ಇದ್ದೂ ಸತ್ತಂತಿದೆ ‘ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ’

Date:

Advertisements

ಕರ್ನಾಟಕ ರಾಜ್ಯದ ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿರುವ 50 ಬುಡಕಟ್ಟು ಸಮುದಾಯಗಳ ಸಂಶೋಧನೆ, ತರಬೇತಿ, ಮೌಲ್ಯಮಾಪನ, ಕುಲಶಾಸ್ತ್ರೀಯ ಅಧ್ಯಯನ, ಜಾಗೃತಿ ಕಾರ್ಯಕ್ರಮಗಳು, ಸಾಕ್ಷಾಚಿತ್ರ ನಿರ್ಮಾಣ, ಗ್ರಂಥಾಲಯ ಹಾಗೂ ಬುಡಕಟ್ಟು ವಸ್ತುಸಂಗ್ರಹಾಲಯ ಸ್ಥಾಪನೆ ಹಾಗೂ ಸರ್ಕಾರಗಳ ಕಾರ್ಯಕ್ರಮಗಳ ಕುರಿತು ಕಾರ್ಯಾಗಾರಗಳ ಮೂಲಕ ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ವರದಿಗಳನ್ನು ಸಿದ್ದಪಡಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ಆರಂಭಿಸಲಾಗಿದೆ. ಈ ಸಂಸ್ಥೆ, ಇದ್ದೂ ಇಲ್ಲದಂತಾಗಿದೆ.

2009ರಲ್ಲಿ ಬೆಂಗಳೂರಿನಲ್ಲಿ ರಚನೆಯಾದ ಸಂಸ್ಥೆಯನ್ನು 2010ರಲ್ಲಿ ಬುಡಕಟ್ಟು ಸಮುದಾಯಗಳು ಹೆಚ್ಚಾಗಿರುವ ಮೈಸೂರಿಗೆ ಸ್ಥಳಾಂತರಿಸಲಾಯಿತು. ಇದರಿಂದ, ಬುಡಕಟ್ಟು, ಆದಿವಾದಿ ಸಮುದಾಯಗಳೊಂದಿಗೆ ಕೆಲಸ ಮಾಡಲು ಹೆಚ್ಚಿನ ಅನುಕಾಲವಾಗುತ್ತದೆ ಎಂಬ ಆಶಯವಿತ್ತು. ಸಂಸ್ಥೆ ಆರಂಭವಾಗಿ ಈಗ ಬರೋಬ್ಬರಿ 15 ವರ್ಷಗಳನ್ನು ಪೂರೈಸಿದೆ. ಸರ್ಕಾರಗಳಿಂದ ಸುಮಾರು 30 ಕೋಟಿ ರೂ. ಅನುದಾನ ಪಡೆಯಲಾಗಿದ್ದು, ಸುಮಾರು 200ಕ್ಕೂ ಹೆಚ್ಚು ಸಂಶೋಧನಾ ವರದಿಗಳು ಹಾಗೂ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂದು ಸಂಸ್ಥೆ ಹೇಳಿಕೊಳ್ಳುತ್ತಿದೆ. ಆದರೆ, ಸಂಸ್ಥೆಯ ಒಂದೇ ಒಂದು ಸಂಶೋದನಾ ವರದಿಯೂ ಈವರೆಗೆ ಯೋಜನೆಗಳಾಗಿ ಜಾರಿಗೆ ಬಂದ ಉದಾಹರಣೆಗಳಿಲ್ಲ.

