ಕಲಬುರಗಿ | ಹೈದರಾಬಾದ್ ಕರ್ನಾಟಕ ವಿಮೋಚನೆಗೆ ಹೋರಾಟಗಾರರ ಶ್ರಮವಿದೆ: ತಹಶೀಲ್ದಾರ್ ನಾಗಯ್ಯ ಹಿರೇಮಠ

Date:

Advertisements

ಕೇಂದ್ರದ ಮಾಜಿ ಗೃಹಮಂತ್ರಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ರ ದಿಟ್ಟತನದ ನಿರ್ಧಾರದಿಂದ ಹೈದರಾಬಾದ್ ಕರ್ನಾಟಕ ಪ್ರದೇಶ ಭಾರತ ಒಕ್ಕೂಟ ಸೇರಲು‌ ಅನುಕೂಲವಾಗಿದೆ ಎಂದು ಚಿತ್ತಾಪುರ ತಹಶೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ
ಉತ್ಸವ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

“ರಮಾನಂದ ತೀರ್ಥ, ಬಸಪ್ಪ ಸಜ್ಜನಶೆಟ್ಟಿ, ಶರಣಗೌಡ ಇನಾಮದಾರ ಸೇರಿದಂತೆ ಅನೇಕ ಹೋರಾಟಗಾರರ ಶ್ರಮದಿಂದ ಇಂದಿನ ಕಲ್ಯಾಣ ಕರ್ನಾಟಕ ಅಭಿವೃದ್ದಿಯಾಗುತ್ತಿದೆ. ರಾಜ್ಯಸಭೆ ವಿರೋಧಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್ ಅವರ ಯಶಸ್ಸಿನಿಂದ 371(ಜೆ) ಜಾರಿಗೊಳಿಸಿದ್ದಾರೆ. ಇದರ ಪ್ರತಿಫಲವಾಗಿ ನಾನು ತಹಶೀಲ್ದಾರ್ ಆಗಿ ನೇಮಕವಾಗಿದ್ದೇನೆ. ಕಡ್ಡಾಯವಾಗಿ ಪ್ರತಿಯೊಬ್ಬರೂ ಶಿಕ್ಷಣ ಕಲಿಯಬೇಕು. ತಮ್ಮ ಎಲ್ಲ ಮಕ್ಕಳನ್ನೂ ಶಾಲೆಗೆ ಕಳುಹಿಸಬೇಕು” ಎಂದರು.

Advertisements

ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ ಮಾತನಾಡಿ, “ಮುಂಬಡ್ತಿಯಲ್ಲಿ ದೋಷಗಳು ಇರುವುದರಿಂದ 371(ಜೆ) ಕಾಯ್ದೆಯಲ್ಲಿ ತಿದ್ದುಪಡಿ ಮಾಡಬೇಕಾಗಿದೆ” ಎಂದರು.

ಇದೇ ವೇಳೆ ಕ್ಷೇತ್ರ ಶಿಕ್ಷಣ ಇಲಾಖೆಯ ಮಲಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಗೀತಾ ಯಡ್ರಾಮಿ, ಆಶಾ ಕಾರ್ಯಕರ್ತೆ ವಿಜ್ಜುಬಾಯಿ, ಪಿಡಬ್ಲ್ಯೂಡಿ ಇಲಾಖೆಯ ಮಹ್ಮದ್ ಮೌಸೀನ್ ಅವರನ್ನು ಉತ್ತಮ ಸರ್ಕಾರಿ ನೌಕರರೆಂದು ಸನ್ಮಾನಿಸಿ ಗೌರವಿಸಿದರು. ‌

ಈ ಸುದ್ದಿ ಓದಿದ್ದೀರಾ? ಮಂಡ್ಯ | ನಗರಸಭೆಯ ನಿರ್ಲಕ್ಷ್ಯಕ್ಕೆ ಮುಚ್ಚಿದ ಶೌಚಾಲಯ; ಸಾರ್ವಜನಿಕರ ಪರದಾಟ

ತಾ.ಪಂ ಇಒ ಆಕ್ರಂ ಪಾಶಾ, ಪಿಎಸ್‌ಐ ಚಂದ್ರಾಮಪ್ಪ, ತಾಲೂಕಿನ ವಿವಿಧ ಅಧಿಕಾರಿಗಳಾದ ಪಂಡಿತ್ ಸಿಂಧೆ, ಶಶಿಧರ ಬಿರಾದಾರ್, ಸವಿತಾ ಗೋಣಿ, ವಿಜಯಕುಮಾರ ಬಡಿಗೇರ, ಮಲ್ಲಿಕಾರ್ಜುನ ಸೇಡಂ, ಪ್ರಲ್ಹಾದ ವಿಶ್ವಕರ್ಮ, ಅಶ್ವಥನಾರಾಯಣ ಕುಲಕರ್ಣಿ,
ಸುನಿಲ ಯನಗುಂಟಿಕರ್, ಲಕ್ಷ್ಮೀನಾರಾಯಣ, ವಿಠಲ ಬಂಡಗಾರ ಸೇರಿದಂತೆ ಇತರರು ಇದ್ದರು.

ವರದಿ : ಸಂತೋಷಕುಮಾರ್‌ ಕಟ್ಟಿಮನಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X