ರಾಮನಗರ | ಸಾಲ ತೀರಿಸಲು ನೆರೆಮನೆಯ ಬಾಲಕಿಯ ಅಪಹರಣಕ್ಕೆ ಯತ್ನ: ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕ

Date:

Advertisements

ಮನೆ ಬಾಡಿಗೆ ಸೇರಿದಂತೆ ಕೈ ಸಾಲ ತೀರಿಸಲು ಪಕ್ಕದ ಮನೆಯಲ್ಲಿನ ಬಾಲಕಿಯನ್ನೇ ಯುವಕನೋರ್ವ ಅಪಹರಿಸಲು ಯತ್ನಿಸಿದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ. ಅಪಹರಣಕ್ಕೆ ಯತ್ನಿಸಿದ ಆಸಾಮಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಾಲಕಿಯನ್ನು ಅಪಹರಿಸುವ ಭರದಲ್ಲಿ ಬಾಲಕಿಯ ಕೈಯಿ, ಬಾಯಿ, ಕಾಲಿಗೆ ಟೇಪಿನಿಂದ ಕಟ್ಟಿ ರಸ್ತೆ ಬದಿ ಎಸೆದಿದ್ದ ಯುವಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ನಗರದ ಚಾಮುಂಡಿಪುರ ಲೇಔಟ್‌ನಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಆರೋಪಿ ಯುವಕ ದರ್ಶನ್ (24)ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisements

ಚಾಮುಂಡಿಪುರ ಲೇಔಟ್‌ನಲ್ಲಿ ವಾಸವಿರುವ ಸಂತೋಷ್ ಎನ್ನುವವರ ಏಳು ವರ್ಷದ ಪುತ್ರಿಯನ್ನು ಪಕ್ಕದ ಮನೆಯಲ್ಲಿಯೇ ಇದ್ದ ದರ್ಶನ್ ಅಪಹರಿಸಲು ಪ್ರಯತ್ನಿಸಿದ್ದಾನೆ. ಮನೆ ಬಾಡಿಗೆ ಸೇರಿದಂತೆ ಕೈ ಸಾಲಗಳು ಸೇರಿ 2 ಲಕ್ಷ ರೂ.ಗಳ ವರೆಗೂ ಸಾಲ ಮಾಡಿದ್ದ ಆರೋಪಿಯು, ಗಣೇಶ ಹಬ್ಬದ ಸಂದರ್ಭದಲ್ಲೇ ಬಾಲಕಿಯನ್ನು ಅಪಹರಿಸಲು ಸಂಚು ರೂಪಿಸಿದ್ದ.

ಚಾಮುಂಡಿಪುರ ಲೇಔಟ್‌ನಲ್ಲಿ ಪೆಂಡಾಲ್ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಅಲ್ಲಿಗೆ ಕುಟುಂಬ ಸಮೇತ ಪೂಜೆಗೆ ತೆರಳಿದ್ದ ಸಂತೋಷ್ ಕುಟುಂಬವನ್ನೆ ಟಾರ್ಗೆಟ್ ಮಾಡಿಕೊಂಡಿದ್ದ. ಆರೋಪಿ, ಬಾಲಕಿಯನ್ನು ಆಟವಾಡಿಸುವುದಾಗಿ ಪುಸಲಾಯಿಸಿದ್ದಾನೆ. ಪರಿಚಯಸ್ಥನಾದ ಕಾರಣಕ್ಕೆ ಬಾಲಕಿ ಕೂಡ ಪ್ರತಿರೋಧ ತೋರಲಿಲ್ಲ.

