ಸಿಜೆಐ ಮನೆಗೆ ಮೋದಿ ಭೇಟಿ ಹಿಂದಿದೆಯೇ ರಾಜಕೀಯ ದುರುದ್ದೇಶ?

Date:

Advertisements
ಸಿಜೆಐ ಚಂದ್ರಚೂಡ್ ಅವರು ಮಹಾರಾಷ್ಟ್ರ ಮೂಲದವರು. ಆ ರಾಜ್ಯದಲ್ಲಿ ಗಣಪತಿ ಪೂಜೆ ಬೇರೆಲ್ಲಡೆಗಿಂತ ಜನಪ್ರಿಯ ಹಬ್ಬ. ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಇಂತಹ ಸಮಯದಲ್ಲಿ ಚಂದ್ರಚೂಡ್ ಮನೆಗೆ ಮಹಾರಾಷ್ಟ್ರದ ಮರಾಠಿಗರ ಉಡುಗೆ ಧರಿಸಿ ಮೋದಿ ಅವರು ಭೇಟಿ ನೀಡಿದ್ದಾರೆ. ಪೂಜೆಯಲ್ಲಿ ಭಾಗವಹಿಸಿದ್ದಾರೆ. ಇದು, ಮಹಾರಾಷ್ಟ್ರ ಜನರಿಗೆ ರಾಜಕೀಯ ಸಂದೇಶವನ್ನೂ ನೀಡುತ್ತದೆ...

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ಗಣಪತಿ ಪೂಜೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದಾರೆ. ಸಿಜೆಐ ಅವರ ಮನೆಗೆ ಮೋದಿ ಭೇಟಿ ನೀಡಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ನೆಟ್ಟಿಗರಂತು ಮೋದಿ ಮತ್ತು ಸಿಜೆಐ ಇಬ್ಬರನ್ನು ತರಾಟೆಗೆ ತೆಗೆದುಕೊಂಡಿದಾರೆ. ಏಕೆಂದರೆ, ಉನ್ನತ ಹುದ್ದೆಯಲ್ಲಿರುವವರು ಹೀಗೆ ನ್ಯಾಯಮೂರ್ತಿಗಳನ್ನು ಭೇಟಿ ಮಾಡುವಂತಿಲ್ಲ. ಈ ಬಗ್ಗೆ ಭಾರತದ ಕಾನೂನು ಪುಸ್ತಕದಲ್ಲಿಯೇ ವಿವರಿಸಲಾಗಿದೆ. ಹೀಗಾಗಿಯೇ, ಮೋದಿ ಅವರು ಸಿಜೆಐ ನಿವಾಸಕ್ಕೆ ಭೇಟಿ ನೀಡಿರುವುದು ಭಾರೀ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ.

ಅಂದಹಾಗೆ, ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಗೌಪ್ಯವಾಗಿ ದೇಣಿಗೆ ಪಡೆಯುವುದು ಅಸಂಬದ್ಧ ಎಂದು ಹೇಳಿದ್ದ ನ್ಯಾಯಮೂರ್ತಿಗಳ ಮನೆಯಲ್ಲಿ ಪ್ರಧಾನಿ ಮೋದಿ ಪ್ರತ್ಯಕ್ಷ ಆಗಿದ್ದಾರೆ. ನ್ಯಾಯಮೂರ್ತಿಗಳು ಅಥವಾ ಸರ್ಕಾರಿ ನೌಕರರು ಸರ್ಕಾರದ ಪರವಾಗಿ ಯಾವುದೇ ಹೇಳಿಕೆಗಳನ್ನು ನೀಡುವಂತಿಲ್ಲ. ಅದರಲ್ಲೂ ನ್ಯಾಯಮೂರ್ತಿಗಳು ಹೆಚ್ಚಿನ ಜವಾಬ್ದಾರಿ ಹೊಂದಿರುವುದರಿಂದ, ಅವರು ಅಧಿಕಾರದಲ್ಲಿರುವವರೊಂದಿಗೆ ಹೆಚ್ಚಿನ ಬಾಂಧವ್ಯ ಬಳೆಸುವಂತಿಲ್ಲ. ನ್ಯಾಯಮೂರ್ತಿಗಳು ಹೇಗಿರಬೇಕು ಎಂಬುದನ್ನು ಸಂವಿಧಾನದಲ್ಲಿಯೇ ವಿವರಿಸಲಾಗಿದೆ. ಅದರಂತೆಯೇ ಅವರು ನಡೆದುಕೊಳ್ಳಬೇಕು.

