ಉಡುಪಿ | ಮದ್ಯ, ಮಾದಕ ದ್ರವ್ಯಗಳಿಂದ ದೂರವಿರಿ: ಅಹ್ಮದ್ ಶರೀಫ್ ಸಅದಿ ಯುವಕರಿಗೆ ಕರೆ

Date:

Advertisements

ತಂಬಾಕು, ಮದ್ಯ, ಮಾದಕ ದ್ರವ್ಯ ನಿಮ್ಮಲ್ಲಿರುವ ಮನುಷ್ಯತ್ವ, ದೇಹದ ಸಮತೋಲನ ಹಾಗೂ ಮನಸ್ಸಿನ ಸದ್ಭಾವನೆಯನ್ನು ಕೊಂದು, ಮನುಷ್ಯನನ್ನು ವಿಕೃತಗೊಳಿಸುತ್ತದೆ. ಇವುಗಳಿಂದ ದೂರವಿರಿ ಎಂದು ಸರ್ ಹಿಂದ್ ಇಸ್ಲಾಮಿಕ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲ ಅಹ್ಮದ್ ಶರೀಫ್ ಸಅದಿ ಕರೆ ನೀಡಿದರು.

ಅವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಜೋಡುರಸ್ತೆ ಬಿ ಆರ್ ಕೆ ವೃತ್ತದಲ್ಲಿ ಪ್ರವಾದಿ ಮುಹಮ್ಮದ್(ಸ) ಜನ್ಮದಿನದ ಅಂಗವಾಗಿ ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ, ಸಲ್ಮಾನ್ ಜುಮ್ಮಾ ಮಸ್ಜಿದ್, ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಬೃಹತ್ ಮೀಲಾದ್ ಸಂದೇಶ ಮೆರವಣಿಗೆಯನ್ನುದ್ದೇಶಿಸಿ ಮಾತನಾಡಿದರು.

ಎಲ್ಲ ಧರ್ಮ ಗ್ರಂಥಗಳು ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದೆ. ಇಸ್ಲಾಂ ಶಾಂತಿ, ಸೌಹಾರ್ದತೆ ಸಹೋದರತೆಯ ಸಂಕೇತವಾಗಿದೆ. ಭಯೋತ್ಪಾದನೆ, ಭೀಕರವಾದ, ಅಶಾಂತಿ, ಅಸ್ಪ್ರಶ್ಯತೆ, ಅನೀತಿ, ಅನಾಚಾರ, ಅತ್ಯಾಚಾರ, ಅಕ್ರಮಗಳನ್ನು ಇಸ್ಲಾಂ ಯಾವತ್ತೂ ಒಪ್ಪುದಿಲ್ಲ. ಅದು ಇಸ್ಲಾಂ ಸಂಸ್ಕೃತಿಯಲ್ಲ ಎಂದ ಅವರು, ಕುರ್‌ಆನ್ ಮತ್ತು ಪ್ರವಾದಿಯವರ ಇಸ್ಲಾಮಿನ ಸಂದೇಶಗಳ ಮೂಲಕ ಸಮಾಜದಲ್ಲಿ ಅನ್ಯ ಧರ್ಮೀಯರೊಂದಿಗೂ ಶಾಂತಿ ಸೌಹಾರ್ದತೆಯಿಂದ ಬಾಳುವಂತೆ ಕರೆ ನೀಡಿದರು.

Advertisements

ಈ ಸಂದರ್ಭದಲ್ಲಿ ಸರ್ ಹಿಂದ್ ಅಕಾಡೆಮಿ, ತ್ವೈಭಾ ಗಾರ್ಡನ್ ಶಿಕ್ಷಣ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಶರೀಫ್, ಕರ್ನಾಟಕ ಮುಸ್ಲಿಂ ಜಮಾತ್ ಕಾರ್ಕಳ ತಾಲೂಕು ಅಧ್ಯಕ್ಷ ನಾಸಿರ್ ಶೇಖ್ ಬೈಲೂರು, ಜಲ್ವ ಏ ನೂರ್ ನ ಮೌಲಾನ ಸಹೀದ್ ರಝಾ, ಹಯಾತುಲ್ ಇಸ್ಲಾಂ ಅಸೋಸಿಯೇಷನ್, ಬಂಗ್ಲೆಗುಡ್ಡೆ ನ ಪ್ರಮುಖರಾದ ರಜ್ಜಬ್ ಎ ಕೆ, ಮಾಜಿ ಅಧ್ಯಕ್ಷರುಗಳಾದ ಬಷೀರ್ ಸಾಣೂರು, ಹನೀಫ್ ಬೆಲ್ಲೂರ್, ರಜಬ್ ಪರನಿರ್, ಮಾಜಿ ಉಪಾಧ್ಯಕ್ಷ ಕೆ ನೂರುದ್ದೀನ್, ಅಬ್ದುಲ್ ರಹಿಮಾನ್, ಸೇವಾದಳದ ಅಧ್ಯಕ್ಷ ಅಬ್ದುಲ್ಲಾ ಶೇಖ್, ಝೈನುಲ್ ಅಭಿದ್ ಸಖಾಫಿ ಮಾಗುಂಡಿ, ಅಬ್ದುಲ್ ಖಾದರ್ ಮದನಿ ಅಳಕೆ, ಮೆಹಮೂದ್ ಜುಹಾರಿ ಚೆರ್ಕಳ, ಅಷ್ಪಾಕ್ ಅಹಮದ್ ಸಖಾಫಿ, ಶಮೀಮ್ ಸಹದಿ ಸುರತ್ಕಲ್, ಇಸ್ಮಾಯಿಲ್ ಮಾಸ್ಟರ್ ಕೊಣಾಜೆ ಎಸ್ ವೈ ಎಸ್ ಮುಖಂಡರುಗಳಾದ ದಾವೂದ್ ಪರನಿರ್, ರಫೀಕ್ , ಮುಬೀನ್, ಎಸ್ ಎಸ್ ಎಫ್ ಮುಖಂಡರುಗಳಾದ ಅಲ್ತಾಫ್ ಪರನಿರ್, ನವಾಝ್ ಶರೀಫ್ , ಫಯಾಝ್ ಪರನಿರ್, ಮಯ್ಯದಿ, ಕೆ ಹಸನ್ ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಕೊಪ್ಪಳ | ಅಂತರ್ಜಾತಿ ವಿವಾಹವಾಗಿ ಕೊಲೆಗೀಡಾಗಿದ್ದ ಯುವತಿಯ ಮನೆಗೆ ಸಚಿವ ತಂಗಡಗಿ, ಸಂಸದ ಹಿಟ್ನಾಳ್ ಭೇಟಿ

ಬಂಗ್ಲೆಗುಡ್ಡೆ ಸಲ್ಮಾನ್ ಜುಮ್ಮಾ ಮಸೀದಿ ವಠಾರದಲ್ಲಿ ನಡೆದಂತಹ ಧ್ವಜಾರೋಹಣ ಕಾರ್ಯಕ್ರಮವನ್ನು ಹಿರಿಯ ಧಾರ್ಮಿಕ ವಿದ್ವಾಂಸ ಇಬ್ರಾಹಿಮ್ ಫೈಝಿ ಪುಲಿಕ್ಕೂರು ಉಸ್ತಾದ್ ನೆರವೇರಿಸಿದರು. ಅಲವಿ ಫಜಲಿಲ್ ಅಲ್ ಜೆಫ್ರಿ ತoಘಳ್ ಮಿಲಾದ್ ಸಂದೇಶ ಮೆರವಣಿಗೆಗೆ ಚಾಲನೆ ನೀಡಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X