ಮಹದೇವಪುರ ಕ್ಷೇತ್ರ | ಲಿಂಬಾವಳಿ ದಂಪತಿಗೆ ಆಡಳಿತ ವಿರೋಧಿ ಅಲೆ; ಕಾಂಗ್ರೆಸ್‌ಗೆ ಅವಕಾಶ?

Date:

Advertisements

ಐಟಿ ಪಾರ್ಕ್‌ಗಳು, ಮಾಲ್‌ಗಳು, ಪಬ್‌ ಮತ್ತು ರೆಸ್ಟೋರೆಂಟ್‌ಗಳು, ದುಬಾರಿ ವಸತಿ ಸಮುಚ್ಛಯಗಳನ್ನು ಹೊಂದಿರುವ ಬೆಂಗಳೂರಿನ ವಿಧಾನಸಭಾ ಕ್ಷೇತ್ರ ಮಹದೇವಪುರ. ಶ್ರೀಮಂತವಾಗಿ ಕಾಣುವ ಕ್ಷೇತ್ರವು ಕೆಟ್ಟ ರಸ್ತೆಗಳು, ಸಂಚಾರ ದಟ್ಟಣೆ, ಅಸಮರ್ಪಕ ತ್ಯಾಜ್ಯ ನಿರ್ವಹಣೆ, ಮಳೆಗಾದಲ್ಲಿ ಪ್ರವಾಹದ ಭೀತಿಯನ್ನೂ ಎದುರಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಸುರಿದ ಮಳೆಯಿಂದಾಗಿ ಇಲ್ಲಿನ ಮಿಲಿಯನೇರ್‌ಗಳು ಬೋಟ್‌ಗಳಲ್ಲಿ ಸ್ಥಳಾಂತರಗೊಳ್ಳಬೇಕಾದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಬೃಹತ್‌ ಬಂಗಲೆಗಳಿದ್ದರೂ ಮೂಲ ಸೌಕರ್ಯಗಳ ಕೊರತೆಯು ಕ್ಷೇತ್ರವನ್ನು ಕಾಡುತ್ತಿದೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿ-ಪ್ಯಾಕ್ ಬಿಡುಗಡೆ ಮಾಡಿದ ‘ಬೆಂಗಳೂರು ಸಿಟಿಜನ್ ಪರ್ಸೆಪ್ಶನ್ ಸಮೀಕ್ಷೆ’ಯ ಪ್ರಕಾರ ಕ್ಷೇತ್ರದ 17 ವಾರ್ಡ್‌ಗಳ ನಿವಾಸಿಗಳು ಬಿಬಿಎಂಪಿಗೆ ಹೆಚ್ಚಿನ ಪ್ರಮಾಣದ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಆದರೂ, ತಮಗೆ ಸಿಗದ ನಾಗರಿಕ ಸೌಲಭ್ಯಗಳು ಮತ್ತು ಸೇವೆಗಳ ವಿಚಾರದಲ್ಲಿ ಅಸಮಾಧಾನಗೊಂಡಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರವು 2008ರಲ್ಲಿ ರಚನೆಯಾಯಿತು. ನಂತರದಲ್ಲಿ ನಡೆದ ಮೂರು ಚುನಾವಣೆಯಲ್ಲಿಯೂ ಅರವಿಂದ ಲಿಂಬಾವಳಿ ಗೆದ್ದು, ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2008ರಲ್ಲಿ 13,358, 2013ರಲ್ಲಿ 6,149 ಹಾಗೂ 2018ರಲ್ಲಿ 17,784 ಮತಗಳ ಅಂತರದಿಂದ ಲಿಂಬಾವಳಿ ಗೆದ್ದಿದ್ದರು. ಈಗ ಅವರಿಗೆ ಟಿಕೆಟ್ ನಿರಾಕರಿಸಿರುವ ಬಿಜೆಪಿ, ಅವರ ಪತ್ನಿ ಮಂಜುಳಾ ಲಿಂಬಾವಳಿಗೆ ಟಿಕೆಟ್ ನೀಡಿದೆ. ಈ ಮೂರು ಚುನಾವಣೆಗಳಲ್ಲಿಯೂ ಸೋಲುಂಡಿದ್ದ ಕಾಂಗ್ರೆಸ್‌, ಈ ಬಾರಿ ಗೆಲ್ಲಲೇಬೇಕೆಂದು ಕಸರತ್ತು ನಡೆಸುತ್ತಿದೆ. ಮೂರನೇ ಸ್ಥಾನದಲ್ಲಿಯೇ ತೆವಳುತ್ತಿದ್ದ ಜೆಡಿಎಸ್‌, ಈ ಬಾರಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಿಲ್ಲ. ಆದರೆ, ಎಎಪಿಯಿಂದ ಸಿ.ಆರ್ ನಟರಾಜ್ ಸ್ಪರ್ಧಿಸಿದ್ದು, ಅವರು ಎರಡೂ ಪಕ್ಷಗಳಿಗೆ ಭಾರೀ ಪೈಪೋಟಿ ನೀಡುತ್ತಾರೆ ಎನ್ನಲಾಗಿದೆ.