ಆದರೆ, ಮೋದಿ ಅವರು ಸಿಜೆಐ ಮನೆಗೆ ಖಾಸಗಿ ಭೇಟಿ ನೀಡಿದ್ದಾರೆ. ಇದರ ವಿರುದ್ಧ ನ್ಯಾಯವಾದಿಗಳು, ವಿಪಕ್ಷಗಳ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು, ”ಸಿಜೆಐ ಚಂದ್ರಚೂಡ್ ಅವರು ಮೋದಿಯವರನ್ನು ಅವರ ನಿವಾಸಕ್ಕೆ ಖಾಸಗಿ ಭೇಟಿ ಮಾಡಲು ಅವಕಾಶ ಮಾಡಿಕೊಟ್ಟಿರುವುದು ಆಘಾತಕಾರಿಯಾಗಿದೆ. ಇದು ಸರ್ಕಾರ ಸಂವಿಧಾನದ ಮಿತಿಯಲ್ಲಿ ಕಾರ್ಯಾಚರಿಸುತ್ತಿದೆ ಅಂತ ಖಚಿತಪಡಿಸುವ ಮತ್ತು ಕಾರ್ಯಾಂಗದಿಂದ ನಾಗರಿಕರ ಮೂಲಭೂತ ಹಕ್ಕನ್ನು ರಕ್ಷಿಸುವ ಜವಾಬ್ದಾರಿಯನ್ನು ಹೊಂದಿರುವ ನ್ಯಾಯಾಂಗಕ್ಕೆ ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವೆ ದೀರ್ಘವಾದ ಅಂತರ ಇರಬೇಕು” ಎಂದಿದ್ದಾರೆ.

Advertisements

ಅಧಿಕಾರದಲ್ಲಿರುವ ಪ್ರಧಾನಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ನಿವಾಸಕ್ಕೆ ಭೇಟಿ ನೀಡುವುದು ನ್ಯಾಯಾಂಗದ ಸ್ವತಂತ್ರತೆ ಮೇಲೆ ಅನುಮಾನಗಳನ್ನೂ, ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ನಿಷ್ಪಕ್ಷಪಾತದ ಬಗ್ಗೆ ಕಳವಳವನ್ನೂ ಉಂಟುಮಾಡುತ್ತದೆ. ಪ್ರಧಾನಿಯ ಭೇಟಿಯು ನ್ಯಾಯಾಂಗದ ಮೇಲೆ ಪ್ರಭಾವ ಬೀರಬಹುದು. ಮಾತ್ರವಲ್ಲದೆ, ಜಾತ್ಯತೀತ ರಾಷ್ಟ್ರದಲ್ಲಿ ಜಾತ್ಯತೀತತೆಯನ್ನು ಪ್ರತಿನಿಧಿಸುವ ಸಿಜೆಐ, ಒಂದು ಧಾರ್ಮಿಕತೆಯನ್ನು ಸಾಮಾಜಿಕವಾಗಿ ಪ್ರತಿಪಾದಿಸುವುದು, ಒಂದು ಧರ್ಮವನ್ನು ಪೂಜಿಸುವುದು ಸರಿಯಲ್ಲ. ಮುಖ್ಯವಾಗಿ, ನ್ಯಾಯಾಂಗದ ಕೆಲಸ ಪ್ರಜೆಗಳ ಭದ್ರತೆಯನ್ನ ಕಾಪಾಡುವುದು, ಹಕ್ಕುಗಳನ್ನು ರಕ್ಷಿಸುವುದು. ಆದರೆ, ಸಿಜೆಐ ಚಂದ್ರಚೂಡ್ ಅವರು ಒಂದು ಸಮುದಾಯದ ಧಾರ್ಮಿಕತೆಯನ್ನು ಪ್ರಧಾನಿಯೊಂದಿಗೆ ಪ್ರತಿನಿಧಿಸಿದ್ದಾರೆ. ಅದೂ, ಕೋಮುದ್ವೇಷದೊಂದಿಗೆ ಚುನಾವಣೆಯನ್ನು ಎದುರಿಸಿದ ಮೋದಿ ಅವರೊಂದಿಗೆ ಸಿಜೆಐ ಧಾರ್ಮಿಕತೆಯನ್ನು ಪ್ರತಿನಿಧಿಸುವುದು ದೇಶಕ್ಕೆ ಬೇರೆಯದ್ದೇ ರೀತಿಯ ಸಂದೇಶವನ್ನು ರವಾನಿಸುತ್ತದೆ. ಈ ಎಚ್ಚರಿಕೆ ಸಿಜೆಐ ಅವರಲ್ಲಿ ಕಾಣದೇ ಇರುವುದು ವಿಷಾಧನೀಯ ಸಂಗತಿ. ಜೊತೆಗೆ, ಕಾನೂನಿನ ಉಲ್ಲಂಘನೆಯೂ ಕೂಡ.

ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ”ಭಾರತದ ಮುಖ್ಯ ನ್ಯಾಯಾಧೀಶರು ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಅಧಿಕಾರದ ಅಂತರದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಸಿಜೆಐ ಸ್ವತಂತ್ರ ಅನ್ನೋದರ ಮೇಲಿನ ನಂಬಿಕೆಯನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದೇನೆ. ಸ್ವತಂತ್ರ ಸಿಜೆಐ ಕಾರ್ಯಾಂಗದ ಜೊತೆ ಸಾರ್ವಜನಿಕವಾಗಿ ರಾಜಿ ಮಾಡಿಕೊಂಡಿರುವುದನ್ನು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಖಂಡಿಸಬೇಕು” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ವರದಿ ಓದಿದ್ದೀರಾ?: ವಾಲ್ಮೀಕಿ ನಿಗಮ ಹಗರಣ | ಅಕ್ರಮ ಸ್ಪಷ್ಟ- ತನಿಖೆ ಮೂರು, ತಪ್ಪಿತಸ್ಥರು ಯಾರು?

ವಕೀಲ, ಹೋರಾಟಗಾರ ವಿನಯ್ ಕೂರಗಾಯಲ ಶ್ರೀನಿವಾಸ ಅವರು, ”ಇದು ನ್ಯಾಯಾಧೀಶರ ಒಂದು ಭಯಾನಕ ಉದಾಹರಣೆಯಾಗಿದೆ. ಸಿದ್ದರಾಮಯ್ಯ ಅವರ ಪ್ರಕರಣ ವಿಚಾರಣೆಯಲ್ಲಿರುವಾಗ, ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯ ಮನೆಗೆ ಊಟಕ್ಕೆ ಹೋದರೆ ಒಪ್ಪಿಕೊಳ್ಳಬಹುದೇ? ಸಂವಿಧಾನವನ್ನು ಎತ್ತಿ ಹಿಡಿಯಬೇಕಾದ ವ್ಯಕ್ತಿಯೇ ಅದನ್ನು ದುರ್ಬಲಗೊಳಿಸಿದ್ದಾರೆ. ಸಿಜೆಐ ಚಂದ್ರಚೂಡ್ ಕ್ಷಮೆಯಾಚಿಸಬೇಕು ಅಥವಾ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

”ಸಿಜೆಐ ಚಂದ್ರಚೂಡ್ ಅವರೇ ನೀವು ಚುನಾವಣಾ ಬಾಂಡ್ ಕುರಿತು ತೀರ್ಪು ನೀಡಿದಾಗಿನಿಂದ ನಿಮ್ಮ ಮೇಲೆ ಅತೀವ ಗೌರವ ಇತ್ತು. ಅದು ಇವತ್ತು ಹೊರಟುಹೋಯಿತು” ಅಂದು ನೆಟ್ಟಿಗರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದವರ ಈ ನಡೆ ಹಲವಾರು ಪ್ರಶ್ನೆಗಳನ್ನು ಎತ್ತಿದೆ. ಬಿಜೆಪಿಯ ಬ್ರಿಜ್‌ ಭೂಷನ್‌ ಸಿಂಗ್‌ ಪ್ರಕರಣ, ಕರ್ನಾಟಕದ ಬಿಜೆಪಿ-ಜೆಡಿಎಸ್‌ ಮೈತ್ರಿಯಲ್ಲಿದ್ದ ಪ್ರಜ್ವಲ್‌ ರೇವಣ್ಣ ಪ್ರಕರಣ – ಹೀಗೆ ಹೈಪ್ರೊಫೈಲ್ ಕೇಸ್‌ಗಳು ಕೋರ್ಟ್‌ ಮುಂದಿವೆ. ಅವರಿಗೆ ಜಾಮೀನು ಕೊಡಬೇಕೋ-ಬೇಡವೋ, ಅವರ ವಿರುದ್ಧದ ಆರೋಪ ಸಾಬೀತಾದರೆ, ಅವರಿಗೆ ಯಾವ ಶಿಕ್ಷ ನೀಡಬೇಕು ಎಂಬ ಸಂಪೂರ್ಣ ಹೊಣೆ ನ್ಯಾಯಾಧೀಶರ ಕೈಯಲ್ಲಿರುತ್ತದೆ. ಇಂತಹ ಸಂದರ್ಭದಲ್ಲಿ ಮೋದಿ-ಚಂದ್ರಚೂಡ್ ಭೇಟಿಯು ಬಿಜೆಪಿಗೆ ಸಂಬಂಧಿಸಿದ ಯಾವುದೇ ಪ್ರಕರಣದಲ್ಲಿ ನ್ಯಾಯಾಲಯ ಯಾವುದೇ ತೀರ್ಪು ನೀಡಿದರೂ, ಅದು ಮೋದಿ ಪ್ರಭಾವವಾ ಅನ್ನುವ ಅನುಮಾನಗಳನ್ನು ಹುಟ್ಟುಹಾಕುತ್ತದೆ. ಈ ಅನುಮಾನಗಳಿಗೆ ಸ್ವತಃ ನ್ಯಾಯಮೂರ್ತಿ ಚಂದ್ರಚೂಡ್ ಅವರೇ ಅಡಿಪಾಯ ಹಾಕಿಕೊಟ್ಟಿದ್ದಾರೆ.

