀತಿಯಲ್ಲಿ ಅಡುಗೆ ಮಾಡಿ ಬದನೆಕಾಯಿ, ಅನ್ನ, , ಹಪ್ಪಳ, ಹೋಳಿಗೆ ಸೇರಿದಂತೆ ನಾನಾ ಬಗೆಯ ಭಕ್ಷ್ಯಗಳನ್ನು ತಯಾರಿಸಿ ಇಲಿರಾಯನಿಗೆ ನೈವೇದ್ಯ ಮಾಡುತ್ತೇವೆ” ಎಂದರು.

ಇದನ್ನು ಓದಿದ್ದೀರಾ? ದ‌.ಕನ್ನಡ | ಗಣೇಶೋತ್ಸವ ಶೋಭಾಯಾತ್ರೆಯ ವೇಳೆ ತಿಂಡಿ-ತಿನಿಸು ನೀಡಬೇಡಿ: ಮಸೀದಿಗೆ ಭಜನಾ ಮಂದಿರದಿಂದ ಪತ್ರ!

ನೇಕಾರಿಕೆಗೆ ಬಳಸುವ ಎಲ್ಲ ಸಾಮಗ್ರಿಗಳಿಗೆ ಒಂದೊಂದು ಕಾಯಿ ಹೊಡೆದು ಪೂಜೆ ಸಲ್ಲಿಸಿ ಕೆಲಸಗಾರರಿಗೆ ಮನೆಯಲ್ಲಿ ಮಾಡಿದ ವಿಶೇಷ ಆಹಾರ ಪದಾರ್ಥಗಳನ್ನು ತಿನ್ನಿಸಲಾಗುತ್ತದೆ.

“ನಾವು ನೇಕಾರಿಕೆ ಮಾಡುತ್ತಿರುವುದರಿಂದ ಬಟ್ಟೆಗಳು ಮನೆಯಲ್ಲಿ ಇರುತ್ತವೆ. ಅವುಗಳನ್ನು ಕಡಿಯಬಾರದು ಎನ್ನುವ ಕಾರಣಕ್ಕಾಗಿ ಈ ರೀತಿಯ ಪೂಜೆಯನ್ನು ಮಾಡುವ ಸಂಪ್ರದಾಯವಿದೆ. ಇಲಿಯನ್ನು ಪೂಜೆ ಮಾಡುವವರ ಮನೆಯಲ್ಲಿ ಬಟ್ಟೆಗಳನ್ನು ಕಡಿಯುವುದಿಲ್ಲ ಎಂದು ನಂಬಿಕೆ ಮೇಲೆ ಆಚರಣೆ ಮಾಡಲಾಗುತ್ತದೆ. ಸುಮಾರು ವರ್ಷಗಳಿಂದ ಮನೆಯಲ್ಲಿ ಮಾಡಿಕೊಂಡು ಬಂದ ಸಂಪ್ರದಾಯ. ಅದನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಇಲಿ ಪೂಜೆ ಕಾರ್ಯಕ್ರಮ ಮಾಡಿಲ್ಲ ಅಂದರೆ ನಮಗೆ ಇಡೀ ವರ್ಷ ತೃಪ್ತಿ ಇಲ್ಲದಂತಾಗುತ್ತದೆ. ಈವರೆಗೆ ಇಲಿ ನಮಗೆ ತೊಂದರೆ ಕೊಟ್ಟಿಲ್ಲ” ಎಂದು ಹೇಳಿದರು.

Rafi
ರಫಿ ಗುರುಗುಂಟ
+ posts

ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಫಿ ಗುರುಗುಂಟ
ರಫಿ ಗುರುಗುಂಟ
ಗುಲಬರ್ಗಾ ವಿವಿಯಿಂದ ಪತ್ರಿಕೋದ್ಯಮದಲ್ಲಿ ಎಂ ಎ ಪದವಿ, ಕಲ್ಯಾಣ ಕರ್ನಾಟಕ ವಲಯ ಕೋರ್ಡಿನೇಟರ್

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಾಗೇಪಲ್ಲಿ | ನೋಟಿಸ್ ನೀಡದೇ ಕೆಲಸದಿಂದ ತೆಗೆದ ಗಾರ್ಮೆಂಟ್ ಫ್ಯಾಕ್ಟರಿ; ಪ್ರತಿಭಟನೆಗಿಳಿದ ಮಹಿಳಾ ನೌಕರರು

ಬಾಗೇಪಲ್ಲಿ ತಾಲೂಕಿನ ಹೊರವಲಯದ ರಾಷ್ಟ್ರೀಯ ಹೆದ್ದಾರಿ ನಾರೇಪಲ್ಲಿ ಟೋಲ್ ಗೇಟ್ ಬಳಿ...

ಧಾರವಾಡ | ಹಾಳುಬಿದ್ದ ಸಂಶಿ ಎಪಿಎಂಸಿ; ವಾರದ ಸಂತೆ ಸ್ಥಳಾಂತರಿಸಲು ಒತ್ತಾಯ

ಸರ್ಕಾರದ ಮಟ್ಟದಲ್ಲಿ ಆಗುವ ಯೋಜನೆಗಳ ಅನುಷ್ಠಾನ ಮಾಡುವಲ್ಲಿ ನಿರ್ಲಕ್ಷ್ಯ ವಹಿಸುವುದರಿಂದ ಇತ್ತ...

ಹಾಸನ | ಕ್ಯೂಬಾ ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಫಿಡೆಲ್ ಕ್ಯಾಸ್ಟ್ರೋ ಕೊಡುಗೆ ಅಪಾರ: ಬರಹಗಾರ ರವಿಕುಮಾರ್

ಕೃಷಿ ಪ್ರಧಾನವಾಗಿರುವ ಪುಟ್ಟ ಕ್ಯೂಬಾ ದೇಶವನ್ನು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದುವಂತೆ...

ಕುಶಾಲನಗರ | ಕೊಡಗು ಪ್ರವೇಶ ನಿರ್ಬಂಧ; ಪುನೀತ್ ಕೆರೆಹಳ್ಳಿಯನ್ನು ಹೊರಹಾಕಿದ ಪೊಲೀಸರು

ಕೊಡಗು ಜಿಲ್ಲೆ, ಕುಶಾಲನಗರಕ್ಕೆ ಆಗಮಿಸಿದ್ದ ರಾಷ್ಟ್ರ ರಕ್ಷಣಾ ಪಡೆಯ ಸಂಸ್ಥಾಪಕ ಪುನೀತ್...

Download Eedina App Android / iOS

X