ಹಾವೇರಿ | ಸಾಹಿತ್ಯವು ಸಮಾಜಮುಖಿ ಚಿಂತನೆಗಳನ್ನು ಪ್ರತಿಪಾದಿಸಬೇಕು: ಡಾ.ಎಂ.ಈ.ಶಿವಕುಮಾರ

Date:

Advertisements

ಖ್ಯಾತ ಕವಿ ದೇವರಾಜ್ ಹುಣಸಿಕಟ್ಟಿ ಅವರ ಹಕೀಮನೊಬ್ಬನ ತಕರಾರು ಎಂಬ ಕವನ ಸಂಕಲನ ಬಿಡುಗಡೆ ಹಾಗೂ ಜಿಲ್ಲಾಮಟ್ಟದ ಕವಿಗೋಷ್ಠಿಯು ಮಾತೋಶ್ರೀ ಮಹದೇವಕ್ಕ ಮಂಗಳ ವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ಮತ್ತು ನಲ್ಬೆಳಗು ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಯಿತು.

ಖ್ಯಾತ ಬರಹಗಾರರಾದ ಡಾ. ಎಂ.ಈ. ಶಿವಕುಮಾರ ಹೊನ್ನಾಳಿಯವರು ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ, ಕವಿಗಳಲ್ಲಿ ತಾಳ್ಮೆ ಅಗತ್ಯ. ಕವಿಗಳು ಸಾರ್ವತ್ರಿಕವಾಗಿರಬೇಕು. ಸಾಹಿತ್ಯ ಸಮಾಜಮುಖಿಯಾದ ಚಿಂತನೆಗಳನ್ನು ಪ್ರತಿಪಾದಿಸಿದಾಗ ಮಾತ್ರ ಜನ ಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ. ಅಸಹನೆಗಳನ್ನು ಬೇರುಸಮೇತ ಕಿತ್ತುಹಾಕಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಾಹಿತ್ಯ ಕ್ಷೇತ್ರದ ಮೂಲಕ ಸಮಾಜದ ಓರೆಕೋರೆಗಳನ್ನ ತಿದ್ದುವ ಶಕ್ತಿ ಬರುತ್ತದೆ. ಇಂತಹ ಸಾಧ್ಯತೆಗಳನ್ನು ಕವಿ ದೇವರಾಜ ತಮ್ಮ ಕೃತಿಯ ಕವನಗಳ ಮೂಲಕ ವ್ಯಕ್ತ ಪಡಿಸಿದ್ದಾರೆ. ಇಂದಿನ ಬರಹಗಾರರು, ಸಾಹಿತಿಗಳು ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಬೇಕು ಎಂದು ತಿಳಿಸಿದರು.

Advertisements

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಮಾತನಾಡುತ್ತಾ, “ಕವಿತೆಗಳಲ್ಲಿ ನಿರಂತರ ಸಾಹಿತ್ಯ ಕೃಷಿ ಇರಬೇಕು. ಮೊನಚು, ನೇರ, ದಿಟ್ಟತನ, ವೈಚಾರಿಕ ಪ್ರಜ್ಞೆಯು ದೇವರಾಜ್ ಹುಣಸಿಕಟ್ಟಿಯವರ ಕಾವ್ಯದಲ್ಲಿದೆ. ಬಂಡಾಯ ಸಾಹಿತ್ಯದ ಮುಂದಣ ಹೆಜ್ಜೆಗಳನ್ನು ಇವರ ಕವನದಲ್ಲಿ ನಾವು ಕಾಣಲು ಸಾಧ್ಯ” ಎಂದು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಈ ರೀತಿಯ ಸಾಮಾಜಿಕ ಬದ್ಧತೆ ಕ್ಷೀಣಿಸುತ್ತಿದೆ ಎಂದು ವಿಷಾದಿಸಿದ ಅವರು, ಸಮಾಜಮುಖಿ ಆಗಿರಬೇಕಾದ ಇಂದಿನ ಅನೇಕ ಸಾಹಿತಿಗಳಲ್ಲಿ ಸಾಮಾಜಿಕ ಬದ್ಧತೆ ಕಾಣದಾಗಿದೆ. ಕೆಟ್ಟಿರುವ ಸಮಾಜದ ವ್ಯವಸ್ಥೆ ಬಗ್ಗೆ ಮಾತನಾಡುವಲ್ಲಿ ನಿಷ್ಕ್ರಿಯರಾಗಿದ್ದಾರೆ ಎಂದರು.