ಇಂದಿಗೂ, ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದೆ ಬುಡಕಟ್ಟು, ಆದಿವಾಸಿ ಸಮುದಾಯದ ಜನರು ಕಾಡು-ಮೇಡುಗಳಲ್ಲಿ ಅಲೆಯುತ್ತಾ, ದೈನಂದಿನ ಬದುಕಿಗಾಗಿ ಹರಸಾಹಸ ಪಡುತ್ತಿದ್ದಾರೆ. ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಈ ಸಂಸ್ಥೆ ಅಂತಹ ಸಮುದಾಯಗಳ ಅಭಿವೃದ್ಧಿಗೆ ಯಾವುದೇ ರೀತಿಯಲ್ಲಿಯೂ ಪೂರಕವಾಗಿಲ್ಲ ಎಂಬುದು ಅಕ್ಷರಶಃ ವಿಪರ್ಯಾಸದ ಸಂಗತಿ.

Advertisements

ಸಂಸ್ಥೆಯಲ್ಲಿ ಸಿದ್ದವಾಗುವ ಬಹುಪಾಲು ವರದಿಗಳು ಅನುದಾನಗಳ ಬಳಕೆಗಷ್ಟೇ ಸೀಮಿತವಾಗಿವೆ. ಸಂಸ್ಥೆಯ ಅಧಿಕಾರಿ, ಸಿಬ್ಬಂದಿಗಳು ಸಮುದಾಯಗಳ ವಾಸಸ್ಥಳಕ್ಕೆ ಹೋಗಿ, ಸಂಶೋಧನೆಗಳನ್ನು ನಡೆಸದೆ, ಕಚೇರಿಯಲ್ಲಿಯೇ ಕುಳಿತು ತಮ್ಮ ಗ್ರಹಿಕೆಗೆ ತಕ್ಕಂತೆ ವರದಿಗಳನ್ನು ಸಿದ್ದಪಡಿಸುತ್ತಿದ್ದಾರೆ ಎಂಬ ಆರೋಪಗಳೂ ಇವೆ. ಹೀಗೆ, ಸಿದ್ದಗೊಳಿಸಿದ ಕೆಲವು ವರದಿಗಳೂ ಕೂಡ ಸರ್ಕಾರಕ್ಕೆ ಸಲ್ಲಿಯಾಗದೆ ಸಂಸ್ಥೆಯ ಕಚೇರಿಯಲ್ಲಿಯೇ ಧೂಳು ಹಿಡಿಯುತ್ತಿವೆ. ಅದಾಗ್ಯೂ, ಈ ವರದಿಗಳು ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ವಾಸ್ತವ ಸ್ಥಿತಿಗತಿಗಳನ್ನು ನಿರೂಪಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಈ ಸಮುದಾಯಗಳೇ ಆರೋಪಿಸುತ್ತಿವೆ.

ಸಂಸ್ಥೆ ಆರಂಭವಾದ ಬಳಿಕ ಈವರೆಗೆ ನಾಲ್ವರು ನಿರ್ದೇಶಕರು ಸಂಸ್ಥೆಯ ಆಡಳಿತ ನಡೆಸಿದ್ದಾರೆ. ಅವರಲ್ಲಿ, ಒಬ್ಬರು ತಮ್ಮೆಲ್ಲಾ ಪ್ರಭಾವಗಳನ್ನು ಬಳಸಿಕೊಂಡು ಸುಮಾರು 10 ವರ್ಷಕ್ಕೂ ಹೆಚ್ಚಿನ ಕಾಲ ಸಂಸ್ಥೆಯಲ್ಲಿಯೇ ಇದ್ದರು. ಆದರೆ, ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ನಿರಂತರ ಹೋರಾಟಕ್ಕೆ ಮಣಿದ ಹಿಂದಿನ ಸರ್ಕಾರ, ಅವರನ್ನು ವರ್ಗಾವಣೆ ಮಾಡಿತು. ಆದರೂ, ಅವರು ಇದೇ ಹುದ್ದೆಗೆ ಬರಲು ಈಗಲೂ ನಿರಂತರವಾಗಿ ಲಾಭಿ ಮಾಡುತ್ತಲೇ ಇದ್ದಾರೆ. ಇದರ ಹಿಂದಿನ ಮರ್ಮವಾದರೂ ಏನು ಎಂಬ ಪ್ರಶ್ನೆ ಕಾಡಕೊಡಗಿದೆ.

ಕಾಡಂಚಿನಲ್ಲಿ ವಾಸಿಸುತ್ತಿರುವ ಬುಡಕಟ್ಟು, ಆದಿವಾಸಿ ಸುಮುದಾಯಗಳನ್ನು ಪ್ರತಿನಿಧಿಸುವ ಏಕೈಕ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯದ ಬುಡಕಟ್ಟು ಸಂಶೋಧನಾ ಸಂಸ್ಥೆ, ತನ್ನ ಕರ್ತವ್ಯಗಳನ್ನು ಪಡೆದು, ಸಮುದಾಯಗಳನ್ನು ನಿರ್ಲಕ್ಷಿಸಿ, ಬೇಜವಾಬ್ದಾರಿತನದಿಂದ ಕಾರ್ಯನಿರ್ವಹಿಸುತ್ತಿದೆ. ಆದಿವಾಸಿ ಮತ್ತು ಬುಡಕಟ್ಟು ಸಮುದಾಯಗಳಿಗೆ ಆರೋಗ್ಯ ಶಿಬಿರಗಳು, ವಿಚಾರ ಸಂಕಿರಣಗಳು, ಕಾರ್ಯಗಾರಗಳನ್ನು ನಡೆಸಲು ಸಂಸ್ಥೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುತ್ತಿದ್ದರೂ, ಸಂಸ್ಥೆ ಯಾವುದೇ ಕೆಲಸ ಮಾಡುತ್ತಿಲ್ಲ ಎಂಬ ಆರೋಪಗಳು ಹಿಂದಿನಿಂದಲೂ ಇವೆ. ಆದರೆ, ಆರೋಪಗಳಿಗೂ ಸಂಸ್ಥೆ ತಲೆಕೆಡಿಸಿಕೊಳ್ಳದೆ, ಜಡ್ಡುಗಟ್ಟಿದೆ.

ಸಂಸ್ಥೆಯ ಕಾರ್ಯವೈಕರಿಯ ಬಗ್ಗೆ ಅಸಮಾಧಾನಗೊಂಡಿರುವ ಕೇಂದ್ರ ಸರ್ಕಾರ 2016ರಿಂದ ಈವರೆಗೆ ನಯಾಪೈಸೆ ಅನುದಾನ ಬಿಡುಗಡೆ ಮಾಡಿಲ್ಲ. ರಾಜ್ಯ ಸರ್ಕಾರ ಮಾತ್ರವೇ ಅನುದಾನ ನೀಡುತ್ತಿದೆ. ಆ ಅನುದಾನವನ್ನೂ ಸಂಸ್ಥೆ ಸಮರ್ಪಕವಾಗಿ ಬಳಸುತ್ತಿಲ್ಲ. ಪರಿಣಾಮ, ಸಮುದಾಯಗಳ ಅಭಿವೃದ್ಧಿ ವಿಚಾರದಲ್ಲಿ ಅನ್ಯಾಯವಾಗಿದೆ. ಬುಡಕಟ್ಟು ಸಮುದಾಯಗಳಿಗೆ ಸಂಬಂಧಿಸಿದ ಫೋಟೋ ಗ್ಯಾಲರಿ ಮಾಡುತ್ತೇವೆಂದು ರಾಜ್ಯ ಸರ್ಕಾರದಿಂದ ಅನುದಾನ ಪಡೆದಿದ್ದ ಸಂಸ್ಥೆ, ಸಮುದಾಯಗಳು ವಾಸಿವು ಸ್ಥಳಗಳಿಗೆ ತೆರಳಿ, ಫೋಟೋಗಳನ್ನು ಚಿತ್ರೀಕರಿಸದೆ, ಗೂಗಲ್‌ನಲ್ಲಿ ಫೋಟೋಗಳನ್ನು ಡೌನ್‌ಲೋಡ್ ಮಾಡಿಕೊಂಡು, ಗ್ಯಾಲರಿ ನಿರ್ಮಿಸಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು, ಸಂಸ್ಥೆಗೆ ಛೀಮಾರಿ ಹಾಕಿವೆ. ಆದರೂ, ಸಂಸ್ಥೆಯ ಅಧಿಕಾರಿಗಳು ತಮ್ಮ ನಿರ್ಲಜ್ಜತನವನ್ನು ಬಿಟ್ಟಿಲ್ಲ.

