ವಯೋಮಿತಿ ಸಡಿಲಿಕೆ | ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದಕ್ಕೆ ಸುಣ್ಣ: ಪಿಎಸ್ಐ ಅಭ್ಯರ್ಥಿಗಳ ಅಳಲು

Date:

Advertisements

ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್‌ ಬಿ ಮತ್ತು ಮತ್ತು ಗ್ರೂಪ್‌ ಸಿ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮೂರು ವರ್ಷ ವಯೋಮಿತಿ ಸಡಿಲಿಕೆ ಮಾಡಿ ಆದೇಶಿಸಿದ ಬೆನ್ನಲ್ಲೇ 402 ಪಿಎಸ್ಐ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಲುವಾಗಿ ವಂಚಿತರಾದ ಅಭ್ಯರ್ಥಿಗಳು, ತಮಗೂ ವಯೋಮಿತಿ ಸಡಿಲಿಕೆ ನೀಡುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸೆ.5ರಂದು ನಡೆದಿದ್ದ ಸಚಿವ ಸಂಪುಟ ನಿರ್ಣಯದಂತೆ ರಾಜ್ಯ ಸಿವಿಲ್ ಸೇವೆಗಳಲ್ಲಿನ ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆಯನ್ನು ನೀಡಿ ರಾಜ್ಯ ಸರ್ಕಾರ ಸೆ.10ರಂದು ಆದೇಶಿಸಿದೆ.

ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ದಿನಾಂಕ 13-03-2024ರನ್ವಯ ಅಧಿಸೂಚಿಸಿರುವ ಉಳಿಕೆ ಮೂಲ ವೃಂದದಲ್ಲಿನ ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು 15 ರಂದು ನಡೆಯಬೇಕಿದ್ದ ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪರೀಕ್ಷೆಯ ಹಿಂದಿನ ದಿನವೇ (ಸೆ.13) ದಿಢೀರ್‌ ಮುಂದೂಡಿದೆ. ಹಾಗೆಯೇ ಸದರಿ ಅಧಿಸೂಚನೆಯಲ್ಲಿನ ಹುದ್ದೆಗಳಿಗೆ ಇತರೆ ದಿನಾಂಕಗಳಲ್ಲಿ ನಿಗದಿಪಡಿಲಾಗಿದ್ದ ನಿರ್ದಿಷ್ಟ ಪತ್ರಿಕೆಗಳ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಹ ಮುಂದೂಡಲಾಗಿದೆ.

Advertisements

ರಾಜ್ಯ ಸರ್ಕಾರ ನಿರ್ದಿಷ್ಟ ದಿನಾಂಕವನ್ನು ತಿಳಿಸದೇ ‘ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿಗೆ ಈಗಾಗಲೇ ಹೊರಡಿಸಲಾಗಿರುವ ಅಧಿಸೂಚನೆಗಳಿಗೆ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿಗೆ ಅನ್ವಯವಾಗುವಂತೆ ಗರಿಷ್ಠ ವಯೋಮಿತಿಯಲ್ಲಿ ಮೂರು ವರ್ಷಗಳ ಸಡಿಲಿಕೆ ಅಂತ ಹೇಳಿದೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್‌ 3ರಂದು ನಿಗದಿಯಾಗಿರುವ 402 ಪಿಎಸ್‌ಐ ನೇಮಕಾತಿ ಪರೀಕ್ಷೆಗೆ (ಈ ಮೊದಲು ಸೆ.22ರಂದು ಪರೀಕ್ಷೆ ನಿಗದಿಯಾಗಿತ್ತು. ನಂತರ ಸೆ.28ಕ್ಕೆ ಎಂದು ಪರೀಕ್ಷೆ ಇದೆ ಎಂದು ಗೃಹ ಸಚಿವ ಪರಮೇಶ್ವರ್‌ ದಿನಾಂಕ ಘೋಷಿಸಿದರು. ಅಂದು ಕೂಡ ಯುಪಿಎಸ್‌ಸಿ ಪರೀಕ್ಷೆ ಇದ್ದಿದ್ದರಿಂದ ಅಕ್ಟೋಬರ್‌ 3ಕ್ಕೆ ಪರೀಕ್ಷೆ ನಿಗದಿ ಪಡಿಸಲಾಗಿದೆ) ವಯೋಮಿತಿ ಸಡಿಲಿಕೆ ಅವಕಾಶ ಕೊಡಿ ಎಂದು ಅವಕಾಶ ವಂಚಿತ ಅಭ್ಯರ್ಥಿಗಳು ಸರ್ಕಾರವನ್ನು ಕೇಳುತ್ತಿದ್ದಾರೆ.

