ಕೋಲಾರ | ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು, ರಾಜ್ಯದ ಅಸ್ಮಿತೆ ಉಳಿಸಬೇಕು: ಇಂದೂಧರ ಹೊನ್ನಾಪುರ

Date:

Advertisements

ದಲ್ಲಾಳಿ ರಾಜಕಾರಣಿಗಳು,‌ ಲೂಟಿಕೋರ ಉದ್ಯಮಿಗಳು ಹಾಗೂ ಪುರೋಹಿತಶಾಹಿ ವರ್ಗ ‌ದೇಶ‌ ಆಳುತ್ತಿವೆ. ಈ ಮೂವರ ದುಷ್ಟ ಕೂಟವನ್ನು ಕೆಳಗಿಳಿಸಬೇಕು. ಹಾಗಾಗಿ, ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಈ ಮೂಲಕ ರಾಜ್ಯದ ಅಸ್ಮಿತೆ ಉಳಿಸಬೇಕು ಎಂದು‌ ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲ‌ನಾ ಸಮಿತಿ ಸಂಯೋಜಕ ಇಂದೂಧರ ಹೊನ್ನಾಪುರ ಹೇಳಿದರು.

ಕೋಲಾರ ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ಇಂದಿರಾ ಗಾಂಧಿ ಅವರಿಗಿಂತ ತೀವ್ರವಾದ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ದೇಶದ ಮೇಲೆ ಹೇರಿದೆ. ಪ್ರಭುತ್ವವನ್ನು ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ. ಪತ್ರಕರ್ತರು, ಹೋರಾಟಗಾರರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಕರಾಳ ಬಿಜೆಪಿ ಅಧ್ಯಾಯ ಕೊನೆಗೊಳ್ಳಬೇಕು. ಹೀಗಾಗಿ, ‌ಬಿಜೆಪಿ ಸೋಲಬೇಕು” ಎಂದರು.

“ದಲ್ಲಾಳಿಗಳು ದೇಶವನ್ನು ಆಳುತ್ತಿದ್ದಾರೆ. ದ್ವೇಷ ಬಿತ್ತಿ ಮನಸ್ಸುಗಳನ್ನು ಒಡೆಯುತ್ತಿದ್ದಾರೆ. ಹಿಂದೆ‌ ಮುತ್ಸದ್ಧಿ ರಾಜಕಾರಣಿಗಳು ಜನರ ಸಮಸ್ಯೆ ಅರಿತು ದೇಶ‌ ಆಳುತ್ತಿದ್ದರು. ಈಗ ಆಂತರಿಕ ‌ಸಂಘರ್ಷ‌ ಹುಟ್ಟು ಹಾಕಿ ದೇಶ ಆಳುತ್ತಿದ್ದಾರೆ” ಎಂದು ವಾಗ್ದಾಳಿ ನಡೆಸಿದರು.   ‌

Advertisements

“ಜೆಡಿಎಸ್‌ ಈಗ ಜಾತ್ಯತೀತ‌ ಪಕ್ಷವಾಗಿ ಉಳಿದಿಲ್ಲ. ‌ಹೀಗಾಗಿ, ಅವರಿಗೆ ‌ನಮ್ಮ ಬೆಂಬಲ‌‌ ಇಲ್ಲ. ಕಾಂಗ್ರೆಸ್ ನಮಗೆ ಪರ್ಯಾಯ ಹಾಗೂ ಅನಿವಾರ್ಯ ಅಲ್ಲ. ದಲಿತ ‌ಚಳವಳಿಯು ರಾಜಕಾರಣದಲ್ಲಿ ತೊಡುಗುವುದಿಲ್ಲ. ಆದರೆ, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ನೀಡುತ್ತಿದ್ದೇವೆ” ಎಂದು ತಿಳಿಸಿದರು.