ಬಾಲಕಿಯ ಕೈಯಿ, ಕಾಲು ಹಾಗೂ ಬಾಯಿಗೆ ಪ್ಲಾಸ್ಟರ್ ಬಿಗಿದು, ಆಕೆಯನ್ನು ಅಪಹರಿಸಲು ಆರೋಪಿ ಮುಂದಾಗಿದ್ದಾನೆ. ಈ ವೇಳೆ ತಮ್ಮ ಮಗಳು ಕಾಣಿಸುತ್ತಿಲ್ಲ ಎಂದು ಪೋಷಕರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಪೆಂಡಾಲ್ ಕೂರಿಸಿದ್ದ 25ಕ್ಕೂ ಹೆಚ್ಚು ಯುವಕರು ಏಕಕಾಲದಲ್ಲಿ ಸುತ್ತಮುತ್ತ ಹುಡುಕಾಡಿದ್ದಾರೆ. ಇದರಿಂದ ಭಯಗೊಂಡ ಆರೋಪಿ ಬಾಲಕಿಯನ್ನು ಸಿಮೆಂಟ್ ಅಂಗಡಿಯೊಂದರ ಮುಂಭಾಗ ಬಿಸಾಡಿ ಓಡಿ ಹೋಗಿದ್ದಾನೆ.

ಯುವಕರ ಗುಂಪು ಬಾಲಕಿಯನ್ನು ಪತ್ತೆ ಮಾಡಿ, ರಕ್ಷಿಸಿದ್ದಾರೆ. ಉಸಿರುಗಟ್ಟುವ ಹಂತದಲ್ಲಿದ್ದ ಬಾಲಕಿ ಚೇತರಿಸಿಕೊಂಡಿದ್ದಾಳೆ. ಇನ್ನೊಂದಷ್ಟು ಯುವಕರು ಆರೋಪಿಯನ್ನು ಬೆನ್ನು ಹತ್ತಿ ಹಿಡಿದಿದ್ದಾರೆ. ಐಜೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮನೆ ಬಾಡಿಗೆ ಕಟ್ಟಬೇಕಿತ್ತು. ಜತೆಗೆ 2 ಲಕ್ಷದಷ್ಟು ಕೈ ಸಾಲ ಮಾಡಿಕೊಂಡಿದ್ದ. ಹೀಗಾಗಿ ಪಕ್ಕದ ಮನೆಯ ಬಾಲಕಿಯನ್ನೇ ಅಪಹರಿಸಿ, ಅವರ ಪೋಷಕರಿಂದ ಹಣ ವಸೂಲಿ ಮಾಡಲು ಸಂಚು ರೂಪಿಸಿದ್ದ ಎಂದು ಪೊಲೀಸರ ತನಿಖೆಯ ವೇಳೆ ತಿಳಿದುಬಂದಿದೆ.

ಇದನ್ನು ಓದಿದ್ದೀರಾ? ಚಿಕ್ಕಮಗಳೂರು | ಅವಾಚ್ಯ ನಿಂದನೆ ಆರೋಪ: ಸರ್ಕಾರಿ ವೈದ್ಯರಿಗೆ ಹಲ್ಲೆ; ಒಪಿಡಿ ಬಂದ್, ಪ್ರತಿಭಟನೆ

ಚಾಮುಂಡಿಪುರ ಲೇಔಟ್‌ನ ಸಿಮೆಂಟ್ ಅಂಗಡಿಯ ಪಕ್ಕದಲ್ಲಿ ಮೂಕರೋದನೆಯೊಂದಿಗೆ ಅಳುತ್ತಾ ಬಿದ್ದಿದ್ದ ಬಾಲಕಿಯ ವಿಡಿಯೋ ಎಲ್ಲೆಡೆ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಕೇವಲ ಏಳು ವರ್ಷದ ಕಂದನಿಗೆ ಟೇಪ್ ಸುತ್ತಿ, ಕತ್ತಲಿನಲ್ಲಿ ಬಿಸಾಡಿದ್ದ ವಿಡಿಯೋ ಎಂಥವರ ಕಲ್ಲು ಹೃದಯವನ್ನೂ ಕಲಕುವಂತಿತ್ತು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X