ಬೆಳಗಾವಿ ತಾಲೂಕಿನ ವಡಗಾಂವ ನಗರದ ಸಿದ್ದಾರೂಢ ಕಾಲೊನಿಗೆ ಹೋಗುವ ರಸ್ತೆ ಕೆಸರು ಗದ್ದೆಯಂತಾಗಿದ್ದು, ಸಾರ್ವಜನಿಕರು, ಸಣ್ಣಮಕ್ಕಳು ರಸ್ತೆ ದಾಟಲು ಪರದಾಡುವಂತಾಗಿದೆ. ಆದರೂ ಅಧಿಕಾರಿಗಳು ಜನಪ್ರತಿನಿಧಿಗಳು ಗಮನಹರಿಸದೆ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದರು.
ಪ್ರತಿ ವರ್ಷವೂ ಮಳೆ ಬಂದು ರಸ್ತೆ ಹಾಳಾದಂತೆಲ್ಲ ಸ್ಥಳೀಯರೇ ಹಣ ಹಾಕಿಕೊಂಡು ರಸ್ತೆ ದುರಸ್ತಿಕಾರ್ಯ ಮಾಡಿಸುತ್ತಾರೆ. ಈ ಕುರಿತು ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಸಿದ್ದಾರೂಢ ಕಾಲೋನಿಯ ನಿವಾಸಿಗಳಾದ ಅಜಯ ಮತ್ತು ನಿಜಾಮುದ್ದಿನ್ ಈ ದಿನ.ಕಾಮ್ ಜೊತೆ ಮಾತನಾಡಿ, “ಪ್ರತಿ ವರ್ಷವೂ ಮಳೆ ಬಂದಾಗ ಈ ರಸ್ತೆಯು ಹಾಳಾಗುತ್ತದೆ. ಸಾರ್ವಜನಿಕರು ಸಂಚರಿಸಲು ಪರದಾಡುವಂತಾಗುತ್ತದೆ. ಹಾಗಾಗಿ ನಾವುಗಳೇ ಹಣ ಸಂಗ್ರಹ ಮಾಡಿ ರಸ್ತೆಯನ್ನು ದುರಸ್ತಿ ಮಾಡಿಕೊಳ್ಳುತ್ತಿದ್ದೇವೆ” ಎಂದು ಹೇಳಿದರು.
“ಸಣ್ಣಮಕ್ಕಳನ್ನು ನಾವುಗಳೇ ರಸ್ತೆ ದಾಟಿಸಬೇಕಾಗಿದೆ. ವಯಸ್ಸಾದವರು ಸಂಚರಿಸಲು ಕಷ್ಟಪಡುವಾಂಗಿದೆ. ಈ ಕುರಿತು ಇಲ್ಲಿನ ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡಾ ಯಾವುದೇ ಪ್ರಯೋಜನವಾಗಿಲ್ಲ. ಆದಷ್ಟು ಬೇಗ ಸಿದ್ದಾರೂಢ ನಗರದ ರಸ್ತೆಯನ್ನು ದುರಸ್ತಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೋಡಬೇಕು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ವಚನ ದರ್ಶನದ ಮೂಲಕ ವಚನ ಸಾಹಿತ್ಯ ವಿಕೃತಿಗೆ ಹುನ್ನಾರ : ಜಾಗೃತಿಗೆ ಮುಂದಾದ ಬಸವ ಅನುಯಾಯಿಗಳು
ರಸ್ತೆ ದುರಸ್ತಿ ಕುರಿತಂತೆ ಮಾಹಿತಿ ಪಡೆಯಲು ಇಲ್ಲಿನ ಜನಪ್ರತಿನಿಧಿಯನ್ನು ಈ ದಿ.ಕಾಮ್ ಸಂಪರ್ಕಿಸಿದೆ. ಆದರೆ, ಅವರು ಕರೆಗೆ ಲಭ್ಯವಾಗಿಲ್ಲ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು