ಬೇಲೂರು | 20 ಸೀಟುಗಳಿಂದ ರಾಜ್ಯದ ಲೂಟಿಯಲ್ಲಿ ಪಾಲು ಬಯಸುತ್ತಿದೆ ಜೆಡಿಎಸ್‌: ಮೋದಿ

Date:

Advertisements

ಕಳೆದ ಕೆಲವು ತಿಂಗಳಿನಿಂದ ಹಲವು ಬಾರಿ ಕರ್ನಾಟಕ್ಕೆ ಬಂದಿದ್ದೇನೆ. ಹಲವು ಜಿಲ್ಲೆಗಳಿಗೂ ಭೇಟಿ ನೀಡಿದ್ದೇನೆ. ನನ್ನ ಕರ್ನಾಟಕ ಪ್ರವಾಸದ ಮೂಲಕ ಕಂಡುಕೊಂಡಿರುವ ವಿಚಾರವೆಂದರೆ, ಈ ಬಾರಿಯೂ ಬಹುಮತದ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಹಾಸನ ಜಿಲ್ಲೆಯ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, “ಮೊದಲಿಗೆ, ಕರ್ನಾಟಕದ ಮಠ ಪರಂಪರೆ ಮತ್ತು ಇಲ್ಲಿನ ಸಂತ ಶ್ರೇಷ್ಠರಿಗೆ ಗೌರವ ನಮನ ಸಲ್ಲಿಸುತ್ತೇನೆ. ಆದಿಚುಂಚನಗಿರಿ ಮಠಕ್ಕೂ ಗೌರವ ನಮನಗಳು ಹಾಗೂ ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರಿಗೆ ಗೌರವದ ಶ್ರದ್ಧಾಂಜಲಿ ಸಲ್ಲಿಸುತ್ತೇನೆ” ಎಂದರು.

“ಕೆಲವು ದಶಕಗಳ ಕಾಲದ ಅನೈತಿಕ ಘಟ ಬಂಧನ, ಅಸ್ಥಿರ ಸರ್ಕಾರಗಳ ಆಡಳಿತ ಕೊನೆಗೊಳಿಸಬೇಕೆಂದು ಈ ಬಾರಿ ಕರ್ನಾಟಕದ ಜನತೆ ನಿಶ್ಚಯಿಸಿದ್ದಾರೆ. ದೇಶದ ಯಾವೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್‌ ಆಡಳಿತದಲ್ಲಿದೆ  ಅಲ್ಲಿನ ಕಾಂಗ್ರೆಸ್‌ ನಾಯಕರ ನಡುವಿನ ಒಳಜಗಳ ಯಾವಾಗಲೂ ಸುದ್ದಿಯಲ್ಲಿದೆ. ಇದರಿಂದ ರಾಜಸ್ಥಾನ ಮತ್ತು ಛತ್ತೀಸ್‌ಘಡ್‌ ರಾಜ್ಯಗಳ ಜನತೆ ಸಂಪೂರ್ಣ ಭ್ರಮನಿರಸವಾಗಿದ್ದು, ಅಲ್ಲಿನ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ಆ ರಾಜ್ಯಗಳಲ್ಲಿ ಕಾಂಗ್ರೆಸ್‌ ನೀಡಿದ ಎಲ್ಲ ಗ್ಯಾರಂಟಿಗಳು ಸುಳ್ಳಿನ ಕಂತೆಗಳಾಗಿವೆ” ಎಂದು ನರೇಂದ್ರ ಮೋದಿ ಹಳಿದರು.

Advertisements

“ಕಾಂಗ್ರೆಸ್‌ನಲ್ಲಿ ಆಂತರಿಕ ಗುದ್ದಾಟ ಪರಸ್ಪರ ಹೋರಾಟಗಳು ಎಂದಿಗೂ ಇದ್ದದ್ದೇ. ಆದರೆ, ಜೆಡಿಎಸ್‌ ಕೂಡ ಅಧಿಕಾರದ ಕನಸು ಕಾಣುತ್ತಿದೆ. ರಾಜ್ಯದಲ್ಲಿ 15ರಿಂದ 20ಸೀಟುಗಳನ್ನು ಪಡೆದುಕೊಂಡರೆ ಸಾಕು ರಾಜ್ಯದ ಲೂಟಿಯಲ್ಲಿ ಪಾಲು ಪಡೆಯಬಹುದೆಂದು ತವಕಿಸುತ್ತಿದೆ” ಎಂದರು.

“ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು ಮೇಲ್ನೋಟಕ್ಕೆ ವಿರೋಧಿಗಳಂತೆ ಕಚ್ಚಾಡುತ್ತಾರೆ. ಆದರೆ, 2018ರ ಚುನಾವಣೆ ಸಂದರ್ಭದಲ್ಲಿ ಪರಸ್ಪರ ಒಬ್ಬರನ್ನೊಬ್ಬರು ದೂರುತ್ತಾ, ತೆಗಳುತ್ತಾ ಆಪಾದನೆಗಳನ್ನು ಮಾಡುತ್ತಿದ್ದರು. ಆದರೆ, 2018ರ ಚುನಾವಣೆಗೆ ಮುನ್ನವೇ ಜೆಡಿಎಸ್‌ ಕಾಂಗ್ರೆಸ್‌ ನಾಯಕರು ಒಬ್ಬರಿಗೊಬ್ಬರು ಕೈ ಕೈ ಕುಲುಕಿಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದರು” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿ ಖಜಾನೆ ತುಂಬಿದ್ದು, ದುಡ್ಡು ಕೊಟ್ಟು ಜನರನ್ನು ಕರೆತರುತ್ತದೆ: ಮಲ್ಲಿಕಾರ್ಜುನ ಖರ್ಗೆ

“ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೇಲ್ನೋಟಕ್ಕೆ ಈ ರೀತಿ ಕಚ್ಚಾಡುತ್ತಾರೆ. ಆದರೆ, ಅವರಿಗೆ ಒಳ ಒಪ್ಪಂದಗಳಿರುತ್ತವೆ. ಸಂಸತ್ತಿನಲ್ಲಿಯೂ ಕೂಡ ಯಾವುದೇ ವಿಚಾರಗಳ ಕುರಿತು ಚರ್ಚಿಸುವ ಹೊರತಾಗಿ ಒಬ್ಬರಿಗೊಬ್ಬರು ಬೆಂಬಲಿಸಿಕೊಂಡು ಕೂರುತ್ತಾರೆ. ಹಾಗಾಗಿ ನೀವು ಜೆಡಿಎಸ್‌ಗೆ ನೀಡುವ ಮತಗಳು ಕಾಂಗ್ರೆಸ್‌ನ ಖಾತೆಗೆ ಹೋಗುತ್ತವೆ” ಎಂದರು. “ಕಾಂಗ್ರೆಸ್‌ಗೆ ಮತ ನೀಡುವುದಾದರೆ ಅದು ಕರ್ನಾಟಕದ ಅಭಿವೃದ್ಧಿಗೆ ಬ್ರೇಕ್‌ ಹಾಕಿದಂತೆ. ಕರ್ನಾಟಕದ ವಿಕಾಸಕ್ಕೆ ಹಿನ್ನಡೆ ಉಂಟಾದಂತೆ. ಕರ್ನಾಟಕದ ಜನತೆ ನಮ್ಮ ಭವಿಷ್ಯದ ಭಾಗ್ಯವನ್ನು ಕಾಂಗ್ರೆಸ್‌ ಕೈಗೆ ಇಡುವಂತೆಯೂ ಇಲ್ಲ. ಏಕೆಂದರೆ ಈ ಮೊದಲು ಕಾಂಗ್ರೆಸ್‌, ಜನತೆಯ ಹಕ್ಕಿನ ಪ್ರತಿಯೊಂದು ರೂಪಾಯಿಯಲ್ಲಿ 85 ಪೈಸೆ ಲೂಟಿಮಾಡುತ್ತಿತ್ತು” ಎಂದು ಹೇಳಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X