ಬೆಂಗಳೂರು | ಸರ್ಕಾರಿ ಕಚೇರಿಯಲ್ಲಿ ದೇವರ ಪೂಜೆ ಸಂವಿಧಾನ ವಿರೋಧಿ ಕ್ರಿಯೆ; ಸಾಹಿತಿ, ಪ್ರಗತಿಪರರ ಆಗ್ರಹ

Date:

Advertisements

ಎಲ್ಲ ಸರ್ಕಾರಿ ಕಚೇರಿ ಮತ್ತು ಶಾಲೆ, ಕಾಲೇಜು ವಿಶ್ವವಿದ್ಯಾಲಯಗಳಲ್ಲಿ ಧಾರ್ಮಿಕ ಕಾರ್ಯ, ದೇವರ ಫೋಟೋಗಳು ಅಥವಾ ಧಾರ್ಮಿಕ ಘೋಷಣೆಗಳ ಪ್ರದರ್ಶನವನ್ನು ನಿಷೇಧಿಸಿ ಸಂವಿಧಾನದಲ್ಲಿ ಮೌಲ್ಯಗಳನ್ನು ಸಾಧಿಸುವುದು ಮೊದಲ ಹೆಜ್ಜೆಯಾಗಬೇಕು ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ನೇತೃತ್ವದಲ್ಲಿ ಸಾಹಿತಿಗಳು ಮತ್ತು ಪ್ರಗತಿಪರ ಮುಖಂಡರು ಒಗ್ಗೂಡಿ‌ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಮೊಹಮ್ಮದ್ ರೋಷನ್ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ ಕುರಿತು ಹಲವು ಪರ ವಿರೋಧ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಸಾಹಿತಿಗಳು ಮತ್ತು ಪ್ರಗತಿಪರ ಮುಖಂಡರು ಒಗ್ಗೂಡಿ ಜಂಟಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

“ಭಾರತೀಯ ಸಂವಿಧಾನದ ಅನುಚ್ಛೇದ 25 ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಿವಿಧ ಅಂಶಗಳನ್ನು ಒಳಗೊಂಡಿದೆ. ಈ ಅನುಚ್ಛೇದದ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯದ ಹಿತದೃಷ್ಟಿಯಿಂದ ವಿಧಿಸಲಾದ ಸಮಂಜಸವಾದ ನಿರ್ಬಂಧಗಳಿಗೆ ಒಳಪಟ್ಟಿರುತ್ತದೆ. ಇದರರ್ಥ ವ್ಯಕ್ತಿಗಳು ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ಹೊಂದಿದ್ದರೂ, ಅದು ಸಮಾಜದ ಸಾಮರಸ್ಯವನ್ನು ಭಂಗಗೊಳಿಸಬಾರದು. ಇತರರ ಶಾಂತಿ-ಸಾಮರಸ್ಯವನ್ನು ಉಲ್ಲಂಘಿಸಬಾರದು” ಎಂದಿದ್ದಾರೆ.

Advertisements

“ಸಂವಿಧಾನದ ಈ ಹಕ್ಕು ವೈಯುಕ್ತಿಕ ನೆಲೆಯಲ್ಲಿ ಮೂಲಭೂತ ಹಕ್ಕಾಗಿದ್ದು, ವ್ಯಕ್ತಿಗಳು ತಮ್ಮ ಮನೆಯಲ್ಲಿ, ಕುಟುಂಬದಲ್ಲಿ ಅಥವಾ ತಮ್ಮ ಖಾಸಗಿ ಸ್ಥಳಗಳಲ್ಲಿ ಧಾರ್ಮಿಕ ಆಚರಣೆ ಮತ್ತು ದೇವರ ಪೂಜೆಯನ್ನು ಮಾಡಿಕೊಳ್ಳುವ ಮೂಲಕ ತಮ್ಮ ಮೂಲಭೂತ ಹಕ್ಕನ್ನು ಅನುಭವಿಸಲು ಸರ್ವಸ್ವತಂತ್ರರಿದ್ದಾರೆ. ಆದರೆ, ಸರ್ಕಾರಿ ಕಚೇರಿ, ಶಾಲೆ, ಕಾಲೇಜು, ವಿಶ್ವವಿದ್ಯಾಲಯ ಅಥವಾ ಇತರೆ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ದೇವರ ಪ್ರತಿಮೆಯನ್ನು ಸ್ಥಾಪಿಸಿ ಪೂಜಿಸುವುದು ಸಂವಿಧಾನದ ಮತಧರ್ಮ ನಿರಪೇಕ್ಷ(ಸೆಕ್ಯುಲರ್) ತತ್ವಕ್ಕೆ ವಿರುದ್ಧವಾಗಿದ್ದು‌, ಸಂವಿಧಾನದ ಆಶಯಕ್ಕೆ ವಿರುದ್ಧವಾಗುತ್ತದೆ” ಎಂದರು.

“ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ತಮ್ಮ ಕಚೇರಿಯಲ್ಲಿ ಗಣೇಶ ಪ್ರತಿಮೆ ಸ್ಥಾಪಿಸಿ ಪೂಜಿಸಿದ ನಡೆ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆ ತರುವಂಥದ್ದಾಗಿದೆ. ಅವರ ಸದುದ್ದೇಶ ಏನೇ ಇದ್ದರೂ, ಸರ್ಕಾರಿ ಕಚೇರಿಗಳು ಮತಧರ್ಮಗಳ ಆಚರಣೆ ಹಾಗೂ ಪೂಜೆಯ ಕೇಂದ್ರಗಳಲ್ಲ. ಅಲ್ಲಿ ಒಂದು ನಿರ್ದಿಷ್ಟ ಧರ್ಮದ ದೇವರ ಪ್ರತಿಮೆಗಳನ್ನು ಸ್ಥಾಪಿಸುವುದು ಭಾರತದ ಮತಧರ್ಮ ನಿರಪೇಕ್ಷ ರೂಪಿ ಸೆಕ್ಯುಲರ್ ಆಶಯಗಳಿಗೆ ಭಂಗ ತರುತ್ತದೆ” ಎಂದು ಹೇಳಿದರು.

ಡಿಸಿ ಮೊಹಮ್ಮದ್‌ ರೋಷನ್

“ಒಬ್ಬ ಸರ್ಕಾರಿ ಅಧಿಕಾರಿ ಅಥವಾ ನೌಕರ ಸರ್ಕಾರಿ ಕಚೇರಿಯಲ್ಲಿ ಒಂದು ನಿರ್ಧಿಷ್ಟ ಧರ್ಮದ ಪ್ರತಿಮೆ ಸ್ಥಾಪಿಸುವುದು ಸಂವಿಧಾನದ ಬಹುಧರ್ಮೀಯ ಮತ್ತು ಬಹು-ಸಂಸ್ಕೃತಿಯ ತತ್ವಕ್ಕೆ ವಿರುದ್ಧವಾಗಿದೆ. ಎಲ್ಲ ಭಾರತೀಯರೂ ಹಿಂದೂಗಳೆ ಎಂಬ ಹಿಂದುತ್ವವಾದಿಗಳ ಪ್ರಚಾರಕ್ಕೆ ಅಧಿಕೃತ ಮಾನ್ಯತೆ ತಂದುಕೊಂಡುತ್ತದೆ. ಈ ಎಲ್ಲ ಕಾರಣದಿಂದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ನಡೆ ಸದುದ್ದೇಶವೇ ಆಗಿದ್ದರೂ, ದೇಶದ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಅದು ಖಂಡನೀಯ” ಎಂದರು.

“ಸಂವಿಧಾನದ ಮೌಲ್ಯಗಳನ್ನು ಸಾಧಿಸುವತ್ತ ಮೊದಲ ಹೆಜ್ಜೆಯಾಗಿ, ಎಲ್ಲ ಸರ್ಕಾರಿ ಕಚೇರಿ ಮತ್ತು ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಧಾರ್ಮಿಕ ಪೂಜೆ, ದೇವರ ಫೋಟೋಗಳು ಅಥವಾ ಧಾರ್ಮಿಕ ಘೋಷಣೆಗಳ ಪ್ರದರ್ಶನವನ್ನು ನಿಷೇಧಿಸುವ ಬಗ್ಗೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಗದಗ | ಗೋವಿಂದ ಪೈ ಜಯಂತಿ ಸರ್ಕಾರದಿಂದ ಆಚರಿಸಲು ಮನೋಹರ್ ಮೆರವಾಡೆ ಒತ್ತಾಯ

ಪ್ರೊ. ವಿ ಪಿ ನಿರಂಜನಾರಾಧ್ಯ, ಬಸವರಾಜ ಸೂಳಿಭಾವಿ, ಮೂಡ್ನಾಕೂಡ ಚಿನ್ನಸ್ವಾಮಿ, ರಂಜಾನ್ ದರ್ಗಾ‌, ಕೆ. ಶ್ರೀನಾಥ್‌, ಆರ್ ಎಚ್ ನಟರಾಜ, ಬಿ ಸುರೇಶ್‌, ಶ್ರೀಪಾದ ಭಟ್, ಡಾ ಎಚ್ ಎಸ್ ಅನುಪಮಾ ಕವಲಕ್ಕಿ, ಶಿವಸುಂದರ, ಸನತಕುಮಾರ ಬೆಳಗಲಿ, ಡಾ. ಜಿ ವಿ ಆನಂದ ಮೂರ್ತಿ, ಡಾ. ಸಬಿಹಾ ಭೂಮಿಗೌಡ, ಶ್ರೀಪಾದ ಭಟ್ ಬೆಂಗಳೂರು, ಹರೀಶ ಗಂಗಾಧರ, ಡಾ. ರತಿರಾವ್, ಬೊಳುವಾರು ಮಹಮದ್ ಕುಂಞಿ, ಡಾ. ವಿಜಯಾ, ಇಂದಿರಾ ಕೃಷ್ಣಪ್ಪ, ಡಾ. ಸುಶಿ ಕಾಡನಕುಪ್ಪೆ, ಡಾ. ವಸುಂಧರ ಭೂಪತಿ, ಲಕ್ಷ್ಮಣ ಕೊಡಸೆ, ಅನಿಲ ಹೊಸಮನಿ, ನಗರಗೆರೆ ರಮೇಶ, ಇಂದಿರಾ ಹೆಗ್ಗಡೆ, ಎಂ ಅಬ್ದುಲ್ ರೆಹಮಾನ್ ಪಾಷ, ಜಿ ಪಿ ಬಸವರಾಜು, ಕೆ ಪಿ ನಟರಾಜ ಮಧುಗಿರಿ, ಮಲ್ಲಿಗೆ ಸಿರಿಮನೆ, ತುಕಾರಾಮ, ತ್ವಯ್ಯಿಬ್ ಮಂಗಳೂರು, ಭೀಮನಗೌಡ ಪರಗೊಂಡ, ಕೆ ಶಶಿಕಾಂತ, ಮುತ್ತು ಬಿಳಿಯಲಿ, ವಿಜಯಕಾಂತ ಪಾಟೀಲ, ಭಾರತಿ ಮೂಲಿಮನಿ, ಪ್ರಿಯಾಂಕ ಮಾವಿನಕರ್‌, ಸವಿರಾಜ ಆನಂದೂರ, ದಾದಾಪೀರ್ ನವಿಲೇಹಾಳ್, ಎಸ್ ಎಂ ಶಿವಕುಮಾರ, ಶಿವನಕೆರೆ ಬಸವಲಿಂಗಪ್ಪ, ಸತ್ಯಾ ಎಸ್, ಡಾ.ವೆಂಕಟಯ್ಯ ಅಪ್ಪಗೆರೆ, ಟಿ ಕೆ ಗಂಗಾಧರ ಪತ್ತಾರ, ಶಂಕರ ಪಾಟೀಲ ಕಲಬುರಗಿ, ಡಾ. ಸಂಜ್ಯೋತಿ ವಿ ಕೆ, ಮೋಹನರಾಮ ಎನ್ ಕೆ, ಸಿ ಎಂ ಅಂಗಡಿ ದೆಹಲಿ, ಎಂ ನಾಗರಾಜ ಶೆಟ್ಟಿ, ಡಿ ರಾಮಪ್ಪ ಕುಂಬಾರಗೇರಿ, ಎನ್ ಎಸ್ ವೇಣುಗೋಪಾಲ, ಮಲ್ಲಮ್ಮ ಯಾಳವಾರ, ಎಂ ಕೆ ಸಾಹೇಬ್‌, ನಾಗರಾಜ ಹರಪನಹಳ್ಳಿ, ಯಡೂರ ಮಹಾಬಲ, ಪೃಥ್ವಿರಾಜ್ ಬಿ ಎಲ್, ಗಂಗಾಧರ ಹಿರೇಗುತ್ತಿ, ಎಂ ಧರ್ಮರಾಜ ಕಲ್ಯಾಣಿ, ಡಾ ಪ್ರದೀಪ್ ಮಾಲ್ಗುಡಿ, ಸಿ ಎಸ್ ಭೀಮರಾಯ, ವಿಶಾಲ ಮ್ಯಾಸರ, ಶರಣಪ್ಪ ಬಾಚಲಾಪುರ, ಸಿದ್ದಾರ್ಥ ಸಿಂಗೆ, ಟಿ ರತ್ನಾಕರ, ಎನ್ ಬಷಿರುದ್ದಿನ್, ಡಾ. ಪ್ರತಾಪ ಸಿಂಗ್ ತಿವಾರಿ, ಡಾ. ಟಿ ಶ್ರೀನಿವಾಸ ರೆಡ್ಡಿ, ಜೆ ಎಂ ವೀರಸಂಗಯ್ಯ, ಶ್ರೀಶೈಲ್ ಮಾಡ್ಯಾಳ, ಮಮತಾರಾಣಿ ಎ ಎಸ್, ಪ್ರೊ. ಎಸ್ ಜಿ ಚಿಕ್ಕನರಗುಂದ, ಕೆ ವೆಂಕಟರಾಜು, ಅಚುಶ್ರೀ ಬಾಂಗೇರು, ಶ್ರೀಧರ ನಾಯಕ, ಕ ಮ ರವಿಶಂಕರ, ಎಸ್ ಎ ಗಫಾರ, ಸಯ್ಯದ್ ಅಹಮ್ಮದ ಖಾನ್, ಮಂಗಳಾ ಆರ್, ಗುರುಪ್ರಸಾದ್ ಎಂ ಸಿ, ಕೆ ಬಿ ಲಿಂಗನಗೌಡ, ಎಂ ಶಿವಕುಮಾರ, ನೂರ್ ಜಹಾನ್‌, ನಿಂಗಜ್ಜ ಚೌದರಿ, ಕುಮಾರ ಆರ್, ಜೆ ಮಹಾದೇವ, ಅಶ್ವಜಿತ್‌ ದಂಡಿನ, ಎಸ್ ಪ್ರಭಾಕರ, ಚಳ್ಳಕೆರೆ ಬಸವರಾಜ, ದೃವ ಪಾಟೀಲ, ಶ್ರೀನಿವಾಸ ಎನ್, ತನ್ವಿರ್ ಪಾಷಾ, ಕೆ ರಾಮರಡ್ಡಿ, ಶಿವಕುಮಾರ ಬಂಡೋಳಿˌ ಹರಾಲು ಕೊಟ್ರೇಶ್, ತೇಜಸ್ವಿ ಬಿ ನಾಯ್ಕ, ಚಂದ್ರಪ್ರಭ ಕಠಾರಿ, ಎರ್ರೆಮ್ಮ ಬಳ್ಳಾರಿ, ಜಿ ಮೂರ್ತಿ, ನಾಗರಾಜು ಸಬ್ಬನಹಳ್ಳಿ, ತ್ರೀಭುವನೇಶ್ವರಿ, ಸೂರ್ಯ ನಂದನ ಮ ವೆಂ ಚನ್ನಪಟ್ಟಣ,
ಶಂಕರಪುರ ಸುರೇಶ್ ನಂಜನಗೂಡು, ಶಿವಕುಮಾರ್ ಗುಲಘಟ್ಟ, ಡಾ. ಮಲ್ಲೇಶ್ ನಾಯಕ, ಕೇಶವ ಕಟ್ಟೀಮನಿ, ಬಿ ಸಿದ್ದಪ್ಪ,
ಚಿದಾನಂದ ಪೋಳ, ಡಿ ಎಂ ಬಡಿಗೇರ, ಮಲ್ಲಯ್ಯ ಕಮತಗಿ, ದಿನೇಶ್ ಪಟವರ್ಧನ‌, ಕಾಶಪ್ಪ ಚಲವಾದಿ, ಬಸವರಾಜ ಶೀಲವಂತರ, ವೆಂಕಟೇಶ ಎಸ್ ಎಂ, ವೆಂಕಟೇಶ ಎಸ್ ಎಸ್, ಗೀತಾ ಸುರತ್ಕಲ್, ಲಕ್ಷ್ಮೀನಾರಾಯಣ, ಕೆ ಎಸ್ ಪಾರ್ಥಸಾರಥಿ ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X