ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ಗೆ ಹಲವಾರು ಐಷಾರಾಮಿ ಸೌಲಭ್ಯ ಒದಗಿಸಿದ್ದ ವಿಚಾರಕ್ಕೆ ಭಾರೀ ಚರ್ಚೆಗೆ ಕಾರಣವಾಗಿದೆ. ದರ್ಶನ್ ಮತ್ತು ಅವರ ಗ್ಯಾಂಗ್‌ನ ಇತರ ಆರೋಪಿಗಳನ್ನು ರಾಜ್ಯದ ಇತರ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಐಷಾರಾಮಿ ಸೌಲಭ್ಯ ಒದಗಿಸಿದ್ದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೈಲಿನಲ್ಲಿ ದರ್ಶನ್ ಜೊತೆಗಿದ್ದ ವಿಲ್ಸನ್ ಗಾರ್ಡನ್ ನಾಗ ಮತ್ತು ಸಹಚರರ 18 ಮೊಬೈಲ್‌ಗಳನ್ನು ವಶಕ್ಕೆ ಪಡೆದುಕಕೊಂಡಿದ್ದಾರೆ.
ದಾಳಿ ನಡೆಸಿದ್ದ ಸಿಸಿಬಿ ಅಧಿಕಾರಿಗಳು ಮೊಬೈಲ್‌ಗಳು ಮಾತ್ರವಲ್ಲದೆ, ಡ್ರಗ್ಸ್, ಹಣ ಸೇರಿದಂತೆ ಹಲವಾರು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಹಿಂದದೆ,ಆಗಸ್ಟ್ 24ರಂದೂ ಕೂಡ ಸಿಸಿಬಿ ಅಧಿಕಾರಿಗಳು ಅರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ಮಾಡಿದ್ದರು. ಆಗ ಯಾವುದೇ ಪುರಾವೆಗಳು, ಅನುಮಾನಾಸ್ಪದ ವಸ್ತುಗಳು ದೊರೆತಿಲಿಲ್ಲ. ಅದಾಗ್ಯೂ, ದಾಳಿ ನಡೆದ ಮರು ದಿನ, ಆಗಸ್ಟ್ 25ರಂದು ದರ್ಶನ್ ಸಿಗರೇಟ್ ಹಿಡಿದಿರುವ ಚಿತ್ರ ವೈರಲ್ ಆಗಿತ್ತು. ದರ್ಶನ್‌ಗೆ ಐಷಾರಾಮಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಆರೋಪ ಕೇಳಿಬಂದಿದ್ದವು.
ಫೋಟೋ ವೈರಲ್ ಆದ ಬಳಿಕ ಆರೋಪಿ, ನಟ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ.