ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರು ಟೋಲ್ ಬಳಿಯ 500 ಮೀಟರ್ ಹಿಂದೆ ಸರ್ವೀಸ್ ರಸ್ತೆಯಲ್ಲಿ ಬಿದ್ದಿರುವ ದೊಡ್ಡಗುಂಡಿ ರಸ್ತೆಯ ಅಪಾಯವನ್ನು ಉಂಟುಮಾಡುತ್ತಿದೆ.
ಈ ಸ್ಥಳದಲ್ಲಿ ಕ್ರಷರ್, ಟಿಪ್ಪರ್ ಲಾರಿಗಳ ಸಂಚಾರ ಹೆಚ್ಚಿದ್ದು, ವೇಗವಾಗಿ ಬರುವ ವಾಹನಗಳಿಗೆ ಗುಂಡಿ ಸ್ಪಷ್ಟವಾಗಿ ಕಾಣುವುದಿಲ್ಲ. ಬೈಕ್ ಸವಾರರು ತಮ್ಮ ಕುಟುಂಬ ಸದಸ್ಯರು, ಮಕ್ಕಳು, ವಯಸ್ಸಾದವರು ಸೇರಿದಂತೆ ಎಲ್ಲರನ್ನೂ ಕೂರಿಸಿಕೊಂಡು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಸ್ವಲ್ಪ ಜಾಗೃತಿ ತಪ್ಪಿದರೆ, ಅಪಘಾತಗಳ ಸಂಭವ ಹಾಗೂ ಸಾವು ಖಚಿತವಾಗಿದೆ.
ರಸ್ತೆಯ ಮೇಲೆ ನೀರು ಹರಿಯುವ ಕಾರಣದಿಂದಾಗಿ ಬೃಹತ್ ಲೋಡು ತುಂಬಿದ ಲಾರಿಗಳು ರಸ್ತೆಯನ್ನು ಇನ್ನಷ್ಟು ಹಾಳು ಮಾಡುತ್ತಿವೆ. ಸರ್ವೀಸ್ ರಸ್ತೆಯಲ್ಲಿನ ವಾಹನ ಸವಾರರೂ ಕೂಡ ಸರ್ಕಾರಕ್ಕೆ ತೆರಿಗೆ ಪಾವತಿಸುತ್ತಾರೆ. ಆದರೆ, ಹೆದ್ದಾರಿ ರಸ್ತೆಯಲ್ಲಿ ಸಂಚರಿಸುವ ಶ್ರೀಮಂತರ ಜೀವಗಳು ಮಾತ್ರ ಅಮೂಲ್ಯವೆಂದು ಕಾಣಲಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ಸಾಮಾನ್ಯರ ಪ್ರಾಣಗಳು ಕನಿಷ್ಠವೆಂದು ನಿರ್ಲಕ್ಷ್ಯ ಮಾಡುತ್ತಿರುವ ಎನ್‌ಎಚ್‌ಐ ಇಲಾಖೆಯ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ. ಯಾಕೆ ದಂಡ ವಿಧಿಸಲಾಗುವುದಿಲ್ಲ” ಎಂಬುದು ಪ್ರಶ್ನೆಯಾಗಿದೆ.
ಈ ಸುದ್ದಿ ಓದಿದ್ದೀರಾ? ಬಾಗೇಪಲ್ಲಿ | ಶಾಸಕ ಮುನಿರತ್ನ ರಾಜೀನಾಮೆಗೆ ಡಿಎಸ್‌ಎಸ್ ಒತ್ತಾಯ
ಸರ್ಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರ್‌ಟಿಒ ಕಚೇರಿಗಳು ಸಾಮಾನ್ಯ ಜನರ ಮೇಲೆ ಮಾತ್ರ ದಂಡ ವಿಧಿಸುತ್ತಿರುವ ಬದಲಿಗೆ, ಇಂತಹ ಅಪಾಯಕಾರಿ ಸ್ಥಿತಿಗಳನ್ನು ನಿರ್ಲಕ್ಷಿಸುವವರ ಮೇಲೂ ಕ್ರಮ ತೆಗೆದುಕೊಳ್ಳಬೇಕು.