“ರಾಜ್ಯದ ಎಲ್ಲ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಮೇಲೆ ರಾಜ್ಯ ಸರ್ಕಾರ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುವುದು ಬೇಡ. 402 ಪಿಎಸ್ಐ ನೇಮಕಾತಿ ಪರೀಕ್ಷೆಗೆ ವಯೋಮಿತಿ ಸಲುವಾಗಿ ವಂಚಿತರಾದ ಅಭ್ಯರ್ಥಿಗಳು ಸಾಕಷ್ಟಿದ್ದೇವೆ. ಕೆಪಿಎಸ್‌ಸಿ ಪರೀಕ್ಷೆಗಳನ್ನು ಮುಂದೂಡಿದಂತೆ 402 ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿ ತಮಗೂ ವಯೋಮಿತಿ ಸಡಿಲಿಕೆಗೆ ಅವಕಾಶ ಮಾಡಿಕೊಡಬೇಕು” ಎಂದು ಅವಕಾಶ ವಂಚಿತ ಅಭ್ಯರ್ಥಿ ಶಿವಕುಮಾರ್‌ ಎನ್‌ ಈ ದಿನ.ಕಾಮ್‌ ಜೊತೆ ಮಾತನಾಡಿ ಆಗ್ರಹಿಸಿದರು.

ಮುಂದುವರಿದು, “545 ಪಿಎಸ್‌ಐ ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಪರೀಕ್ಷೆ ರದ್ದಾಗಿ ಮರು ಪರೀಕ್ಷೆ ಘೋಷಣೆ ಮಾಡಲಾಯಿತು. ನಂತರ 402ರ ಪಿಎಸ್‌ಐ ನೇಮಕಾತಿಗೂ ಅಧಿಸೂಚನೆ ಹೊರಡಿಸಲಾಯಿತು. ಆದರೆ, 545 ಮತ್ತು 402 ನೇಮಕಾತಿಗೆ ಒಂದೇ ದೈಹಿಕ ಪರೀಕ್ಷೆ ನಡೆಸಿ, 402 ನೇಮಕಾತಿಯಲ್ಲಿ ಪಾಸಾದವರಿಗೆ 545ರ ನೇಮಕಾತಿಗೂ ಅವಕಾಶ ಮಾಡಿಕೊಡಲಾಗಿದೆ. ಅದೊಂದು ಅಕ್ರಮದಿಂದ ನಮಗೆ ಬಹಳ ಅನ್ಯಾಯವಾಗಿದೆ. ಇನ್ನೂ 402 ನೇಮಕಾತಿಗೆ ಪರೀಕ್ಷೆ ನಡೆದಿಲ್ಲ. ಒಂದು ಅವಕಾಶ ಇದೆ. ಅವಕಾಶ ವಂಚಿತರಿಗೆ ವಯೋಮಿತಿ ಸಡಿಲಿಕೆ ನೀಡಬೇಕು” ಎಂದರು.

WhatsApp Image 2024 09 14 at 11.21.28 AM

ಹಿಂದೆ ಧ್ವನಿ ಎತ್ತಿ ಈಗ ಮೌನರಾದ ಸಿದ್ದರಾಮಯ್ಯ!

“ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಸಿದ್ದರಾಮಯ್ಯ ಇದೇ ವಿಚಾರವಾಗಿ ಧ್ವನಿ ಎತ್ತಿದ್ದರು. 22.11.202ರಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿ ಸರ್ಕಾರಕ್ಕೆ ಪತ್ರ ಬರೆದು, ಕರ್ನಾಟಕ ರಾಜ್ಯ ಸರ್ಕಾರವು 3ನೇ ಅಕ್ಟೋಬರ್ 2021ರಂದು 545 ಸಿವಿಲ್ ಪಿಎಸ್ಐ ಸಬ್‌ಇನ್ಸ್‌ಪೆಕ್ಟರ್ ಪರೀಕ್ಷೆ ಅವ್ಯವಹಾರದಿಂದಾಗಿ ಮರುಪರೀಕ್ಷೆ ನಡೆಸಲು ಸರ್ಕಾರ ಆದೇಶ ಹೊರಡಿಸಿದೆ. ಈ ವಿಷಯದ ಬಗ್ಗೆ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವಿರುವುದರಿಂದ ಈ 402 ಸಿವಿಲ್ ಪಿಎಸ್‌ಐ ಪರೀಕ್ಷೆಯಲ್ಲಿ ಅವಕಾಶ ವಂಚಿತರಾದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು. ಸಿವಿಲ್ ಪಿಎಸ್‌ಐ ಅಭ್ಯರ್ಥಿಗಳ ಮನವಿಯನ್ನ ಪರಿಶೀಲಿಸಿ, ಪುನಃ ಅವಕಾಶ ನೀಡಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿದ್ದರು. ಈಗ ಸಿದ್ದರಾಮಯ್ಯ ಅವರೇ ಸಿಎಂ ಇದ್ದಾರೆ. ನಮ್ಮ ಮನವಿಯನ್ನು ಪರಿಗಣಿಸಿ ಸರ್ಕಾರದ ಹೊಸ ಆದೇಶದಡಿ ನಮಗೂ ನ್ಯಾಯ ಒದಗಿಸಿಕೊಡಬೇಕು” ಎಂದು ರವಿಕುಮಾರ್‌ ಮಾಲಿಪಾಟೀಲ್‌ ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಆಶಯವೋ, ಅಣಕವೋ?

ವಯೋಮಿತಿ ವಿಚಾರವಾಗಿ 402 ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಅವಕಾಶ ವಂಚಿತ ಅಭ್ಯರ್ಥಿ ಪ್ರಕೃತಿ ಎಂಬುವರು ಈ ದಿನ.ಕಾಮ್‌ ಜೊತೆ ಮಾತನಾಡಿ, “545 ಪಿಎಸ್ಐ ನೇಮಕಾತಿಯಲ್ಲಿ ಪರೀಕ್ಷೆಯಲ್ಲಿ ನಾನು ಆಯ್ಕೆಯಾಗಿದ್ದೆ. ಆದರೆ ಸರ್ಕಾರದ ಯಡವಟ್ಟಿನಿಂದ ಅಕ್ರಮ ನಡೆದು ಮರು ಪರೀಕ್ಷೆ ಘೋಷಣೆಯಾಗಿದ್ದರಿಂದ ನಮ್ಮ ಆಯ್ಕೆ ರದ್ದಾಯಿತು. ನಂತರ 402 ಪಿಎಸ್ಐ ನೇಮಕಾತಿ ಪರೀಕ್ಷೆಗೆ ಅಧಿಸೂಚನೆ ಹೊರಡಿಸಲಾಯಿತು. ವಯೋಮಿತಿ ಸಲುವಾಗಿ ಅವಕಾಶವನ್ನು ಕಳೆದುಕೊಂಡಿದ್ದೇವೆ. ಸರ್ಕಾರದಿಂದಲೇ ಪರೀಕ್ಷೆಗಳು ವಿಳಂಬವಾಗಿ ನಡೆದಿದ್ದರಿಂದ ನಮಗೆ ಈ ಶಿಕ್ಷೆ. ದಯವಿಟ್ಟು ಸರ್ಕಾರ 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದಿರುವ ಎಲ್ಲ ಅಭ್ಯರ್ಥಿಗಳಿಗೂ ವಯೋಮಿತಿ ಸಡಿಲಿಕೆ ನೀಡಿ, 402 ಪಿಎಸ್ಐ ನೇಮಕಾತಿ ಪರೀಕ್ಷೆಗೆ ಅವಕಾಶ ಮಾಡಿಕೊಡಬೇಕು” ಎಂದರು.

