ರಾಯಚೂರು | ಉಪ ವಿಭಾಗಾಧಿಕಾರಿ ಮಹೆಬೂಬಿ ವರ್ಗಾವಣೆ ಹಿಂಪಡೆಯಲು ಸಂಘಟನೆಗಳ ಆಗ್ರಹ

Date:

Advertisements

ಅವಧಿಗೂ ಮುನ್ನವೇ ರಾಯಚೂರು ಉಪ ವಿಭಾಗಾಧಿಕಾರಿ ಮಹೆಬೂಬಿಯವರ ವರ್ಗಾವಣೆ ಮಾಡಲಾಗಿದೆ. ಕೂಡಲೇ ಅವರ ವರ್ಗಾವಣೆಯನ್ನು ಹಿಂಪಡೆಯಲು ಆಗ್ರಹಿಸಿ ಟಿಯುಸಿಐ ನೇತೃತ್ವದ ರೈತ ಸಂಘ ಸೇರಿ ವಿವಿಧ ಸಂಘಟನೆಗಳು ಇಡೀ ಜಿಲ್ಲೆಯಾದ್ಯಂತ ತಾಲೂಕು ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿತು.

ಉಪ ವಿಭಾಗಾಧಿಕಾರಿ ಇಲ್ಲಿನ ಸರಕಾರಿ ಭೂ ಕಬಳಿಕೆದಾರರಿಗೆ, ಅಕ್ರಮ ದಂಧೆಕೋರರಿಗೆ, ಸಾರ್ವಜನಿಕ ಶಾಂತಿ ಕದಡುವ ಶಕ್ತಿಗಳಿಗೆ ತಮ್ಮ ಆಟ ನಡೆಯದಂತೆ ನೋಡಿಕೊಂಡಿದ್ದರು. ಅಲ್ಲದೇ, ಇಲ್ಲಿನ ರಾಜಕಾರಣಿಗಳ ದುಷ್ಟ ದಂಧೆಗೆ ಇವರು ಮಣೆ ಹಾಕಲಿಲ್ಲ ಎಂಬ ಕಾರಣಕ್ಕೆ ಹಾಗೂ ಈಗಿರುವ ಜಿಲ್ಲಾಧಿಕಾರಿಗಳು ಮುಸ್ಲಿಂ ವಿರೋಧಿ ದ್ವೇಷವನ್ನು ಹೊಂದಿದ್ದಾರೆ. ಹಾಗಾಗಿ, ರಾಯಚೂರು ಉಪ ವಿಭಾಗಾಧಿಕಾರಿ ಮಹೆಬೂಬಿ ಅವರನ್ನು ವರ್ಗಾವಣೆ ಮಾಡುತ್ತಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ ? ರಾಯಚೂರು | ವಿಶೇಷ ಚೇತನರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ

Advertisements

ಕಳೆದ 9 ತಿಂಗಳ ಹಿಂದೆಯಷ್ಟೇ ರಾಯಚೂರಿಗೆ ವರ್ಗಾವಣೆಯಾಗಿ ಬಂದ ಕೆಎಎಸ್ ಅಧಿಕಾರಿ ಮಹೆಬೂಬಿ ಅವರನ್ನು ಸೆಪ್ಟೆಂಬರ್ 13, 2024 ರಂದು ಹಠಾತ್ತನೆ ವರ್ಗಾವಣೆ ಮಾಡಲಾಗಿದೆ. ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.

ಈ ಅಧಿಕಾರಿಯ ವರ್ಗಾವಣೆಗೆ ರಾಯಚೂರು ಉಪ ವಿಭಾಗ ಸೇರಿ ಇಡೀ ಜಿಲ್ಲೆಯಿಂದ ಯಾವುದೇ ಜನ, ಸಂಘಟನೆ ಅಥವಾ ಸಮುದಾಯಗಳು ಸರಕಾರಕ್ಕೆ ಕೇಳಿಕೊಂಡಿರುವುದಿಲ್ಲ. ಅಲ್ಲದೆ, ಈ ಅಧಿಕಾರಿಯ ಮೇಲೆ ಆಡಳಿತ ಹಾಗೂ ಸಾರ್ವಜನಿಕ ಸೇವೆಗೆ ಸಂಬಂಧಿಸಿದ ಯಾವುದೇ ಪ್ರಕರಣಗಳು ದಾಖಲೆಯಾಗಿ ಆರೋಪ ಸಾಬೀತಾಗಿರುವುದಿಲ್ಲ. ಇದು ಅವಧಿಗೆ ಪೂರ್ವ ವರ್ಗಾವಣೆಯಾಗಿರುತ್ತದೆ ಎಂದರು.