ಸಂಶೋಧನೆ ಬಗ್ಗೆ ಯಾವುದೇ ಅರಿವೂ ಇಲ್ಲದವರು ಸಂಸ್ಥೆಯಲ್ಲಿ ಸಂಶೋಧನಾಧಿಕಾರಿ, ಉಪನಿರ್ದೇಶಕರು ಹಾಗೂ ನಿರ್ದೇಶಕರಾಗಿ ನೇಮಕಗೊಳ್ಳುತ್ತಿದ್ದಾರೆ. ಅವರು, ಸಂಸ್ಥೆಗೆ ಬರುವ ಅನುದಾನವನ್ನು ಹೇಗೆ ಒಳಸಿಕೊಳ್ಳಬೇಕು ಎಂಬ ತಂತ್ರ ಎಣೆಯುವುದಕ್ಕಷ್ಟೇ ಸೀಮಿತವಾಗಿದ್ದಾರೆ.

ಈ ವರದಿ ಓದಿದ್ದೀರಾ?: ಬಿಜೆಪಿ ನಾಯಕರಿಂದ ರಾಹುಲ್ ಗಾಂಧಿಯನ್ನು ಮುಗಿಸುವ ಸಂಚು ನಡೆದಿದೆಯೇ?

ಬಹಳ ಮುಖ್ಯವಾಗಿ ಪ್ರಸ್ತುತ ಪ್ರಭಾರ ನಿರ್ದೇಶಕ ಡಾ. ರಾಜಕುಮಾರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾಗಿ ಹಾಗೂ ಇನ್ನೂ ಹಲವು ಇಲಾಖೆಗಳಲ್ಲಿ ಉನ್ನತ ಹುದ್ದೆಗಳನ್ನು ನಿಭಾಯಿಸಿ ಬಂದವರಾಗಿದ್ದಾರೆ. ಈಗಲೂ ಅವರಿಗೆ ಬೆಂಗಳೂರಿನ ವಿವಿಧ ಇಲಾಖೆಗಳಲ್ಲಿ ಪ್ರಭಾರಿ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ, ಅವರು ತಿಂಗಳಲ್ಲಿ ಒಮ್ಮೆ ಮಾತ್ರವೇ ಸಂಸ್ಥೆಗೆ ಬರುತ್ತಿದ್ದಾರೆ. ಅವರು ಈವರೆಗೂ ಆದಿವಾಸಿ, ಬುಡಕಟ್ಟು ಸಮುದಾಯದ ಜನರ ಕೈಗೆ ಸಿಕ್ಕಿಲ್ಲ. ಯಾವುದೇ ಸಭೆಗಳನ್ನು ನಡೆಸಲಾಗಿಲ್ಲ.

ಇದೆಲ್ಲ ಕಾರಣಗಳಿಂದಾಗಿ, ಭಾರತ ಸ್ವಾತಂತ್ರ್ಯಗೊಂಡು 76 ವರ್ಷಗಳು ಕಳೆದರೂ ಸರ್ಕಾರಗಳ ಹಲವಾರು ಯೋಜನೆಗಳು ಈವರೆಗೂ ಈ ಸಮುದಾಯಗಳಿಗೆ ತಲುಪುತ್ತಿಲ್ಲ. ಮೂಲ ಸೌಕರ್ಯಗಳೂ ಸಿಗುತ್ತಿಲ್ಲ. ಅಗತ್ಯ ದಾಖಲೆ, ದಾಖಲಾತಿಗಳೂ ಇಲ್ಲ. ಸರ್ಕಾರದ ಯೋಜನೆಗಳ ಬಗ್ಗೆ ಈ ಸಮುದಾಯಗಳಿಗೆ ಮಾಹಿತಿ ನೀಡಲೆಂದೇ 6.90 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಆದರೆ, ಅದೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಆದ್ದರಿಂದ, ಸಂಸ್ಥೆಯು ತನ್ನ ನಿರ್ಲಜ್ಜ, ಬೇಜವಾಬ್ದಾರಿ ಧೋರಣೆಯನ್ನು ಬದಿಗಿಟ್ಟು, ಕಾರ್ಯಪ್ರವೃತ್ತವಾಗಿ ಕೆಲಸ ಮಾಡಬೇಕು. ಸಮುದಾಯಗಳ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

