ಒಂದು ವಾರದಿಂದ ಸಮನಾಂತರ ಕಾಯ್ದುಕೊಂಡಿದ್ದ ಭಾರತೀಯ ಷೇರು ಮಾರುಕಟ್ಟೆಯು, ಇಂದು ದಾಖಲೆ ಮಟ್ಟದ ಏರಿಕೆ ಕಂಡಿದೆ. ವಿದೇಶಿ ಮಾರುಕಟ್ಟೆಯ ಏರಿಳಿತದ ಪ್ರಭಾವಕ್ಕೆ ಸಿಲುಕಿ ಕುಟಿಂತದ ಹಾದಿ ಹಿಡಿದಿದ್ದ ಆರ್ಥಿಕ ಸ್ಥಿತಿಗತಿಯು, ದಿಢೀರ್ ಏರಿಕೆ ಕಂಡಿದ್ದು, ಹೂಡಿಕೆದಾರರಿಗೆ ರಿಲೀಫ್ ತಂದುಕೊಟ್ಟಿದೆ.
ಕಳೆದ ಕೆಲವು ದಿನಗಳಿಂದ ಸೆನ್ಸೆಕ್ಸ್ 81,694ರ ಆಸುಪಾಸಿನಲ್ಲೇ ವಹಿವಾಟು ನಡೆಸುತ್ತಿತ್ತು. ಗುರುವಾರ, +1439.55(1.77%)ರ ಅಂಕಗಳೊಂದಿಗೆ 82,962.71ಕ್ಕೆ ಏರಿಕೆ ಕಂಡಿದೆ.
ಹಾಗಯೇ, NIFTY50 ಕೂಡ 25,000 ಅಂಕಳನ್ನು ಮೀರದೆ, ಆಸುಪಾಸಿನಲ್ಲೇ ವಹಿವಾಟು ನಡೆಸುತ್ತಿತ್ತು. ಆದರೆ, ಗುರುವಾರ +470.45 (1.89%) ಅಂಕಗಳೊಂದಿಗೆ 25,388.90ಕ್ಕೆ ಏರಿಕೆಯಾಗಿದೆ.
ಗುರುವಾರ ಏರಿಕೆ ಕಂಡ ಷೇರುಗಳು
Company | LTP (₹) | Gain (₹) | Gain (%) |
Hindalco Inds. | 676.2 | 28.5 | 4.4 |
Bharti Airtel | 1,646.75 | 68.95 | 4.37 |
NTPC | 404.85 | 15.2 | 3.9 |
Shriram Finance | 3,400.75 | 120.85 | 3.68 |
M & M | 2,740.90 | 86.65 | 3.26 |
Eicher Motors | 4,875.00 | 148.35 | 3.14 |
O N G C | 294.05 | 8.75 | 3.07 |
Wipro | 530.05 | 15.70 | 3.05 |
Adani Ports | 1,472.60 | 42 | 2.94 |
JSW Steel | 954.8 | 27.05 | 2.92 |