ಮಧ್ಯ ಅಫ್ಘಾನಿಸ್ತಾನದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳು ನಡೆಸಿದ ಗುಂಡಿನ ದಾಳಿಯಲ್ಲಿ 15 ಮಂದಿ ನಾಗರಿಕರು ಸಾವನ್ನಪ್ಪಿದರೆ, ಆರು ಮಂದಿ ಗಾಯಗೊಂಡಿದ್ದಾರೆ ಎಂದು ತಾಲಿಬಾನ್ ಆಡಳಿತ ಶುಕ್ರವಾರ ತಿಳಿಸಿದೆ.
ಡೇಕುಂಡಿ ಪ್ರಾಂತ್ಯದಲ್ಲಿ ನಡೆದ ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪು ಹೊತ್ತುಕೊಂಡಿದೆ. ಆದರೆ ಯಾವುದೇ ಸಾಕ್ಷ್ಯವನ್ನು ಒದಗಿಸಿಲ್ಲ.
ಡೇಕುಂಡಿ ಪ್ರಾಂತ್ಯದಲ್ಲಿದ್ದ ಅಧಿಕ ಜನರು ಶಿಯಾ ಮುಸ್ಲಿಮರಾಗಿದ್ದು, ಈ ಪ್ರದೇಶವನ್ನು ಸುರಕ್ಷಿತ ಪ್ರಾಂತ್ಯಗಳಲ್ಲಿ ಒಂದೆಂದು ಪರಿಗಣಿಸಲಾಗಿತ್ತು.
ಇದನ್ನು ಓದಿದ್ದೀರಾ? T20 ವಿಶ್ವಕಪ್ | ಅಫ್ಘಾನಿಸ್ತಾನ ಕೈ ಹಿಡಿದ ಅದೃಷ್ಟ: ಬಾಂಗ್ಲಾ ಮಣಿಸಿ ಸೆಮಿಫೈನಲ್‌ಗೆ ರಶೀದ್ ಖಾನ್ ಪಡೆ
“ಈ ಘಟನೆಯಿಂದ ಅಮಾಯಕ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲು ನಮಗೆ ದುಃಖವಾಗುತ್ತಿದೆ. ಈ ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಹುಡುಕಿ ನ್ಯಾಯಾಂಗದಡಿ ತಕ್ಕ ಶಿಕ್ಷೆಯನ್ನು ವಿಧಿಸಲು ನಾವು ಗಂಭೀರ ಪ್ರಯತ್ನಗಳನ್ನು ಮಾಡುತ್ತಿದ್ದೇವೆ” ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