Advertisements

ಮೂರು ಬಾರಿ ಗೆದ್ದಿದ್ದ ಲಿಂಬಾವಳಿ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ರೀತಿಯಲ್ಲಿ ಕೆಲಸ ಮಾಡಿಲ್ಲವೆಂದು ಹೇಳಲಾಗುತ್ತಿದೆ. ಅವರ ವಿರುದ್ಧ ಆಡಳಿತ ವಿರೋಧಿ ಅಲೆಯೂ ಕ್ಷೇತ್ರದಲ್ಲಿದೆ ಎನ್ನಲಾಗಿತ್ತು. ಆದರೆ, ಲಿಂಬಾವಳಿ ಅವರನ್ನು ಕೈಬಿಟ್ಟರೆ, ಅವರು ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರ ಹಾದಿಯನ್ನೇ ಹಿಡಿಯಬಹುದೆಂದು ಚಿಂತಿಸಿದ ಪಕ್ಷವು ಅವರ ಬದಲಿಗೆ ಅವರ ಪತ್ನಿಗೆ ಟಿಕೆಟ್ ನೀಡಿದೆ. ಆದರೂ, ಆಡಳಿತ ವಿರೋಧಿ ಅಲೆಯನ್ನು ಮಂಜುಳಾ ಅವರೂ ಎದುರಿಸಲೇಬೇಕಾಗಿದೆ.

“ನನ್ನ ಪತಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ನಾನು ಆದ್ಯತೆಯಿಂದ ಮುಂದುವರೆಸುತ್ತೇನೆ. ಮಹದೇವಪುರ ಟಾಸ್ಕ್ ಫೋರ್ಸ್, ನಮ್ಮ ನಾಗರಿಕ ವೇದಿಕೆಯ ಮೂಲಕ ನನ್ನ ಆದ್ಯತೆಯ ಕೆಲಸಗಳನ್ನು ಸಾಧಿಸುತ್ತೇನೆ. ಕ್ಷೇತ್ರದ ಜನರ ಬೆಂಬಲ ನಮ್ಮೊಂದಿಗಿದೆ” ಎಂದು ಮಂಜುಳಾ ಹೇಳಿದ್ದಾರೆ.

ಅವರ ವಿರುದ್ಧ ಕಾಂಗ್ರೆಸ್‌ನಿಂದ ಕಣದಲ್ಲಿರುವ ಎಚ್‌ ನಾಗೇಶ್‌ಗೆ ಅವಕಾಶಗಳಿವೆ ಎಂದು ಹೇಳಲಾಗುತ್ತಿದೆ. ಮಹದೇವಪುರದವರೇ ಆದ ಎಚ್‌ ನಾಗೇಶ್‌, 2018ರಲ್ಲಿ ಕೋಲಾರದ ಮುಳಬಾಗಲಿನಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದರು. ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದರು. ಮೈತ್ರಿ ಸರ್ಕಾರ ಪತನದ ವೇಳೆ ಅವರು ಬಿಜೆಪಿಯನ್ನು ಬೆಂಬಲಿಸಿದ್ದರು. ಬಿ.ಎಸ್ ಯಡಿಯೂರಪ್ಪ ಸರ್ಕಾರದಲ್ಲಿ ಅಬಕಾರಿ ಸಚಿವರೂ ಆಗಿದ್ದರು. ಬೊಮ್ಮಾಯಿ ಸರ್ಕಾರದಲ್ಲಿ ಮಂತ್ರಿಗಿರಿ ಕಳೆದುಕೊಂಡ ಅವರು ಈ ವರ್ಷದ ಜನವರಿಯಲ್ಲಿ ಮತ್ತೆ ಕಾಂಗ್ರೆಸ್‌ ಸೇರಿದ್ದರು.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ಕಣದಲ್ಲಿದ್ದಾರೆ ಕ್ರಿಮಿನಲ್ ಕೇಸುಗಳ ನೂರಾರು ಆಪಾದಿತರು

ಕಾಂಗ್ರೆಸ್‌ ಆಂತರಿಕ ಸಮೀಕ್ಷೆಯು ಮಹದೇವಪುರದ ಸ್ಥಳೀಯರಾದ ನಾಗೇಶ್ ಮೀಸಲು ಕ್ಷೇತ್ರದಲ್ಲಿ ಗೆಲ್ಲಬಹುದೆಂದು ಹೇಳಿದೆ. ಕ್ಷೇತ್ರದಲ್ಲಿ ಎಸ್‌ಸಿ ಎಡ ಮತ್ತು ಬಲ ಪಂಗಡಗಳ ಮತದಾರರು ಸಮಬಲದಲ್ಲಿದ್ದಾರೆ. ಅಲ್ಲದೆ, 21 ಸಾವಿರ ಮುಸ್ಲಿಂ ಮತ್ತು 40 ಸಾವಿರ ಒಬಿಸಿ ಮತಗಳೂ ಇವೆ. ಈ ಲೆಕ್ಕಾಚಾರದ ಆಧಾರದ ಮೇಲೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗಿದೆ.

ಕಳೆದ 15 ವರ್ಷಗಳಿಂದ ಕ್ಷೇತ್ರದ ಜನರಿಗೆ ಯಾವುದೇ ಮೂಲ ಸೌಕರ್ಯಗಳು ದೊರೆತಿಲ್ಲ. ಜನರು ಬೇಸರಗೊಂಡಿದ್ದಾರೆ. ಅವರು ನಮಗೆ ಈ ಬಾರಿ ಅವಕಾಶ ನೀಡುತ್ತಾರೆಂಬ ಭರವಸೆ ಇದೆ ಎಂದು ನಾಗೇಶ್‌ ವಿಶ್ವಾಸದಿಂದಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

Download Eedina App Android / iOS

X