ಬಿಹಾರದಲ್ಲಿ ನಾವು ಅಧಿಕಾರಕ್ಕೆ ಬಂದರೆ ಒಂದು ಗಂಟೆಯೊಳಗೆ ಮದ್ಯ ನಿಷೇಧವನ್ನು ತೆಗೆದುಹಾಕುತ್ತೇವೆ ಎಂದು ಚುನಾವಣಾ ತಂತ್ರಗಾರ, ಜನ್ ಸೂರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಚುನಾವಣಾ ಭವಿಷ್ಯವನ್ನು ಹೇಳುವ ಮೂಲಕವೇ ಸುದ್ದಿಯಾಗುತ್ತಿದ್ದ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಹೊಸ ಪಕ್ಷ ಜನ್ ಸೂರಾಜ್ ಅನ್ನು ಸ್ಥಾಪಿಸಿದ್ದಾರೆ. ಈಗ ಮುಂದಿನ ಬಿಹಾರ ವಿಧಾನಸಭೆ ಚುನಾವಣೆಗೆ ಪ್ರಚಾರ ಕಾರ್ಯವನ್ನು ಈಗಲೇ ಆರಂಭಿಸಿದ್ದಾರೆ.
ಶನಿವಾರ ಪಾಟ್ನಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್, “ಪ್ರತ್ಯೇಕ ಸಿದ್ಧತೆ ಅಗತ್ಯವಿಲ್ಲ, ಕಳೆದ 2 ವರ್ಷಗಳಿಂದ ನಾವು ಸಿದ್ಧತೆ ನಡೆಸಿದ್ದೇವೆ. ಜನ್ ಸೂರಾಜ್ ಸರ್ಕಾರ ರಚನೆಯಾದರೆ ಮದ್ಯಪಾನ ನಿಷೇಧವನ್ನು ಒಂದು ಗಂಟೆಯೊಳಗೆ ತೆಗೆದುಹಾಕುತ್ತೇವೆ” ಎಂದು ಹೇಳಿದರು.
ಇದನ್ನು ಓದಿದ್ದೀರಾ? ಪ್ರಧಾನಿ ಮೋದಿ ಪಾದ ಸ್ಪರ್ಶಿಸಿ ನಿತೀಶ್ ಕುಮಾರ್ ಬಿಹಾರ ನಾಚಿಕೆ ಪಡುವಂತೆ ಮಾಡಿದ್ದಾರೆ: ಪ್ರಶಾಂತ್ ಕಿಶೋರ್
ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಆಭರ್ ಯಾತ್ರೆಯ ಬಗ್ಗೆಯೂ ಇದೇ ಸಂದರ್ಭದಲ್ಲಿ ವ್ಯಂಗ್ಯವಾಡಿದರು. “ಕನಿಷ್ಠ ಮನೆಯಿಂದ ಹೊರಗೆ ಬಂದ ಅವರಿಗೆ ನನ್ನ ಶುಭಾಶಯಗಳು” ಎಂದು ಲೇವಡಿ ಮಾಡಿದರು.
ಒಂದು ತಿಂಗಳೊಳಗೆ ರಾಜಕೀಯ ಪಕ್ಷವಾಗಲಿರುವ ಜನ್ ಸೂರಾಜ್ ಮುಂದಿನ ವರ್ಷ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ 243 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದಿದ್ದಾರೆ.
#WATCH Patna, Bihar: Ahead of his party's foundation day on October 2, Jan Suraj chief Prashant Kishor says, "There is no need for any separate preparation for the 2nd. We have been preparing for the last 2 years…If Jan Suraj government is formed, we will end the liquor ban… pic.twitter.com/oRFMfKPQat
— ANI (@ANI) September 14, 2024
