ಒಂದು ದೇಶ-ಒಂದು ಚುನಾವಣೆ | ಮೋದಿ ಸರ್ಕಾರದ ದುಷ್ಟ ಉದ್ದೇಶ ಅನಾವರಣ: ಸಿಎಂ ಸಿದ್ದರಾಮಯ್ಯ ಕಿಡಿ

Date:

Advertisements

‘ಒಂದು ದೇಶ-ಒಂದು ಚುನಾವಣೆ’ಯ ಪ್ರಸ್ತಾವದ ಬಗ್ಗೆ ವಿರೋಧ ಪಕ್ಷಗಳ ಜೊತೆ ಸಮಾಲೋಚನೆಯನ್ನೂ ಮಾಡದೆ ತರಾತುರಿಯಲ್ಲಿ ಅನುಷ್ಠಾನಕ್ಕೆ ತರಲು ಹೊರಟಿರುವುದು ನರೇಂದ್ರ ಮೋದಿ ಸರ್ಕಾರದ ದುಷ್ಟ ಉದ್ದೇಶವನ್ನು ಅನಾವರಣಗೊಳಿಸಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ‘ಒಂದು ದೇಶ-ಒಂದು ಚುನಾವಣೆ’ಯ ಪ್ರಸ್ತಾವ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, “ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದುದು ಮಾತ್ರವಲ್ಲ ಈ ಪ್ರಸ್ತಾವವನ್ನು ಅನುಷ್ಠಾನಗೊಳಿಸಲು ಕೂಡಾ ಅಸಾಧ್ಯವಾದುದು” ಎಂದಿದ್ದಾರೆ.

“ಒಂದು ಸರ್ಕಾರದ ಆದ್ಯತೆಗಳು ಏನಿರಬೇಕೆಂಬ ಸಾಮಾನ್ಯ ಜ್ಞಾನವೂ ಕೇಂದ್ರ ಸರ್ಕಾರಕ್ಕಾಗಲಿ, ಪ್ರಧಾನಮಂತ್ರಿಯವರಿಗಾಗಲಿ ಇದ್ದ ಹಾಗೆ ಕಾಣುವುದಿಲ್ಲ. ದೇಶಾದ್ಯಂತ ನಿರುದ್ಯೋಗ ತಾಂಡವವಾಡುತ್ತಿದೆ, ಹಣದುಬ್ಬರದಿಂದ ದೇಶದ ಆರ್ಥಿಕತೆ ತತ್ತರಿಸುತ್ತಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದ ಜನ ಬವಣೆಪಡುತ್ತಿದ್ದಾರೆ. ದೇಶಾದ್ಯಂತ ಕಾನೂನು ಸುವ್ಯವಸ್ಥೆ ಮೇಲಿನ ನಿಯಂತ್ರಣ ತಪ್ಪಿಹೋಗಿದ್ದು, ದಲಿತರು ಮತ್ತು ಮಹಿಳೆಯರ ಮೇಲೆ ದೌರ್ಜನ್ಯಗಳು ಮಿತಿಮೀರಿ ಹೋಗುತ್ತಿದೆ. ಈ ಬಗ್ಗೆ ಯೋಚನೆ ಮಾಡಲು ಕೂಡಾ ಪುರುಸೊತ್ತಿಲ್ಲದ ಪ್ರಧಾನ ಮಂತ್ರಿಗಳು ‘ಒಂದು ದೇಶ-ಒಂದು ಚುನಾವಣೆ’ ಎಂಬ ಗಿಮಿಕ್ ಮೂಲಕ ಜನರ ಗಮನವನ್ನು ಬೇರೆ ಕಡೆ ಸೆಳೆದು ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಹೊರಟಿದ್ದಾರೆ” ಎಂದು ಹರಿಹಾಯ್ದಿದ್ದಾರೆ.

