ತಡರಾತ್ರಿ ನಡು ರಸ್ತೆಯಲ್ಲಿ ಪ್ರಯಾಣಿಕರಿಗೆ ಹುಲಿ ಪ್ರತ್ಯಕ್ಷವಾದ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ಕೊಡಗಿನ ಪೊನ್ನಂಪೇಟೆ ತಾಲೂಕಿನ ನಾಲ್ಕೇರಿ-ಕುಟ್ಟ ಮಾರ್ಗದ ರಸ್ತೆಯಲ್ಲಿ ಹುಲಿ ಪ್ರಯಾಣಿಕರಿಗೆ ಪ್ರತ್ಯಕ್ಷವಾಗಿದೆ.
ರಸ್ತೆಯಲ್ಲಿ ಹಾಯಾಗಿ ಮಲಗಿದ್ದ ಹುಲಿ, ಪ್ರಯಾಣಿಕರ ವಾಹನದ ಲೈಟ್ ಕಂಡ ಬಳಿಕ ರೈತರ ತೋಟದಲ್ಲಿ ಮರೆಯಾಗಿದೆ. ವಿರಾಜಪೇಟೆ ಕಡೆಗೆ ಹೊರಟ್ಟಿದ್ದ ಖಾಸಗಿ ವಾಹನದಲ್ಲಿದ್ದ ಪ್ರಯಾಣಿಕರು, ರಸ್ತೆಯಲ್ಲಿ ಹುಲಿ ನೋಡಿ ಬೆಚ್ಚಿ ಬಿದ್ದಿದ್ದಾರೆ.
ಬೃಹತ್ ಗಾತ್ರದ ವ್ಯಾಘ್ರ ಕಂಡು ಹೌಹಾರಿದ ಪ್ರಯಾಣಿಕರು, ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ರಾತ್ರಿ ಸುಮಾರು 9.30ರ ಸುಮಾರಿಗೆ ಹುಲಿ ದರ್ಶನವಾಗಿರುವುದಾಗಿ ತಿಳಿದುಬಂದಿದೆ.
