ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಹಿಳೆಯೊಬ್ಬರಿಗೆ ವಿಷ ಕುಡಿಸಿ ಕೊಲ್ಲಲು ಯತ್ನಿಸಿರುವ ಘಟನೆ ನಡೆದಿದ್ದು, ಆಕೆಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಭದ್ರಾವತಿ ನಗರದ ದಾನವಾಡಿಯ ಜಯಲಕ್ಷ್ಮಿ ಮತ್ತು ಚರಣ್ ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣುಮಗುವಿದೆ. ಇದಾದ ಬಳಿಕ ಗಂಡನ ಮನೆಯವರು ಕಿರುಕುಳ ನೀಡಿರುವುದಾಗಿ ಆರೋಪ ವ್ಯಕ್ತವಾಗಿದೆ.
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಆನಂದಪುರ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಸಂಪರ್ಕಿಸಿದಾಗ ಮಾತನಾಡಿ, “ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿರುವ ದಂಪತಿಗೆ ಒಂದು ಹೆಣ್ಣುಮಗುವಿದೆ. ಆದರೆ, ಸಂತ್ರಸ್ತ ಮಹಿಳೆಗೆ ಅವರ ಕುಟುದಲ್ಲಿ ಕಿರುಕುಳ ನೀಡುತ್ತಿದ್ದುದು ಬೆಳಕಿಗೆ ಬಂದಿದೆ. ಬಳಿಕ ಆಕೆಯ ಗಂಡ ಮತ್ತು ಅತ್ತೆ ಸೇರಿಕೊಂಡು ಆಕೆಗೆ ವಿಷ ಕುಡಿಸಿ ಕೊಲ್ಲಲು ಯತ್ನಿಸಿದ್ದಾರೆ” ಎಂದು ತಿಳಿಸಿದರು.
“ಸೊಸೆಗೆ ವಿಷ ಕುಡಿಸಿದ ಬಳಿಕ ಮಾವನೂ ಕೂಡ ಫಿನಾಯಿಲ್ ಕುಡಿದಿದ್ದಾರೆ. ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಚೇತರಿಕೆ ಕಾಣತೊಡಗಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದಲಿತರ ಮೇಲಿನ ದೌರ್ಜನ್ಯ ವಿರೋಧಿಸಿ ʼಸಂಗನಹಾಲ ಚಲೋʼ
“ಘಟನೆಗೆ ಸಂಬಂಧಿಸಿದಂತೆ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಕೆಯ ಅತ್ತೆ ಮತ್ತು ಗಂಡ ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚರಣ್, ಗಾಯಿತ್ರಿ , ಪ್ರಸನ್ನ, ಗೌತಮ್ ಬಂಧಿತ ಆರೋಪಿಗಳು” ಎಂದು ಮಾಹಿತಿ ನೀಡಿದರು.
ಘಟನೆ ಹಿನ್ನೆಲೆ
ಭದ್ರಾವತಿಯ ದಾನವಾಡಿಯಲ್ಲಿದ್ದ ಜಯಲಕ್ಷ್ಮಿ ಅವರು ಕೌಟುಂಬಿಕ ಕಲಹವನ್ನು ತಿಳಿಗೊಳಿಸಿರೆಂದು ಗಂಡನ ಊರಾದ ಆನಂದಪುರ ಬಳಿಯ ದಾಸನಕೊಪ್ಪದ ದೇವಸ್ಥಾನಕ್ಕೆ ಮನವಿ ಮಾಡಿದ್ದರು. ನಿಗದಿಯಾದ ದಿನದಂದು ಮಧ್ಯಾಹ್ನ 2 ಗಂಟೆಗೆ ಕಲಹದ ಕುರಿತು ಇತ್ಯರ್ಥಗೊಳಿಸಲಾಗಿತ್ತು. ಆದರೆ ಮಾವ ಸುಧಾಕರ್ ಹೋಗಿ ಗಲಾಟೆ ಮಾಡಿದ ಪರಿಣಾಮ, ಸೊಸೆ ಜಯಲಕ್ಷ್ಮಿಯವರಿಗೆ ವಿಷ ಕುಡಿಸಿದ್ದು, ಇದೇ ವೇಳೆ ಮಾವನೂ ಕೂಡಾ ಫಿನಾಯಿಲ್ ಸೇವಿಸಿರುವುದಾಗಿ ಹೇಳಲಾಗುತ್ತಿದೆ.
ವರದಿ: ಅಮಿತ್ ಆರ್, ಆನಂದಪುರ.