ಗಣೇಶ ವಿಸರ್ಜನೆ ವೇಳೆ ಪಟಾಕಿ ಸಿಡಿದ ಪರಿಣಾಮ ಯುವಕನೋರ್ವ ಗಂಭೀರ ಗಾಯಗೊಂಡು ಕಣ್ಣು ಕಳೆದುಕೊಂಡ ದಾರುಣ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಮಾರುತಿ ವೃತ್ತದಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ಯುವಕನನ್ನು ಕಲ್ಲೇಶ್ ಸುಲೇಕಿ (26) ಎಂದು ಗುರುತಿಸಲಾಗಿದೆ. ಈತ ವಾರ್ಡ್ 1ರ ಮಾರುತಿ ನಗರದ ನಿವಾಸಿ ಎಂದು ತಿಳಿದು ಬಂದಿದೆ.
ನಿನ್ನೆ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಪಟಾಕಿ ಕಣ್ಣಿಗೆ ಸಿಡಿದು ಕಣ್ಣು ಸಂಪೂರ್ಣ ಛಿದ್ರವಾಗಿದ್ದು, ತಲೆಗೂ ಕೂಡ ತೀವ್ರ ಗಾಯವಾಗಿದೆ. ಘಟನೆ ನಡೆದ ತಕ್ಷಣವೇ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರ ಗಾಯಗೊಂಡ ಕಾರಣ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಗಣೇಶ ವಿಸರ್ಜನೆಯ ಐದನೇ ದಿನದ ಅಂಗವಾಗಿ ನಗರದಲ್ಲಿ ಎರಡು ಮೂರು ಗಣಪತಿ ಮೂರ್ತಿ ವಿಸರ್ಜನೆಯ ಮಾರುತಿ ವೃತ್ತದಲ್ಲಿ ಸೇರಿದಾಗ ಭಾರಿ ಪ್ರಮಾಣದಲ್ಲಿ ಡಿಜೆ ಸದ್ದಿಗೆ ಯುವಕರು ಕುಣಿಯುತ್ತಿದ್ದಾಗ, ಪಟಾಕಿ ಕೂಡ ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯಯ ಕಣ್ಣಿಗೆ ಸಿಡಿದು ಗಂಭೀರ ಗಾಯಗೊಂಡಿದ್ದಾನೆ ಎನ್ನಲಾಗಿದೆ.
ಯುವಕನು ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಸ್ಥಳೀಯರಿಂದ ತಿಳಿದು ಬಂದಿದೆ.
