ರಾಯಚೂರು ತಾಲೂಕಿನ ಜೇಗರಕಲ್ ಮೀರಾಪುರ ಗ್ರಾಮದ ರಸ್ತೆಯು ಪೂರ್ತಿ ಹದೆಗೆಟ್ಟು,ತೆಗ್ಗು ಗುಂಡಿಗೆ ವಾಹನಗಳು ಕೆಟ್ಟು ನಿಲ್ಲುತ್ತಿವೆ. ತಕ್ಷಣವೇ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಜೇಗರಕಲ್ ಮೀರಾಪುರ ಗ್ರಾಮದ ರಸ್ತೆಯು ತೆಗ್ಗುಗುಂಡಿಯಿಂದ ಕೂಡಿದ್ದು ವಾಹನ ಸವಾರರಿಗೆ , ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಅದನ್ನು ಸಂಬಂಧಪಟ್ಟ ಇಲಾಖೆ ದುರಸ್ತಿಗೊಳಿಸಿ, ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ಗ್ರಾಮಕ್ಕೆ ಸಾರಿಗೆ ಬಸ್ ದಿನನಿತ್ಯ ಸಂಚರಿಸಿ ಶಾಲಾ ಕಾಲೇಜು ಮಕ್ಕಳಿಗೆ ನಗರಕ್ಕೆ ಬರುವುದಕ್ಕೆ ಅನುಕೂಲವಾಗುತ್ತಿತ್ತು. ರಸ್ತೆ ಪೂರ್ತಿ ಹದೆಗೆಟ್ಟು, ಸಾರಿಗೆ ಬಸ್‌ಗಳಿಗೂ ಹಾನಿಯಾಗುತ್ತಿದೆ. ಇದರಿಂದಾಗಿ ಗ್ರಾಮಕ್ಕೆ ಬರುವುದಕ್ಕೆ ಅವರು ಹಿಂದೇಟು ಹಾಕುತ್ತಿದ್ದಾರೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

ದಿನನಿತ್ಯ ಬಸ್ ಶಾಲಾ ಮಕ್ಕಳಿಗೆ ಕರೆದುಕೊಂಡು ಹೋಗುವುದಕ್ಕೆ ಬರುತ್ತಿತ್ತು. ರಸ್ತೆ ಗುಂಡಿಗೆ ಕೆಟ್ಟು ನಿಂತು ವಾರ ಕಳೆದರೂ ಬಸ್ಬಾ ರದೆ ಶಾಲಾ ಕಾಲೇಜು ಮಕ್ಕಳಿಗೆ ನಗರಕ್ಕೆ ಹೋಗಲು ಸಮಸ್ಯೆ ಎದುರಾಗಿದೆ. ಇದರಿಂದ ಮಕ್ಕಳು ಶಿಕ್ಷಣದಿಂದ ದೂರು ಉಳಿಯುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ ? ರಾಯಚೂರು | ಬೀಳುವ ಹಂತಕ್ಕೆ ತಲುಪಿದ ಗಬ್ಬೂರು ಸರ್ಕಾರಿ ಪ್ರೌಢಶಾಲೆಯ ಕಟ್ಟಡ
ಈ ಬಗ್ಗೆ ಗ್ರಾಮಸ್ಥ ಶಿವುಕುಮಾರ ಮಾತನಾಡಿ, ರಸ್ತೆಯಲ್ಲಿ ಗುಂಡಿಗಳೋ, ಗುಂಡಿಗಳಲ್ಲಿ ರಸ್ತೆಯೋ ಎನ್ನುವ ಭೀತಿಯಾಗಿದೆ. ಮಳೆಗಾಲದ ಸಮಯದಲ್ಲಿ ತೆಗ್ಗುಗಳಲ್ಲಿ ನೀರು ನಿಂತು ಅಪಘಾತಗಳು ಸಂಭವಿಸಿವೆ. ಸಾರಿಗೆ ಬಸ್ ದಿನನಿತ್ಯ ಬೆಳಗ್ಗೆ ಶಾಲಾ ಕಾಲೇಜು ಮಕ್ಕಳನ್ನು ಕರೆದುಕೊಂಡು ನಗರಕ್ಕೆ ಸಂಚರಿಸುತ್ತಿತ್ತು. ಬಸ್ ಕೆಟ್ಟು ಹೋಗಿ ವಾರವಾದರೂ ಬಸ್ ಬಾರದೆ ಮಕ್ಕಳಿಗೆ ಹೋಗುವುದಕ್ಕೆ ಸಮಸ್ಯೆ ಎದುರಾಗಿದೆ. ಡಿಪೋದವರನ್ನು ಕೇಳಿದರೆ ಆ ರಸ್ತೆಗೆ ಓಡಾಡುವ ಬಸ್‌ಗಳು ಕೆಟ್ಟು ಹೋಗುತ್ತಿವೆ. ರಸ್ತೆ ಗುಂಡಿಗೆ ಬಸ್‌ಗಳು ಪಲ್ಟಿ ಆಗುವ ಸಾಧ್ಯತೆಯಿರುತ್ತದೆ. ಘಟನೆಗಳು ಸಂಭವಿಸಿದರೆ ಯಾರ ಹೊಣೆ ಎಂದು ಅಧಿಕಾರಿಗಳು ಹೇಳುತ್ತಾರೆ ಎಂದು ಹೇಳಿದರು.

ಈ ಹಿನ್ನೆಲೆಯಲ್ಲಿ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಲು ಆಗ್ರಹಿಸಿ ಗ್ರಾಮದ ಶಾಲಾ ಮಕ್ಕಳು ರಾಯಚೂರು ಅಪರ ಜಿಲ್ಲಾಧಿಕಾರಿ ಶಿವಪ್ಪ ಭಜಂತ್ರಿ ಅವರಿಗೆ ಮನವಿ ಸಲ್ಲಿಸಿದರು.