ನ್ಯಾಯಮೂರ್ತಿಗಳು ಕಾರ್ಯಾಂಗದ ಜೊತೆಗೆ ಯಾವ ರೀತಿಯಲ್ಲೂ ಖಾಸಗಿ ಆವರಣಗಳಲ್ಲಿ ಗುರುತಿಸಿಕೊಳ್ಳದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದಾಗ್ಯೂ, ಸಿಜೆಐ ಚಂದ್ರಚೂಡ್ ಅವರು ಮಹಾರಾಷ್ಟ್ರ ಮೂಲದವರು. ಆ ರಾಜ್ಯದಲ್ಲಿ ಗಣಪತಿ ಪೂಜೆ ಬೇರೆಲ್ಲಡೆಗಿಂತ ಜನಪ್ರಿಯ ಹಬ್ಬ. ಈ ವರ್ಷದ ಅಂತ್ಯದಲ್ಲಿ ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಇಂತಹ ಸಮಯದಲ್ಲಿ ಚಂದ್ರಚೂಡ್ ಮನೆಗೆ ಮಹಾರಾಷ್ಟ್ರದ ಮರಾಠಿಗರ ಉಡುಗೆ ಧರಿಸಿ ಮೋದಿ ಅವರು ಭೇಟಿ ನೀಡಿದ್ದಾರೆ. ಪೂಜೆಯಲ್ಲಿ ಭಾಗವಹಿಸಿದ್ದಾರೆ. ಇದು, ಮಹಾರಾಷ್ಟ್ರ ಜನರಿಗೆ ರಾಜಕೀಯ ಸಂದೇಶವನ್ನೂ ನೀಡುತ್ತದೆ ಎಂದು ಹೇಳಲಾಗುತ್ತಿದೆ. ನ್ಯಾಯಮೂರ್ತಿಗಳನ್ನು ಮೋದಿ ಅವರು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂಬ ಆರೋಪಗಳೂ ಇವೆ. ಈ ಸೂಕ್ಷ್ಮ ವಿಚಾರ ಚಂದ್ರಚೂಡ್ ಅವರಿಗೆ ತಿಳಿಯಲಿಲ್ಲವೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ. ಇದಕ್ಕೆ, ಚಂದ್ರಚೂಡ್ ಅವರೇ ಉತ್ತರಿಸಬೇಕು. ತಮ್ಮಿಂದಾದ ಕಾನೂನು ಉಲ್ಲಂಘನೆಗೆ ಅವರೇ ಬೆಲೆತೆರಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಈಚಲು ಮರದ ಕೆಳಗೆ ಕುಳಿತು ಹೆಂಡ ಕುಡಿದರೂ ಒಂದೇ, ಮಜ್ಜಿಗೆ ಕುಡಿದರೂ ಒಂದೇ. ಈಗ ಹೊಣೆ ಹೊತ್ತು ಮನೆಗೆ ಹೋಗಬೇಕಾದವರು ಯಾರು?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ವಿವಾದಾತ್ಮಕ ಯೂಟ್ಯೂಬರ್ ಎಲ್ವಿಶ್ ಮನೆ ಮೇಲೆ ಗುಂಡಿನ ದಾಳಿ: ಎನ್‌ಕೌಂಟರ್ ಮಾಡಿ ಆರೋಪಿ ಬಂಧನ

ಬಲಪಂಥೀಯ, ವಿವಾದಾತ್ಮಕ ಯೂಟ್ಯೂಬರ್ ಮತ್ತು ಬಿಗ್ ಬಾಸ್ ವಿಜೇತ ಎಲ್ವಿಶ್ ಯಾದವ್‌...

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಉತ್ತರಾಖಂಡ | ಕಪಾಳ ಮೋಕ್ಷ ಮಾಡಿದ ಶಿಕ್ಷಕನಿಗೆ ಗುಂಡು ಹಾರಿಸಿದ ವಿದ್ಯಾರ್ಥಿ

ತರಗತಿಯಲ್ಲಿ ಕಪಾಳ ಮೋಕ್ಷ ಮಾಡಿದ ಕಾರಣಕ್ಕೆ ಕುಪಿತಗೊಂಡ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X