ಮಂಡ್ಯ ಜಿಲ್ಲೆಯ ನಾಗಮಂಗಲ ಪಟ್ಟಣದಲ್ಲಿ ಬದರಿಕೊಪ್ಪಲಿನ ಗಣಪತಿ ಮೆರವಣಿಗೆಯ ವೇಳೆ ಹಿಂದೂ ಮತ್ತು ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದ್ದು, ಗಲಾಟೆ ತಾರಕ್ಕೇರಿದೆ. ಈ ಸಂದರ್ಭದಲ್ಲಿ ಜಗಳ ತೀವ್ರಗೊಂಡಿದ್ದರಿಂದ ಪೊಲೀಸರು ಲಾಠಿ ಪ್ರಹಾರ ನಡೆಸಿ ಎರಡು ಗುಂಪುಗಳನ್ನು ಚದುರಿಸಲು ಪ್ರಯತ್ನಿಸಿದ್ದಾರೆ.
ಮೆರವಣಿಗೆ ಮೈಸೂರು ರಸ್ತೆಗೆ ಬಂದಾಗ, ಹಿಂದೂ ಯುವಕರು “ಜೈ ಶ್ರೀರಾಮ್” ಘೋಷಣೆ ಕೂಗುತ್ತಿದ್ದರೆ, ಮುಸ್ಲಿಂ ಯುವಕರು “ಅಲ್ಲಾಹು ಅಕ್ಬರ್” ಎಂದು ಕೂಗುತ್ತಿದ್ದರು. ಈ ವೇಳೆ ಕಲ್ಲು, ಬಾಟಲಿ ತೂರಾಟ ನಡೆಯಿತು. ಜನರು ಗಾಬರಿಗೊಂಡು ದಿಕ್ಕಾಪಾಲಾಗಿ ಓಡಿದ ಘಟನೆ ನಡೆದಿದೆ.
ಪೊಲೀಸರು ಹಲವಾರು ಬಾರಿ ಲಾಠಿ ಪ್ರಹಾರ ಮಾಡಿದರೂ, ಗುಂಪುಗಳು ಚದುರದೇ ಪರಸ್ಪರ ಘೋಷಣೆ ಕೂಗಿದ್ದಾರೆ. ಘಟನೆಯ ನಂತರ ಪಟ್ಟಣದ ಅಂಗಡಿ-ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದು, ಪೂರ್ತಿ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಬ್ರಹ್ಮನಗಿರಿ, ಟಿ. ಮರಿಯಪ್ಪ ಸರ್ಕಲ್, ಮತ್ತು ಪೊಲೀಸ್ ಠಾಣೆ ಬಳಿ ಮುಸುಕಿನ ಕತ್ತಲಿನಲ್ಲಿ ಪಟ್ಟಣದಲ್ಲಿ ಕಲ್ಲು ತೂರಾಟ ಮಾಡಿ, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಕಡಿಮೆ ಸಂಖ್ಯೆಯಲ್ಲಿ ಪೊಲೀಸರು ಇದ್ದ ಕಾರಣ ಗಲಾಟೆಯನ್ನು ಹತೋಟಿಗೆ ತರಲು ವಿಫಲರಾದರು.
ಹೆಚ್ಚಿನ ಪೊಲೀಸ್ ಸಿಬ್ಬಂದಿಯೊಂದಿಗೆ ಎಸ್ಪಿ ನಾಲದಂಡಿ ಸ್ಥಳಕ್ಕೆ ಆಗಮಿಸಿದ್ದರೂ, ಗಲಾಟೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇದರಿಂದಾಗಿ ಮಂಡ್ಯ ರಸ್ತೆ ಮತ್ತು ಮೈಸೂರು ರಸ್ತೆ, ತುಮಕೂರು ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಯಿತು.
144 ಸೆಕ್ಷನ್ ಜಾರಿ: ಈವರೆಗೆ 28 ಮಂದಿಯ ಬಂಧನ
ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದಲ್ಲದೆ ಮಾರಕಾಸ್ತ್ರಗಳನ್ನು ಹಿಡಿದು ಓಡಾದಿದ್ದರು. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು ಹಲವು ಅಂಗಡಿಗಳು, ಅಂಗಡಿ ಮುಂದೆ ನಿಲ್ಲಿಸಿದ್ದ ಬೈಕ್ ಗಳಿಗೆ ಬೆಂಕಿ ಹಚ್ಚಿದ್ದರು. ಇದರಿಂದ ಕೆರಳಿದ ಮತ್ತೊಂದು ಸಮುದಾಯದವರು ಸಹ ಬೆಂಕಿ ಹಚ್ಚಿದ್ದಾರೆ.
ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಎರಡು ಸಮುದಾಯದ 28 ಮಂದಿಯನ್ನು ಬಂಧಿಸಿ ಠಾಣೆಗೆ ಕರೆತಂದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ಬಳಿಕ ಮಂಡ್ಯದ ನಾಗಮಂಗಲದ ಬದರಿಕೊಪ್ಪಲಿನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂ ಮುನ್ನೆಚ್ಚರಿಕಾ ಕ್ರಮವಾಗಿ ಪಟ್ಟಣದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ.
ನಾಗಮಂಗಲದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಜಿಲ್ಲಾಧಿಕಾರಿ ಡಾ. ಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ನಾಗಮಂಗಲದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿರುವುದರಿಂದ ಸೆಪ್ಟೆಂಬರ್ 14ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದರು.
ಇನ್ನು ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿಪಿ ಹಿತೇಂದ್ರ ಅವರು ಭೇಟಿ ನೀಡಿ, ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಹೆಚ್ಚಿನ ಪೊಲೀಸ್ ಸಿಬ್ಬಂದಿಯೊಂದಿಗೆ ಎಸ್ಪಿ ನಾಲದಂಡಿ ಸ್ಥಳಕ್ಕೆ ಆಗಮಿಸಿದ್ದರೂ, ಗಲಾಟೆಯನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಇದರಿಂದಾಗಿ ಮಂಡ್ಯ ರಸ್ತೆ ಮತ್ತು ಮೈಸೂರು ರಸ್ತೆ, ತುಮಕೂರು ರಸ್ತೆಗಳಲ್ಲಿ ಸಂಚಾರ ಬಂದ್ ಮಾಡಲಾಯಿತು.
ಎಸ್ಪಿ ನಾಲದಂಡಿ
ಅಲ್ಲ…. ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ
ಜೈ ಶ್ರೀ ರಾಂ ಗ್ಯಾಂಗುಗಳು ಅಲ್ಲಾಹು ಅಕ್ಬರ್ ಗ್ಯಾಂಗುಗಳನ್ನ ಕಿಚಾಯಿಸುವುದು ಶಿವಮೊಗ್ಗ ಹುಬ್ಬಳ್ಳಿ ಮಂಗಳೂರಿನಲ್ಲೆಲ್ಲ ನಡೆಯುತ್ತಲೇ ಇದೆ.ನಾನಂತೂ ಎರಡೂ ಗ್ಯಾಂಗುಗಳ ಪರ ಇಲ್ಲ.ಇಂದಿನ ಪರಿಸ್ಥಿತಿಯಲ್ಲಿ ಜೈ ಶ್ರೀ ರಾಂ ವಿಷಜಂತುಗಳ ಗ್ಯಾಂಗುಗಳನ್ನ ಬಗ್ಗು ಬಡಿಯಲೇ ಬೇಕು.