Advertisements

“ಆಡಳಿತಾರೂಢ ಬಿಜೆಪಿ ಪಕ್ಷದ ಗುಪ್ತ ಅಜೆಂಡಾವನ್ನು ಒಳಗೊಂಡಿರುವ “ಒಂದು ದೇಶ ಒಂದು ಚುನಾವಣೆ” ಪ್ರಸ್ತಾವವನ್ನು ಸಂಸತ್ ನ ಒಳಗೆ ಮತ್ತು ಹೊರಗೆ ನಮ್ಮ ಪಕ್ಷ ಎದುರಿಸಲಿದೆ. ದೇಶದ ಜನಾಭಿಪ್ರಾಯವೂ ‘ಒಂದು ದೇಶ ಒಂದು ಚುನಾವಣೆ’ ವ್ಯವಸ್ಥೆಗೆ ವಿರುದ್ಧವಾಗಿದೆ” ಎಂದಿದ್ದಾರೆ.

“ಒಂದು ದೇಶ-ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೆ ವಿಧಾನಸಭೆಯಲ್ಲಿ ಆಡಳಿತಾರೂಢ ಪಕ್ಷ ವಿಶ್ವಾಸಮತ ಗಳಿಸಲು ಸೋತುಹೋಗುವ ಸಂದರ್ಭದಲ್ಲಿ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾವದಲ್ಲಿ ಪರಿಹಾರ ಇಲ್ಲ. ಇಂತಹ ಸಂದರ್ಭದಲ್ಲಿ ಮಧ್ಯಂತರ ಚುನಾವಣೆಯೊಂದೇ ಯೋಗ್ಯ ಪರಿಹಾರವಾಗಿದೆ. ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತ ಪಕ್ಷ ಅಧಿಕಾರದಲ್ಲಿ ಮುಂದುವರಿಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗೆಯುವ ದ್ರೋಹವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.

“ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ-ಸಾಮರ್ಥ್ಯ ನಮ್ಮ ಈಗಿನ ಚುನಾವಣಾ ಆಯೋಗಕ್ಕೆ ಇಲ್ಲ. ಇದಕ್ಕಾಗಿ ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ” ಎಂದು ಹೇಳಿದ್ದಾರೆ.

“ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗಿದೆ. ಇದರ ಜೊತೆಗೆ ಸಂವಿಧಾನದ ಕನಿಷ್ಠ ಐದು ಪರಿಚ್ಛೇದಗಳಿಗೆ ತಿದ್ದುಪಡಿ ತರಬೇಕಾಗಿದೆ. ಈಗಿನ ವ್ಯವಸ್ಥೆಯಲ್ಲಿ ಸಂವಿಧಾನ ತಿದ್ದುಪಡಿಗೆ ಬೇಕಾದಷ್ಟು ಸದಸ್ಯರ ಸಂಖ್ಯೆಯನ್ನು ಹೊಂದಿಸಿಕೊಳ್ಳುವುದು ಎನ್‌ಡಿಎ ಗೆ ಕೂಡಾ ಕಷ್ಟ ಸಾಧ್ಯ. ಇವೆಲ್ಲವೂ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲವನ್ನು ಹುಟ್ಟುಹಾಕಿ ತಮ್ಮ ವೈಫಲ್ಯವನ್ನು ಮುಚ್ಚಿಹಾಕಲು ಈ ಪ್ರಸ್ತಾವವನ್ನು ಸಚಿವ ಸಂಪುಟ ಅಂಗೀಕರಿಸಿದೆ” ಎಂದು ಕಿಡಿಕಾರಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಕರ್ನಾಟಕ ರಾಜ್ಯ ಇರುವುದು ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದಲ್ಲಿ ಈಗ ನಡೆಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ಬೇರೆ ಬೇರೆ ದಾರಿಯಲ್ಲಿ ಸಾಗುತ್ತೇವೆ ಹೀಗಿರುವಾಗ ಕೇಂದ್ರ ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವುದು ರಾಜ್ಯ ಸರ್ಕಾರದ ಅನಿವಾರ್ಯವಾಗಿರುತ್ತದೆ. ಇಷ್ಟಕ್ಕೂ ಒಂದು ದೇಶ ಒಂದು ಚುನಾವಣೆ ಸುಮಾರು 10 ವರ್ಷದಿಂದ ಚರ್ಚೆಯಲ್ಲಿರುತ್ತದೆ ದೇಶದ ಬಡತನ ಎನ್ನುವ ನಿರುದ್ಯೋಗ ಬೆಲೆ ಏರಿಕೆ ರಾಜಕೀಯ ಅತಂತ್ರ ಬಹುಮತ ಸಹಮತ ಎನ್ನುವ ಪದಗಳು ದುಡಿದು ತಿನ್ನುವ ಮೇಲ್ವರ್ಗದ ಮತ್ತು ಮಾಧ್ಯಮ ವರ್ಗದ ಜನರಿಗೆ ಅರ್ಥವಾಗುವುದಿಲ್ಲ ಕೆಲವರ್ಗದ ಜನರು ರಾಜಕೀಯ,ಮತ್ತು ಎಣ್ಣೆ ವ್ಯಕ್ತಿಗಳು ಪದಾಧಿಕಾರಿಗಳು ಕಾರ್ಯಕರ್ತರು,ಸದಸ್ಯರು ಹೀಗೆ ಪಟ್ಟ ಕಟ್ಟಿಕೊಂಡು ಓಡಾಡುವ ಜನರಿಗೆ ಮಾತ್ರ ಇದೆಲ್ಲ ಅರ್ಥವಾಗುತ್ತೆ ಮತ್ತು ಬೆಂಬಲಿಸುತ್ತಾರೆ. ಸರಿಸುಮಾರು 75 ವರ್ಷದಿಂದ ಕೆಲವ ವರ್ಗದ ಜನರು ಕೆಲವರ್ಗದಲ್ಲೇ ಇದ್ದಾರೆ ಎರಡು ತಲೆಮಾರುಗಳು ಕಳೆದರೂ ಕೂಡ ಅವರ ವಂಶ ತಲೆಗಳು ಜಾಸ್ತಿ ಆಗಿದೆ ಹೊರತಾಗಿ ಯಾವುದೇ ಆರ್ಥಿಕ ಪರಿಸ್ಥಿತಿ ತಿಗಡಾಯಿಸಿಲ್ಲ ಯಾಕೆಂದರೆ ಅದಕ್ಕೆ ಶಿಕ್ಷಣ ಪದ್ಧತಿ ಸಾಮಾಜಿಕ ಪದ್ಧತಿ ಎಲ್ಲ ಸಮಾಜ ಕಾರ್ಯಕರ್ತ ಅಧಿಕಾರಿ ಕಣ್ಣರ ಹೇಳಿಕೆಗಳು ಪರಿಷ್ಕೃತ ಜೀವನದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಹೆಣ್ಣು