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಈ ಹಿಂದೆ ಆಗ್ರಹ

402 ಪಿಎಸ್ಐ ನೇಮಕಾತಿಗೆ ವಯೋಮಿತಿ ಸಡಿಲಿಕೆ ಮಾಡುವಂತೆ 2022ರಲ್ಲಿ ಬಿಜೆಪಿ ಸರ್ಕಾರವನ್ನು ಮಾಜಿ ಸಿಎಂ ಹೆಚ್‌ ಡಿ ಕುಮಾರಸ್ವಾಮಿ ಆಗ್ರಹಿಸಿದ್ದರು. ಸರ್ಕಾರಕ್ಕೆ ಪತ್ರ ಬರೆದಿದ್ದ ಅವರು, “545 ಸಿವಿಲ್ ಪಿಎಸ್ಐ ಪರೀಕ್ಷೆಯಲ್ಲಿ ವಯೋಮಿತಿ ಅವಕಾಶ ವಂಚಿತರಾದ ಅಭ್ಯರ್ಥಿಗಳಿಗೆ 402 ಸಿವಿಲ್ ಪಿಎಸ್ಐ ಪರೀಕ್ಷೆಯಲ್ಲಿ ಅವಕಾಶ ನೀಡಬೇಕು. ಈ ಪರೀಕ್ಷೆಯಲ್ಲಿ ಬರೆದ ಸುಮಾರು 56,000 ಅಭ್ಯರ್ಥಿಗಳಿಗೆ ಒಂದು ಬಾರಿ ಕ್ರಮವಾಗಿ ಮಾನವೀಯ ನೆಲೆಯಲ್ಲಿ 402 (ಪಿಎಸ್ಐ) ಹುದ್ದೆಯ ಆಯ್ಕೆಗಾಗಿ ನಡೆಯಲಿರುವ ಲಿಖಿತ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಿಕೊಡಬೇಕು” ಎಂದು ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರು ಅವಕಾಶ ವಂಚಿತ ಪರೀಕ್ಷಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಲಿ ಎಂಬುದು ಅವಕಾಶ ವಂಚಿತ ಅಭ್ಯರ್ಥಿಗಳ ಒತ್ತಾಸೆಯಾಗಿದೆ.

ಸಿಎಂ ಭೇಟಿ ಮಾಡಲಿರುವ ಅಭ್ಯರ್ಥಿಗಳು

“ಮೂರು ವರ್ಷ ವಯೋಮಿತಿ ಸಡಿಲಿಕೆ ನೀಡಿ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ 402 ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಅವಕಾಶ ಕಳೆದುಕೊಂಡ ಅಭ್ಯರ್ಥಿಗಳೆಲ್ಲರೂ ಒಟ್ಟಾಗಿ ಸೋಮವಾರದೊಳಗಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಸಿಎಂ ಸಿದ್ದರಾಮಯ್ಯ ಅವರು ದೊಡ್ಡ ಮನಸ್ಸು ಮಾಡಿ ನಮಗೆ ಕರುಣೆ ತೋರಲಿ” ಎಂದು ಅವಕಾಶ ವಂಚಿತ ಅಭ್ಯರ್ಥಿ ಮಹೇಶ್‌ ತಿಳಿಸಿದರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

11 COMMENTS

  1. Psi 402 callform agirodu 2021-22 ರಲ್ಲಿ, ಈವಾಗ ಗ್ರೂಪ್ B ಮತ್ತೆ ಎಲ್ಲಾ ಹುದ್ದೆಗಳಿಗೆ ವಯೋಮಿತಿ ಜಾಸ್ತಿ ಮಾಡಿರೋದು 2024-25 ರಲ್ಲಿ ಎತ್ತಣದಿಂದ ಎತ್ತ ಸಂಬಂಧ ನಿಮ್ಮ ಈ ಪೋಸ್ಟ್.. 🤦‍♂️ ಹೀಗಾದ್ರೆ ಯುವಜನತೆ ರೊಚ್ಚಿಗೆಳಬೇಕಾಗುತ್ತ ಎಚ್ಚರಿಕೆ.. ಸುವರ್ ಸೂಳೆಮಕ್ಳ ಏನಂತ ಪತ್ರಿಕೋದ್ಯಮ ನಡೆಸ್ತೀರಾ? ಒಂದು ಬಾರಿ ಅನ್ವಯ ಆಗೋ ತರ age ಜಾಸ್ತಿ ಮಾಡಿದ್ರೆ.. 4-5 ವರ್ಷ 402 psi ಗೆ ಓದಿ ಮುಂದಿನ ವರ್ಷ age ಕಳೆದುಕೊಳ್ಳುವವರ ಪರಿಸ್ಥಿತಿನೂ ಯೋಚನೆ ಮಾಡಿ.4 ವರ್ಷಗಳ ಹಿಂದೆ ವಯೋಮಿತಿ ಕಳೆದುಕೊಂಡವರ ಬಗ್ಗೆ ಅಷ್ಟೇ ಹೇಳ್ತೀರಾ ಅವರೆಲ್ಲರೂ ವರ್ಷದಲ್ಲಿ 4-5 ಬಾರಿ ಎಕ್ಸಾಮ್ ಬರೆದು ವಯೋಮಿತಿ ಕಳೆದುಕೊಂಡರು. ನಾವು ಎಕ್ಸಾಮ್ ಯಾವ್ದು ಬರೀದೇನೆ ಹಲ್ಕಟ್ 545 psi ಹೋರಾಟಗಾರರಿಂದ 4ವರ್ಷಗಳಿಂದ ಯಾವುದು ನೇಮಕಾತಿಗಳು ಪೊಲೀಸ್ ಇಲಾಖೆಯಲ್ಲಿ ನಡೀತಾ ಇಲ್ಲ.. ಅದನ್ನ ಎಲ್ಲಾದ್ರೂ ಹೇಳಿದೀರಾ