ರಾಜ್ಯ ಸಂಯೋಜಕ ಎನ್.ಮುನಿಸ್ವಾಮಿ ಮಾತನಾಡಿ, “ಬಂಡವಾಳ ಶಾಹಿಗಳ ಪರ ವಹಿಸಿ ಅವರ ಬಗ್ಗೆ ಪ್ರತಿಪಾದನೆ ಮಾಡುವ ಬಿಜೆಪಿಯನ್ನು ಸೋಲಿಸಬೇಕು. ಜನದ್ರೋಹಿ ಆರ್‌ಎಸ್‌ಎಸ್‌–ಬಿಜೆಪಿಯನ್ನು ಹಿಮ್ಮೆಟ್ಟಿಸಲು ಕಾಂಗ್ರೆಸ್‌ಗೆ ಷರತ್ತುಬದ್ಧ ಬೆಂಬಲ ಘೋಷಿಸಿದ್ದೇವೆ. ಕಾರಣ ಬಿಜೆಪಿ ಸಂಸದರೇ ಸಂವಿಧಾನ ಸರಿ ಇಲ್ಲ ಎಂಬ ಮಾತು ಹೇಳುತ್ತಿದ್ದಾರೆ.‌ ಬದಲಾಯಿಸುತ್ತೇವೆ ಎಂಬುದಾಗಿ ಹೇಳಿದರೂ ಅದು ತಪ್ಪು ಎಂದು ಮೇಲಿನ ಸ್ಥಾನದಲ್ಲಿ ಕುಳಿತವರು ಹೇಳುತ್ತಿಲ್ಲ. ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಮೇಲೆ ಅವರಿಗೆ ನಂಬಿಕೆನೇ ಇಲ್ಲ” ಎಂದರು.

“ಆರ್‌ಎಸ್‌ಎಸ್‌ಗೆ ಬೇಕಾದ ನೀತಿ ರೂಪಿಸುತ್ತಿದ್ದಾರೆಯೇ ಹೊರತು ಜನರಿಗೆ ಬೇಕಾದ ನೀತಿ ಅಲ್ಲ. ರಾಜ್ಯ ಬಿಜೆಪಿ ಸರ್ಕಾರ ದಲಿತ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ನಿಲ್ಲಿಸಿದೆ. ಸಮುದಾಯದ ಅನುದಾನ ಕಡಿತ ಮಾಡಿದೆ” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಭಜರಂಗದಳ ನಿಷೇಧಕ್ಕೆ ಕ್ರಮ

“ಜೆಡಿಎಸ್‌ಗೆ ಸಂಖ್ಯೆಬಲ ಇಲ್ಲ. ವರುಣಾದಲ್ಲಿ ಆ ಪಕ್ಷದಿಂದ ಸಿದ್ದರಾಮಯ್ಯ ವಿರುದ್ಧ ದಲಿತ ಅಭ್ಯರ್ಥಿ ನಿಲ್ಲಿಸಿ ಮತ ವಿಭಜನೆ ಮಾಡಲಾಗುತ್ತಿದೆ. ಹೀಗಾಗಿ, ‌ಅವರಿಗೆ ಬೆಂಬಲಿಸಲ್ಲ. ಕಾಂಗ್ರೆಸ್‌ಗೆ ಸಂವಿಧಾನದ‌ ಮೇಲೆ ‌ನಂಬಿಕೆ ಇದೆ. ಹಾಗಾಗಿ, ಅವರಿಗೆ ಬೆಂಬಲ ನೀಡುತ್ತೇವೆ” ಎಂದರು.

ಚಾಲನಾ ಸಮಿತಿಯ ರಾಜ್ಯ ಸಂಯೋಜಕ ಎನ್‌.ವೆಂಕಟೇಶ್, ರಾಜ್ಯ ಸಂಯೋಜಕ ಗುರುಪ್ರಸಾದ್ ಕೆರಗೋಡು, ಮಾವಳ್ಳಿ ಶಂಕರ್‌, ವಿ.ನಾಗರಾಜ್‌,  ಅಣ್ಣಯ್ಯ, ಜಿಗಣಿ ಶಂಕರ್‌, ವಿ. ನಾರಾಯಣಸ್ವಾಮಿ, ಬಿ.ಶ್ರೀರಂಗ, ದಸಂಸ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X