ಬೆಂಗಳೂರಿಗೆ ಶರಾವತಿ ನದಿ ನೀರನ್ನು ಹರಿಸುವ ಹಾಗೂ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ₹800 ಕೋಟಿ ವೆಚ್ಚದಲ್ಲಿ ಬಹುದೊಡ್ಡ ಕಾಮಕಾರಿ ಮಾಡಲು ಹೊರಟಿರುವುದು ಅವೈಜ್ಞಾನಿಕವಾಗಿದ್ದು, ಇದರಿಂದ ಮಲೆನಾಡಿನ ಜನರಿಗೆ ವಂಚನೆಯಾಗುತ್ತದೆ ಎಂದು ಸಾಗರ ತಾಲೂಕಿನ ರೈತ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಪವಿಭಾಗೀಯ ಅಧಿಕಾರಿ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದ ರೈತರು ಆಗ್ರಹ ವ್ಯಕ್ತಪಡಿಸಿದರು.
“ಶರಾವತಿ ನದಿ ನೀರನ್ನು 800 ಕಿಲೋಮೀಟರ್ ದೂರವಿರುವ ಬೆಂಗಳೂರಿಗೆ ಹರಿಸುವುದರಿಂದ ಇಲ್ಲಿರುವ ಪರಿಸರದ ಜೀವ ಜಂತುಗಳು ನಾಶವಾಗುತ್ತವೆ. ಕಾಮಗಾರಿ ಮಾಡುವ ಸಂದರ್ಭದಲ್ಲಿ ಭೂಮಿಯನ್ನು ಯಂತ್ರಗಳಿಂದ ಅಗೆಯುತ್ತಾರೆ. ಇದರಿಂದ ಕೇರಳದಲ್ಲಿ ಉಂಟಾದ ಅನಾಹುತದಂತೆ ಇಲ್ಲಿಯೂ ಗುಡ್ಡ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿಂದೆ 1961ರಿಂದ 64ರವರೆಗೂ ಹೋರಾಟ ನಡೆಸಿದಂತಹ ರೈತರಿಗೆ, ನಿರಾಶ್ರಿತರಿಗೆ ಭೂಮಿ ಕೊಡುವಲ್ಲಿ ಸರ್ಕಾರ ವಂಚನೆ ಮಾಡಿದೆ” ಎಂದು ರೈತರು ಆರೋಪಿಸಿದರು.
“ಆ ಯೋಜನೆಯ ಫಲಾನುಭವಿಗಳು ಇನ್ನೂ ನೆರಳುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಪುನಃ ಈ ಯೋಜನೆ ಮಾಡುವುದರಿಂದ ಮಲೆನಾಡು ಪ್ರದೇಶದಲ್ಲಿ ಭೂಕುಸಿತಗಳಾಗುವ ಸಾಧ್ಯತೆ ಇದೆ. ಆದ್ದರಿಂದ ಸರ್ಕಾರ ನೀರು ಹರಿಸುವ ಯೋಜನೆಯನ್ನು ಹಿಂಪಡೆದು ಮಲೆನಾಡಿನ ಜನಕ್ಕೆ ನ್ಯಾಯ ಒದಗಿಸಬೇಕು. ನಮ್ಮ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಈ ಯೋಜನೆಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಕೌಟುಂಬಿ ಕಲಹಕ್ಕೆ ಮಹಿಳೆಗೆ ವಿಷ ಕುಡಿಸಿ ಕೊಲೆಗೆ ಯತ್ನ; ನಾಲ್ವರ ಬಂಧನ
ಈ ಸಂದರ್ಭದಲ್ಲಿ ಮಾಜಿ ಮಂತ್ರಿ, ಶಾಸಕ ಎಚ್ ಹಾಲಪ್ಪ, ಮಾಜಿ ಎಂಎಲ್‌ಸಿ ಪ್ರಪುಲ್ಲಾ ಮಧುಕರ್ ಹಾಗೂ ಅಖಿಲೇಶ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ದೇವೇಂದ್ರಪ್ಪ, ನಗರಸಭಾ ಸದಸ್ಯ ಗಣೇಶ್ ಪ್ರಸಾದ್, ರೈತ ಸಂಘದ ಅಧ್ಯಕ್ಷ ದಿನೇಶ್ ಸಿರಿವಾಳ ಸೇರಿದಂತೆ ಹಲವಾರು ಪ್ರಗತಿಪರ ಚಿಂತಕರು, ರೈತ ಮುಖಂಡರು, ಮಹಿಳೆಯರು, ಪತ್ರಕರ್ತರು ಇದ್ದರು.

ಲೂಟಿ ಮಾಡುವ ಯೋಜನೆ ಇದು ಇವರಿಗೆ 400 k.m, ದೂರದ ಶರಾವತಿ ನೀರೇ ಬೇಕೇ, ಬಂಗಾರಪ್ಪ ಶಿವಮೊಗ್ಗದಲ್ಲಿ ಮಾಡಿದ ತುಂಗಾ ಎಡದಂಡೆ ಯೋಜನೆ ನೋಡಿದಿರಲ್ಲ ಹಾಗೆಯೇ ಇದು ಏನೇ ಆಗಲಿ ಬಿಡಬೇಡಿ ಹಣ ಪೋಲಗಲು ಉದ್ದಾರದ ಹೆಸರಲ್ಲಿ ಹಣ ಮಾಡುವ ಯೋಜನೆ
ಲೂಟಿ ಮಾಡುವ ಯೋಜನೆ ಇದು ಇವರಿಗೆ 400 k.m, ದೂರದ ಶರಾವತಿ ನೀರೇ ಬೇಕೇ, ಬಂಗಾರಪ್ಪ ಶಿವಮೊಗ್ಗದಲ್ಲಿ ಮಾಡಿದ ತುಂಗಾ ಎಡದಂಡೆ ಯೋಜನೆ ನೋಡಿದಿರಲ್ಲ ಹಾಗೆಯೇ ಇದು ಏನೇ ಆಗಲಿ ಬಿಡಬೇಡಿ ಹಣ ಪೋಲಗಲು ಉದ್ದಾರದ ಹೆಸರಲ್ಲಿ ಹಣ ಮಾಡುವ ಯೋಜನೆ