ಯಾವುದೇ ಕವನ ಸಾಹಿತ್ಯವಾಗಲಿ ಸ್ವಯಂಪ್ರೇರಿತವಾಗಿ ಅಭ್ಯಾಸ ಮಾಡುವುದರಿಂದ ಮತ್ತು ಅನುಭವದಿಂದ ಮಾತ್ರ ಬರಲು ಸಾಧ್ಯವೆಂದು ತಿಳಿಸಿದರು.

ಕಾವ್ಯ ಮತ್ತು ಸಾಹಿತ್ಯಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಬಹುದು. ಕವಿಗಳನ್ನು, ಲೇಖಕರನ್ನು ಓದಿನಲ್ಲಿ ತೊಡಗಿಸುವುದು ಇಂತಹ ಕವಿಗೋಷ್ಠಿಗಳ ಉದ್ದೇಶವಾಗಿದೆ. ಆಧುನಿಕ ಯುಗದಲ್ಲಿ ಎಲ್ಲರೂ ಆಕರ್ಷಣೆಗೆ ಒಳಗಾಗಿರುವುದರಿಂದ ಕವನಗಳನ್ನು ಕೇಳುವವರ ಸಂಖ್ಯೆಯೇ ಕಡಿಮೆಯಾಗಿದೆ ಎಂದು ವಿಷಾದಿಸಿದರು.

ಸಾಹಿತಿಗಳಾದ ದೀಪಾ ಗೋನಾಳ ಕೃತಿ ಪರಿಚಯ ಮಾಡಿದರು. ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ 20ಕ್ಕೂ ಹೆಚ್ಚು ಕವಿಗಳು ತಮ್ಮ ಸ್ವರಚಿತ ಕವನ ವಾಚಿಸಿ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮದ ಮೊದಲು ನಾಗರತ್ನ ಚಲವಾದಿ ಮತ್ತು ಪೂರ್ಣಿಮಾ , ಗೌತಮ್ ಹಾಗೂ ಪ್ರೀತಮ್ಮ ಸಾವಕ್ಕನವರ ಇವರುಗಳ ಮನಮೋಹಕ ಸ್ಯಾಕ್ಸೋಫೋನ್ ವಾದನ ಮೆರಗು ನೀಡಿತು.

ಕಾರ್ಯಕ್ರಮದಲ್ಲಿ ಅಭಿಲಾಷ್.ಕೆ ಬ್ಯಾಡಗಿ, ಕಲಾವಿದ ಬಸವರಾಜ ಸಾವಕ್ಕನವರ, ಕವಿ ಶಕುಂತಲಾ. ಎಫ್. ಕೆ. ಸೋಮಣ್ಣ ಲಮಾಣಿ, ಕಸಾಪ ನಿಕಟಪೂರ್ವ ಅಧ್ಯಕ್ಷರಾದ ವೀರೇಶ್ ಜಂಬಗಿ, ಕೃತಿಕಾರ ದೇವರಾಜ ಹುಣಸಿಕಟ್ಟಿ, ಕಲಾವಿದ ನಾಮದೇವ ಕಾಗದಗಾರ, ಕವಿ ಮಾರುತಿ ತಳವಾರ, ದಾಕ್ಷಾಯಣಿ ಉದಗಟ್ಟಿ, ಮುಂತಾದವರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X