ಅಲ್ಪಾವಧಿಯಲ್ಲಿಯೇ ಅತ್ಯಂತ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ದಕ್ಷ ಅಧಿಕಾರಿ ಎಂದು ಜನ ಸಾಮಾನ್ಯರ ನಡುವೆ ಹೆಸರು ಮಾಡಿರುತ್ತಾರೆ. ಅನೇಕ ಭೂ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥಪಡಿಸಿರುತ್ತಾರೆ. ಅಲ್ಲದೇ, ಸರಕಾರ ವಹಿಸಿದ ಕರ್ತವ್ಯವನ್ನು ಚಾಚೂ ತಪ್ಪದೆ ಮಾಡಿದ್ದಾರೆ. ದಲಿತ, ಅಲ್ಪಸಂಖ್ಯಾತ, ಹಿಂದುಳಿದ ಸಮುದಾಯಗಳ ಕುಂದು ಕೊರತೆಗಳಿಗೆ ತೀವ್ರವಾಗಿ ಸ್ಪಂದಿಸಿದ್ದಾರೆ. ರೈತ ಹಾಗೂ ಕಾರ್ಮಿಕರ ಮಹಿಳೆಯರ ವಿಷಯದಲ್ಲೂ ಮುಂದೆ ನಿಂತು ಕರ್ತವ್ಯ ನಿರ್ವಹಿಸಿ ಜನಸ್ನೇಹಿ ಆಡಳಿತ ನಿರ್ವಹಿಸಿದ್ದಾರೆ ಎಂದು ತಿಳಿಸಿದರು.

WhatsApp Image 2024 09 14 at 01.52.19

ಆಷ್ಟಕ್ಕೂ, ಸದರಿ ಅಧಿಕಾರಿಯು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕೆಂದು ಕರೆಸಿಕೊಂಡ ದೇವದುರ್ಗ ತಾಲೂಕಿನವರಾಗಿದ್ದಾರೆ. ಧಾರ್ಮಿಕ ಅಲ್ಪಸಂಖ್ಯಾತ(ಮುಸ್ಲಿಂ)ಸಮುದಾಯಕ್ಕೆ ಸೇರಿದ ಮಹಿಳೆ. ಕಡುಬಡತನದ ನಡುವೆ ಕೆಎಎಸ್ ತೇರ್ಗಡೆ ಹೊಂದಿ ರಾಜ್ಯದಲ್ಲಿಯೇ ಮೊಟ್ಟಮೊದಲ ಮುಸ್ಲಿಂ ಮಹಿಳಾ ಕೆಎಎಸ್ ಅಧಿಕಾರಿಯಾಗಿ ಸರಕಾರದ ಕರ್ತವ್ಯದಲ್ಲಿದ್ದಾರೆ. ಇಂಥವರನ್ನು ಈ ಜಿಲ್ಲೆಯಿಂದ ತಕ್ಷಣ ವರ್ಗಾವಣೆ ಮಾಡುವುದು ಎಷ್ಟು ಸರಿ? ಸರಕಾರಕ್ಕೆ ವಿವೇಚನೆ ಬೇಡವೇ? ಹಿಂದುಳಿದ ಅಲ್ಪಸಂಖ್ಯಾತ ಹಾಗೂ ಮಹಿಳೆಯರಿಗೆ ಸರಕಾರ ಕೊಡುವ ಗೌರವ ಇದೇನಾ? ಕಾರಣ ಕೂಡಲೇ ಇವರ ವರ್ಗಾವಣೆ ಆದೇಶವನ್ನು ಹಿಂಪಡೆದು ರಾಯಚೂರಿನಲ್ಲಿಯೇ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ನಮ್ಮ ಮನವಿಗೆ ಸ್ಪಂದಿಸದಿದ್ದಲ್ಲಿ ರಾಯಚೂರು ಜಿಲ್ಲೆಯಾದ್ಯಂತ ಎಲ್ಲ ಸಂಘಟನೆಗಳು ಸೇರಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.

ಇದನ್ನು ಓದಿದ್ದೀರಾ? ರಾಯಚೂರು | ಹೈಕೋರ್ಟ್‌ ತಡೆಯಾಜ್ಞೆ: ಲಿಂಗಸುಗೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಮುಂದೂಡಿಕೆ

ಈ ಸಂದರ್ಭದಲ್ಲಿ ಕ್ರಾಂತಿಕಾರಿ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಆದೇಶ ನಗನೂರು,ಕರ್ನಾಟಕ ರೈತ ಸಂಘದ ಕಾರ್ಯದರ್ಶಿಬಸವರಾಜ್ ಬಡಿಗೇರ್, ಕರ್ನಾಟಕ ರೈತ ಸಂಘದ ಅಧ್ಯಕ್ಷ ವೀರಭದ್ರಪ್ಪ ತೋರಲ ಬೆಂಚಿ, ಆರ್ ವೈ ಎಫ್ ಮುಖಂಡ ಚಿದಾನಂದ ಕಸಬಾ ಲಿಂಗಸುಗೂರು, ಕರ್ನಾಟಕ ರೈತ ಸಂಘದ ಉಪಾಧ್ಯಕ್ಷ ತಿಪ್ಪಣ್ಣ ಚಿಕ್ಕೆಸರೂರು,ಎಂ ನಿಸರ್ಗ, ಅಮರ ಜ್ಞಾನಪೀಠ ಚಿಕ್ಕಿಹೆಸರೂರು,ಬಸವರಾಜ್ ಹಿರೇಹೆಸರೂರು,ರುಕ್ಮಿಣಿ ಗೆಜ್ಜಲಗಟ್ಟಾ, ರಮೇಶ್ ನಾಯಕ್ ಹಿರೇಹೆಸರೂರು, ಶರಣಪ್ಪ ಹಿರೇಹೆಸರೂರು ಸೇರಿ ಇತರರು ಇದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X