ಚಿಕ್ಕಬಳ್ಳಾಪುರ ಚಿಂತಾಮಣಿ ತಾಲೂಕಿನ ಮುರುಗಮಲ್ಲ ದರ್ಗಾದ ಗಂಧೋತ್ಸವ ಮತ್ತು ಉರೂಸ್ ಸಮಾರಂಭಕ್ಕೆ ಡಾ.ಸೂಫಿಯನ್ ಅವರನ್ನು ವಿಶೇಷ ಆರೋಗ್ಯಾಧಿಕಾರಿಯಾಗಿ ವಕ್ಫ್ ಮಂಡಳಿ ನೇಮಿಸಿದೆ.
ಕರ್ನಾಟಕ ರಾಜ್ಯ ಹಾಗೂ ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಹಾಗೂ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಕೇಂದ್ರವಾಗಿರುವ ಮುರುಗಮಲ್ಲ ಹಜರತ್ ಅಮ್ಮಾಜಾನ್-ಬಾವಾಜಾನ್ ದರ್ಗಾದಲ್ಲಿ ಸೆ.16, 17ರಂದು ಗಂಧೋತ್ಸವ ಮತ್ತುಉರೂಸ್ ಸಮಾರಂಭ ನಡೆಯಲಿದೆ.

ಹಬ್ಬದ ಹಿನ್ನೆಲೆ ಪ್ರತಿ ವರ್ಷದಂತೆ ಈ ವರ್ಷವೂ ಎರಡು ದಿನಗಳ ಕಾಲ ಆರೋಗ್ಯ ಶಿಬಿರಗಳು ಸೇರಿದಂತೆ ವಿಶೇಷ ಆಚರಣೆಗಳು ನಡೆಯಲಿವೆ.
