ಎಂಜಿನಿಯರ್‌ಗಳು ಮುಕ್ತ ಮನಸ್ಸಿನಿಂದ ಯೋಚನೆ ಮಾಡಬೇಕು. ಅದರ ಸ್ಪಷ್ಟತೆಯೊಂದಿಗೆ ಜೀವನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸ್ಯಾಮ್ಸಂಗ್ ಆರ್ & ಡಿ ಇನ್‌ಸ್ಟಿಟ್ಯೂಟ್ ಇಂಡಿಯಾ, ಬೆಂಗಳೂರು ವಿಶುವಲ್ ಇಂಟೆಲಿಜೆನ್ಸ್ ನಿರ್ದೇಶಕ ಪ್ರವೀಣ್ ಬಿ ಪಿ ಅಭಿಮತ ವ್ಯಕ್ತಪಡಿಸಿದರು.
ಮೈಸೂರು ನಗರದ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯೂ(ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್ಸ್) ಮತ್ತು ಜಿಎಸ್‌ಎಸ್‌ಎಸ್ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಫಾರ್ ವುಮೆನ್ಸ್ ವತಿಯಿಂದ 2024-25ನೇ ಶೈಕ್ಷಣಿಕ ವರ್ಷದ ಪ್ರಥಮ ವರ್ಷದ ಬಿಇ ಮತ್ತು ಬಿ ಆರ್ಚ್ ಕೋರ್ಸ್ ವಿದ್ಯಾರ್ಥಿಗಳಿಗೆ ಜಿಎಸ್‌ಎಸ್‌ಎಸ್‌ಐಇಟಿಡಬ್ಲ್ಯೂ ಕ್ಯಾಂಪಸ್‌ನ ಎಂ ಗೋವಿಂದರಾವ್ ಮೆಮೋರಿಯಲ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ಸ್ಟೂಡೆಂಟ್ ಇಂಡಕ್ಷನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಬಿಇ ಮತ್ತು ಬಿ ಆರ್ಚ್ ಕೋರ್ಸ್‌ಗಳಿಗೆ ಹೊಸದಾಗಿ ಪ್ರವೇಶ ಪಡೆದ ಉದಯೋನ್ಮುಖ ಎಂಜಿನಿಯರ್‌ಗಳು ಕಲಿಯಲು ಮುಕ್ತ ಮನಸ್ಸು ಹೊಂದಿರಬೇಕು. ಮುಖ್ಯವಾಹಿನಿಯ ಎಂಜಿನಿಯರಿಂಗ್‌ಗೆ ತಮ್ಮನ್ನು ತಾವು ಸೀಮಿತ ಮಾಡಿಕೊಳ್ಳದೆ ವೈವಿಧ್ಯತೆಯನ್ನು ಕಲಿಯಬೇಕು” ಎಂದು ಸಲಹೆ ನೀಡಿದರು.
“ಎಂಜಿನಿಯರ್‌ಗಳಾದವರು ಜೀವನದ ಮೌಲ್ಯಗಳ ಜತೆಗೆ ಶಿಕ್ಷಣವನ್ನು ಆಧ್ಯಾತ್ಮಿಕ ರೀತಿಯಲ್ಲಿ ಅವಲೋಕಿಸಬೇಕು. ಇದರಿಂದ ಆಧ್ಯಾತ್ಮಿಕತೆಯನ್ನು ಪ್ರಶ್ನಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ. ಉತ್ತಮ ತಿಳುವಳಿಕೆಗೆ ಕಾರಣವಾಗುತ್ತದೆ. ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಮತ್ತು ಮಹಿಳೆಯರಿಗಾಗಿಯೇ ಕರ್ನಾಟಕದಲ್ಲಿ ಮೊದಲ ಎಂಜಿನಿಯರಿಂಗ್ ಸಂಸ್ಥೆಯನ್ನು ಸ್ಥಾಪಿಸಿದ ದಿವಂಗತ ಪ್ರೊ ಬಿ ಎಸ್ ಪಂಡಿತ್ ಅವರ ಪ್ರಯತ್ನಗಳನ್ನು ಶ್ಲಾಘನೀಯ” ಎಂದು ಸ್ಮರಿಸಿದರು.
“ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವವನ್ನು ಹೊಂದಿರಬೇಕು. ವೃತ್ತಿಪರ ಬೆಳವಣಿಗೆಗೆ ಸಮಗ್ರತೆಯನ್ನು ತೋರಿಸಬೇಕು” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಯಾದಗಿರಿ | ಸವರ್ಣೀಯರಿಂದ ದಲಿತರಿಗೆ ಬಹಿಷ್ಕಾರ: ಜಿಲ್ಲಾಡಳಿತದಿಂದ ಶಾಂತಿ ಸಭೆ
ಆಡಳಿತಾಧಿಕಾರಿ ಅನುಪಮ ಬಿ ಪಂಡಿತ್ ಮಾತನಾಡಿ, “ಜಿಎಸ್‌ಎಸ್ಎಸ್ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಫಾರ್ ವುಮೆನ್ ಮತ್ತು ಜಿಎಸ್‌ಎಸ್‌ಎಸ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್‌ಗಳ ಸ್ಥಾಪನೆ ಹಾಗೂ ಬೆಳವಣಿಗೆಯ ಬಗ್ಗೆ ಸಂಕ್ಷಿಪ್ತ ವರದಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ ಶಿವಕುಮಾರ್ ಎಂ, ಪ್ರಾಂಶುಪಾಲೆ ಅರ್ಚನಾ ಉತ್ತಯ್ಯ, ಆಡಳಿತ ಮಂಡಳಿ ಸದಸ್ಯ ಭರತ್ ಆರ್ ಕೆ, ಗೌರವ ಕಾರ್ಯದರ್ಶಿ ವನಜಾ ಬಿ ಪಂಡಿತ್ ಸೇರಿದಂತೆ ಇತರರು ಇದ್ದರು.