ಕನಕಪುರ | ಶಾಸಕ ಸ್ಥಾನದಿಂದ ಮುನಿರತ್ನರನ್ನು ವಜಾಗೊಳಿಸಿ: ದಲಿತ, ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

Date:

Advertisements

ಕನಕಪುರದಲ್ಲಿ ಶುಕ್ರವಾರದಂದು ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಮುಂದಾಳತ್ವದಲ್ಲಿ ಶಾಸಕ ಮುನಿರತ್ನರನ್ನು ಶಾಸಕ ಸ್ಥಾನ ವಜಾ ಮಾಡಿ, ಗಡಿಪಾರು ಮಾಡಬೇಕೆಂದು ಪ್ರತಿಭಟನೆ ನಡೆಸಲಾಯಿತು.

ನಗರದ ಚನ್ನಬಸಪ್ಪ ವೃತ್ತದಲ್ಲಿರುವ ಅಶೋಕ ಸ್ಥಂಭದ ಬಳಿ ನೂರಾರು ಪ್ರತಿಭಟನಾಕಾರರು ಜಮಾವಣೆಗೊಂಡು, ಮುನಿರತ್ನ ವಿರುದ್ದ ಘೋಷಣೆಗಳನ್ನು ಕೂಗುತ್ತಾ ಎಂಜಿ ರಸ್ತೆಯ ಮೂಲಕ ತಾಯಿ ಮತ್ತು ಮಗು ಆಸ್ಪತ್ರೆ ವೃತ್ತದವರೆಗೆ ಸಾಗಿದರು.

ನಂತರ, ಅವರು ರೂರಲ್ ಕಾಲೇಜು ಮುಂಭಾಗ ತಲುಪಿ, ರಸ್ತೆಯಲ್ಲಿ ನೂರಾರು ಜನರಿಂದ ಬೃಹತ್ ಮಾನವ ಸರಪಳಿ ರಚಿಸಿದರು. ಈ ಪ್ರಕ್ರಿಯೆ ಒಂದು ಗಂಟೆಗೂ ಹೆಚ್ಚು ಕಾಲ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸಪಟ್ಟರು.

Advertisements

ಈ ವೇಳೆ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದ ಹಿರಿಯ ದಲಿತ ಮುಖಂಡ ಜೆ ಎಂ ಶಿವಲಿಂಗಯ್ಯ ಮಾತನಾಡಿ, “ಮುನಿರತ್ನ ದಲಿತ ಹಾಗೂ ಒಕ್ಕಲಿಗ ಸಮುದಾಯವನ್ನು ನಿಂದಿಸಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾನೆ. ಇಂತಹ ವ್ಯಕ್ತಿಯನ್ನು ಒಂದು ಕ್ಷಣವೂ ಇಲ್ಲಿ ಇರಿಸಬಾರದು, ಶಾಶ್ವತವಾಗಿ ಗಡಿಪಾರು ಮಾಡಬೇಕು. ಇಂತಹವರಿದ್ದರೆ ದಲಿತರು, ಹಿಂದುಳಿದವರು ಹಾಗೂ ಮಹಿಳೆಯರು ಶಾಂತಿಯಾಗಿ ಬದುಕಲು ಸಾಧ್ಯವಿಲ್ಲ” ಎಂದರು.

ಕನಕಪುರ2

ಪ್ರಗತಿಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, “ಶಾಸಕರ ಹೇಳಿಕೆ ಅಮಾನವೀಯವಾಗಿದೆ. ಬಿಜೆಪಿ ತಕ್ಷಣವೇ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ನ್ಯಾಯಾಲಯವು ಇಂತಹವರಿಗೆ ಜಾಮೀನು ನೀಡುವುದು ಸರಿಯಲ್ಲ. ಇವರು ಪರಿವರ್ತನೆಗೊಳ್ಳುವುದು ಕಷ್ಟ. ಇಂತಹವರು ಸಮಾಜಕ್ಕೆ ಅಪಾಯವಾಗಿರುವುದರಿಂದ ಅವರನ್ನು ಜೈಲಿನಲ್ಲಿರಿಸಬೇಕು” ಎಂದು ಹೇಳಿದರು.

ದಲಿತ ಮುಖಂಡ ಮಲ್ಲಿಕಾರ್ಜುನ ಮಾತನಾಡಿ, ಶಾಸಕ ಮುನಿರತ್ನರ ಹಿನ್ನೆಲೆಯನ್ನು ಗಮನಿಸಿದರೆ ರೌಡಿಸಂ ಹಿನ್ನೆಲೆಯಿಂದ ಬಂದವರು. ಇಂತವರಿಂದ ಕೀಳು ವರ್ತನೆಯಲ್ಲದೆ ಮತ್ತೇನು ನಿರೀಕ್ಷಿಸಲು ಸಾಧ್ಯ ಎಂದರು.

ರೈತ ಸಂಘದ ಚೀಲೂರು ಮುನಿರಾಜು ಮಾತನಾಡಿ, ಯಾವುದೇ ಸಮುದಾಯದ ಅವಹೇಳನ ಕ್ಷಮೆಗೆ ಅರ್ಹವಲ್ಲ ಎಂದು ಹೇಳಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಬಳಿಕ ಮಾತನಾಡಿದ ತಹಶೀಲ್ದಾರ್ ಮಂಜುನಾಥ್,”ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸಿ ಪ್ರತಿಕ್ರಿಯೆ ಬಂದ ನಂತರ ತಮಗೆ ತಿಳಿಸುತ್ತೇನೆ” ಎಂದರು.

ಇದನ್ನು ಓದಿದ್ದೀರಾ? ಉಡುಪಿ | ವಿದ್ಯಾರ್ಥಿಗಳು ಪ್ರಶ್ನಿಸುವ ಗುಣವನ್ನು ಬೆಳೆಸಿಕೊಳ್ಳಬೇಕು: ಚಿಂತಕ ಶಿವಸುಂದರ್

ಪ್ರತಿಭಟನೆಯಲ್ಲಿ ದಲಿತಪರ ಮುಖಂಡರಾದ ಪ್ರಶಾಂತ್ ಹೊಸದುರ್ಗ, ಮಳಗಾಳು ದಿನೇಶ್, ನಟರಾಜ್, ನೀಲಿ ರಮೇಶ್, ನವೀನ್ ಕುಮಾರ್, ಛಲವಾದಿ ನವೀನ್, ರಾಜ್ ಕೆಆರ್‌ಎಸ್ ಪಕ್ಷದ ಶಿವಮ್ಮ, ಗೋಪಿ, ಸೋಮಣ್ಣ, ಜೀವನ್, ಕನ್ನಡ ಭಾಸ್ಕರ್, ಶೇಷಣ್ಣ , ಮಲ್ಲೇಶ್, ಶಾಂತಣ್ಣ, ಗುಂಡಣ್ಣ, ಕುರುಬರಹಳ್ಳಿ ನವೀನ್, ನಲ್ಲಹಳ್ಳಿ ಶ್ರೀನಿವಾಸ್, ಮುಂತಾದವರು ಹಾಜರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X