ಮಕ್ಕಳ ಮತ್ತು ಗಂಡು ಮಗುವಿನ ಸಮಾನತೆಯ ತಾರತಮ್ಯ ಘೋಷಣೆ ಇದಕ್ಕೆ ಅನುಗುಣವಾಗಿ ಪೋಷಕರು ಒಂದು ಕುಟುಂಬದಲ್ಲಿ ತಂದೆ ತಾಯಿ ಮಕ್ಕಳ ಮತ್ತು ಮೊಮ್ಮಕ್ಕಳ ವ್ಯವಸ್ಥಿತ ಜೀವನ ಸಾಗಿಸುವ ಮಟ್ಟ ತಿಳುವಳಿಕೆ ವಿಫಲವಾಗುವುದರಿಂದ ಹೈ ದರ್ಗಾ ಘಟನೆಗಳು ನಡೆಯುವುದು ಬಹಳವಾಗಿದೆ, ಮತ್ತೊಂದು ವಿಚಾರ ಕೇಂದ್ರ ಮತ್ತು ರಾಜ್ಯ ಏನೆಂದು ಸರ್ವಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ವಿವರಿಸಬೇಕು ಕೇಂದ್ರ ಮತ್ತು ರಾಜ್ಯ ಯಾವ ದೇಶದಲ್ಲಿದೆ ಮತ್ತು ಇದರ ಒಡಂಬಡಿಕೆಗಳೇನು ಯಾವ ರೀತಿ ಜನರ ದುಡ್ಡು ಮತ್ತು ಜೀವನ ಹೇಗೆ ಸಾಗುತ್ತದೆ ಯಾವ ಯಾವ ವಸ್ತುಗಳು ರಾಜ್ಯದಿಂದ ಕೇಂದ್ರದಿಂದ ಸಾಮಾನ್ಯ ಜನರಿಗೆ ತಲುಪುತ್ತವೆ ಯಾವ ವಸ್ತುವಿಗೆ ಕೇಂದ್ರಕ್ಕೆ ಮತ್ತು ರಾಜ್ಯಕ್ಕೆ ಎಷ್ಟು ಕಟ್ಟಬೇಕು ಎಂದು ಪ್ರತಿಯೊಂದು ವಸ್ತುವಿನ ಮೇಲೆ ಲಿಖಿತ ರೂಪದಲ್ಲಿ ಕೊಡಬೇಕು, ಸರಿ ಸುಮಾರು ನಮ್ಮ ಕರ್ನಾಟಕ ರಾಜ್ಯದಲ್ಲಿ ಎಂಟು ಕೋಟಿ ಜನಸಂಖ್ಯೆ ಅದರಲ್ಲಿ ಪೆಟ್ರೋಲ್ ಡೀಸೆಲ್ ಹಾಕಿಸುವವರ ಸಂಖ್ಯೆ ಒಂದುವರೆ ಕೋಟಿ ಒಂದು ದಿನಕ್ಕೆ ಬೆಳಗ್ಗೆಯಿಂದ ಸಾಯಂಕಾಲಕ್ಕೆ ಒಂದುವರೆ ಕೋಟಿ ಪ್ರತಿ ಲೀಟರ್ಗೆ ಒಂದು ರೂಪಾಯಿ ಹೇಳಿದರೆ ಸಂಜೆ ಒಂದು ಕೋಟಿ ಒಂದುವರೆ ಕೋಟಿ ರೂಪಾಯಿ ರಾಜ್ಯ ಸರ್ಕಾರಕ್ಕೆ ಜಮಯಾಗುತ್ತದೆ ಸರಿಸುಮಾರು 3 ಕೋಟಿ ಜನರ ಹಾಲಿನ ದರ ಎರಡು ರೂಪಾಯಿ ಹಿಡಿದರೆ 3 ಕೋಟಿ ರೂಪಾಯಿ ಸಾಯಂಕಾಲ ಪ್ರತಿ ಜಿಲ್ಲೆಗೆ ಜಮವಾಗುತ್ತದೆ ಇನ್ನೂ ಅತಿ ಹೆಚ್ಚಿನ ಆದಾಯ ವಿರುವ ಅಬಕಾರಿ 1000 ಜಮೆ ಆಗುತ್ತದೆ ಒಂದು ದಿನಕ್ಕೆ ಜಮಯಾಗುವ ಕುಟುಂಬಗಳ ಸಂಖ್ಯೆ ಒಂದು ಕೋಟಿ ಇನ್ನುಳಿದ ವಸ್ತುಗಳ ಬೆಲೆ ರಾಜ್ಯದ ಜನರು ಲೆಕ್ಕ ಹಾಕಿಕೊಳ್ಳಬೇಕಾಗಿ ವಿನಂತಿ ಕೇಂದ್ರ ಸರ್ಕಾರಕ್ಕೆ ಕಟ್ಟಬೇಕಾದ ಶುಲ್ಕ ಜಿಎಸ್‌ಟಿ ಅದು ಒಂದು ಪಾಲಾದರೆ ರಾಜ್ಯ ಸರ್ಕಾರಕ್ಕೆ ಕಟ್ಟಬೇಕಾದ ಎಸ್‌ಎಸ್‌ಟಿ ಪಾಲು ಮತ್ತೊಂದು ಎರಡು ಸರ್ಕಾರಗಳು ತಮ್ಮ ಮನಸ್ಸು ಇಚ್ಛೆ ದರಗಳನ್ನು ನಿಗದಿ ಮಾಡಬಹುದಾಗಿದೆ ಇದು ಸಮಸ್ತ ಸಾರ್ವಜನಿಕರಿಗೆ ತಿಳುಪಡಿಸಬೇಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X