ಪ್ಯಾಲೆಸ್ತೀನ್ ಬಾವುಟ ಹಿಡಿದು ಬೈಕ್ನಲ್ಲಿ ನಗರದಲ್ಲಿ ಓಡಾಡಿರುವ ಆರು ಮಂದಿ ಅಪ್ರಾಪ್ತರನ್ನು ಪೊಲೀಸರು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ. ಬಂಧಿತ ಅಪ್ರಾಪ್ತರನ್ನು ಈ ಸಂಬಂಧ ವಿಚಾರಣೆ ನಡೆಸಲಾಗುತ್ತಿದೆ.
ರವಿವಾರ ಕೆಲ ಯುವಕರು ಫೆಲೆಸ್ತೀನ್ ದ್ವಜ ಹಿಡಿದು ನಗರದ ಕೆಲವೆಡೆ ಸಂಚರಿಸಿದ್ದರು. ಈ ವೇಳೆ ‘ಫ್ರೀ ಫೆಲೆಸ್ತೀನ್’ ಎಂಬ ಘೋಷಣೆ ಕೂಗಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿತ್ತು.
ಈ ವೀಡಿಯೋ ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರು ಮಂದಿ ಬಾಲಕರನ್ನು ಹಾಗೂ ಅವರು ಬಳಸಿದ್ದೆನ್ನಲಾದ ಎರಡು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ 198 ಅಡಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿದ್ದೀರಾ? ಧಾರವಾಡ | ಮುಸ್ಲಿಮರನ್ನು ಅನುಮಾನದಿಂದ ನೋಡುವುದನ್ನು ನಿಲ್ಲಿಸಬೇಕು: ಡಾ. ಕೆ ಆರ್ ದುರ್ಗಾದಾಸ್
ಧ್ವಜ ಹಿಡಿದು ರವಿವಾರ ಮಧ್ಯಾಹ್ನ ಬೈಕಿನಲ್ಲಿ ಕೆಲವರು ಸಂಚರಿಸುತ್ತಿದ್ದ ವೀಡಿಯೊ ಹರಿದಾಡುತ್ತಿದ್ದಂತೆ ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರು ನಗರ ಠಾಣೆ ಬಳಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು.
