ಕನಕಪುರ ತಾಲೂಕು ಆಡಳಿತವು ನಿಷ್ಕ್ರಿಯವಾಗಿದ್ದು, ಖಾಸಗಿ ಪ್ರಭಾವಿಯ ಅಧೀನದಲ್ಲಿರುವುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಸಿಕ್ಕಿರುವ ದಾಖಲೆಗಳ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮವಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಿದ್ದೇನೆ ಎಂದು ಜೀವನ ಟ್ರಸ್ಟ್ ಅಧ್ಯಕ್ಷ ಹಾಗೂ ಕೆಆರ್‌ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ತಿಳಿಸಿದ್ದಾರೆ.
ಕನಕಪುರ ತಾಲೂಕು ಕಚೇರಿಯಲ್ಲಿ ನಿಯಮ ಬಾಹಿರವಾಗಿ ಅಸಾಂವಿಧಾನಿಕ ಹುದ್ದೆಯಾದ ಗ್ಯಾರಂಟಿ ಯೋಜನೆಗಳ ಸಮಿತಿಯ ತಾಲೂಕು ಅಧ್ಯಕ್ಷರಿಗೆ ಕೊಠಡಿ ನೀಡಿ, ನವೀಕರಿಸಿ, ಅದ್ದೂರಿಯಾಗಿ ಉದ್ಘಾಟನೆ ಮಾಡಲಾಗಿದೆ ಎಂದು ಮಾಹಿತಿ ತಿಳಿಸಿದರು.
ಈ ನಿಯಮಬಾಹಿರ ಕೊಠಡಿ ನೀಡಿಕೆ ಸಂಬಂಧ ಈಗಾಗಲೇ ನಾನು ಕನಕಪುರ ತಾಲೂಕು ಕಚೇರಿಯ ತಹಶೀಲ್ದಾರ್ ಕಚೇರಿಯಿಂದ ಅಧೀಕೃತ ಮಾಹಿತಿ ಪಡೆದಿದ್ದು, ಕೊಠಡಿ ನೀಡಲು ಯಾವುದೇ ಉನ್ನತಾಧಿಕಾರಿಗಳಿಂದ ಆದೇಶ ನೀಡಿರುವುದಿಲ್ಲ ಎಂದರು.
ಇದನ್ನು ಓದಿದ್ದೀರಾ? ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶರಿಂದ ಮತ್ತೊಂದು ಅಸಹ್ಯಕರ ಹೇಳಿಕೆ: ವ್ಯಾಪಕ ಖಂಡನೆ
ತಾಲೂಕು ಕಚೇರಿ ಸರ್ಕಾರಿ ಕಚೇರಿಯಾಗಿದ್ದು, ಇಲ್ಲಿ ಕೊಠಡಿ ನವೀಕರಣಕ್ಕೆ ಖಾಸಗಿ ವ್ಯಕ್ತಿಯಿಂದ ವೈಯಕ್ತಿಕ ಹಣ ವ್ಯಯಿಸುವುದು ಕೂಡ ನಿಯಮ ಬಾಹಿರ. ಹಾಗಿದ್ದರೂ, ಕೂಡ ಕಾನೂನು ಮೀರಿ ಕೊಠಡಿಯನ್ನು ನೀಡಿರುವ ಪ್ರಕರಣವು ಗಂಭೀರವಾಗಿದೆ. ಇದರ ಎದುರು ನ್ಯಾಯಾಲಯದಲ್ಲಿ ಹೋರಾಟ ಮಾಡಲಾಗುವುದು ಎಂದು ಕೆಆರ್‌ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ ತಿಳಿಸಿದ್ದಾರೆ.