  2. ಎಲ್ಲದಕ್ಕೂ ಒಂದು ಇತಿ ಮಿತಿಯಿದೆ ಕೇಳೊದಕ್ಕೆ….2021 ರಲ್ಲಿ ಆಗಿರುವ ಅಧಿಸೂಚನೆ ಮತ್ತು ಅರ್ಧದಷ್ಟು ಪ್ರಕ್ರಿಯೆ ಮುಗಿದಿದೆ ಇವಾಗ ಮತ್ತೇ ಅರ್ಜಿ ಕರೆಯಬೇಕಾ….4 ವರ್ಷದಿಂದ ಕಾಯುತ್ತಿರುವವರು ಏನ್ ಮಾಡಬೇಕು .. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುತ್ತಿರುವವರು ಸ್ವಲ್ಪ ಬುದ್ಧಿ ಇರೊತರ ವರ್ತಿಸಿ… ಎಲ್ಲದಕ್ಕೂ ಒಂದೇ ಸೂತ್ರ ಬಳಸೋಕ್ಕೆ ಆಗೋಲ್ಲ..
    ಅರ್ಥ ಮಾಡ್ಕೊಂಡು ಮುಂದಿನ ಪರೀಕ್ಷೆಗಳಿಗೆ ತಯಾರಿ ನಡೆಸಿ….ಆಗೊ ಕೆಲಸಗಳಿಗೆ ಕಲ್ಲನ್ನು ಹಾಕಬೇಡಿ…

    • 100% u r right psi 402. Notifications agitodu 2021 nalli age relaxation madirodu next year andre 2024-25 nalli ago notifications ge anta adikke 2021 nalli agiro notification ge age relaxation kodi andre

  3. Ayyo punyatma alli avru siddramayya hatra hogiddu 545 scam agi mosa agide addike 402 alli chance kodi anta but recent agi 545 re exam adaga age relaxation keloru kuda exam bardru alwa innelinda avrige relaxation kodbeku yak kodbeku astu avrige anyayane agide andre nxt notification alli relaxation tagolli… Yak sumne elladuku postpone postpone annkondu bere avr life spoil madta idiri.. Thu..

  4. Sorry to say this sir, Nim tale nalli yen vichara ittkond article baritiro a devr ge gottu, Yake Andre PSI 402 notification agirodu 2021-22 nalli, as per my knowledge each and every candidate yar yar eligible iddro avr yella apply madirtare, e time naalli nivu matadsiro SHIVKUMAR yen madtiddru yenta final year degree iddra atva ???? Yav aadharad mele SHIVKUMAR ge mosa agide anta heltira yavdadru DHAKALE ide kodi 545 & 402 ge onde physical selection agide Alli pass agiro certificate iddre haki please 🙏 correct iddre Nanvu saha jote bartivi, government yen notification madide adu next year Andre mundina saalina yella notification nalli age relaxation kodtivi anta helirodu Psi 402 agitodu 3 years hinde, e bariuvaga yen yochne madi baritiro gottila atva Mosa agide nange anta heltiro SHIVKUMAR avru isht Dina yen madtiddru, sudden agi age jaasti agogidiya avrge???? Atva ??? Niv isht Dina yen Madta iddri e 3 years ???? Ond vele government age relaxation notification madilla andiddre ???? E article baritiddra nivu ???? Evag puna age relaxation madi application hakovrige yenta physical selection nivu maduda???? Heli sir ????

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X