ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ತಂದೆ ಇಂದು ಬೆಳಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮುಂಬೈನ ಬಾಂದ್ರಾದಲ್ಲಿರುವ ಕಟ್ಟಡವೊಂದರ ಏಳನೇ ಮಹಡಿಯಿಂದ ಅನಿಲ್ ಅರೋರಾ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟಿಯ ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಮಲೈಕಾ ಅರೋರಾ ನಿವಾಸಕ್ಕೆ ತಲುಪಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಯುವತಿ ಆತ್ಮಹತ್ಯೆ : ತಲೆ ಮರೆಸಿಕೊಂಡ ಪ್ರೇಮಿ
ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಘಟನೆ ನಡೆದಾಗ ಮುಲೈಕಾ ತನ್ನ ನಿವಾಸದಲ್ಲಿ ಇರಲಿಲ್ಲ ಎಂದು ವರದಿಯಾಗಿದೆ.
ಮಲೈಕಾ ಅರೋರಾಗೆ 11 ವರ್ಷವಿದ್ದಾಗ ಪೋಷಕರು ವಿಚ್ಛೇದನ ಪಡೆದಿದ್ದಾರೆ. ಅದಾದ ಬಳಿಕ ಮಲೈಕಾ ಮತ್ತು ಅವರ ತಂಗಿ ಅಮೃತಾ ರಾವ್ ತಾಯಿ ಜಾಯ್ಸ್ ಪಾಲಿಕಾರ್ಪ್ ಜೊತೆ ಬೆಳೆದಿದ್ದಾರೆ.
VIDEO | Actor-model Malaika Arora's father commits suicide by jumping from building in Mumbai: Police. Visuals from outside the residence of Malaika Arora. More details are awaited.#MumbaiNews
— Press Trust of India (@PTI_News) September 11, 2024
(Full video available on PTI Videos – https://t.co/n147TvqRQz) pic.twitter.com/7xEue5RhKO