25 COMMENTS

  1. ಆಯ್ತು ಸ್ವಾಮಿ, ನೀವು ಆ ವರದಿಗಳನ್ನು ಓದಿ ಯಾವುದು ಸರಿ ಇದೆ ಸರಿ ಇಲ್ಲ ತಿಳಿಸಬಹುದಲ್ಲವೇ? ಅಂತೆಯ ಕಂತೆ ಎಂದು ಈ ಲೇಖನದಲ್ಲಿ ಹೇಳಿದ್ದೀರಿ. ನೀವು ಸುಮ್ಮನೆ ಬೇಕಾಬಿಟ್ಟಿ ಈ ಲೇಖನ ಸಿದ್ಧಪಡಿಸಿದ್ದೀರಿ.

  2. ರಿ ಸ್ವಾಮಿ ಹಿಂದೆ ಇದ್ದ ನಿರ್ದೇಶಕರು ಏನು ಕೆಲಸ ಮಾಡಿಲ್ಲ ಅಂತ ಹೇಳಿದ್ದೀಯಾಲ್ಲ ಅವರ ಬಗ್ಗೆ ನೀನು ಚನ್ನಾಗಿ ತಿಳಿದುಕೊಳ್ಳಿ ಮೊದಲು ಬಾಡಿಗೆ ಇದ್ದ ಕಚೇರಿ ಇವತ್ತಿನ ದಿನಗಳಲ್ಲಿ ಸ್ವಂತ ಕಟ್ಟಡ ನಿರ್ಮಿಸಿಲು ಕಾರಣ ಹಿಂದೆ ಇದ್ದ ನಿರ್ದೇಶಕರು ಪ್ರೊ. ಟಿ ಟಿ ಬಸವನಗೌಡ ರವರು ಸ್ವಾಮಿ . ಅರಿವು ಕಾರ್ಯಕ್ರಮ. ಅರೋಗ್ಯ ಶಿಬಿರ. ವಿಚಾರ ಸಂಕಿರ್ಣ. ಲೆಕ್ಕ ವಿಲ್ಲದಷ್ಟು ಸಂಶೋಧನೆ. ಬುಡಕಟ್ಟು ಉತ್ಸವ. ಇನ್ನು ಮುಂತಾದ ಕೆಲಸ ಕಾರ್ಯಗಳನ್ನು ಯಶಸ್ವಿಯಾಗಿ ಮಾಡಿದ್ದಾರೆ. ಇಂಥವರ ಬಗ್ಗೆ ಮಾತಾಡೋಕೆ ನಿನಗೇನೂ ಗೊತ್ತು ಮೊದಲು ಸಂಸ್ಥೆಯಲ್ಲಿ ಸಂಶೋಧನೆ ಮಾಡಿರೋ ಪುಸ್ತಕಗಳನ್ನ ಹೋಗಿ ಓದಿ ತಿಳಿದುಕೋ ದಡ್ಡ ಏನು ತಿಳಿಯದೆ ಒಬ್ಬರ ಬಗ್ಗೆ ಈ ತರ ಎಲ್ಲ ಹೇಳೋದು ತಪ್ಪು ಮೊದಲು ನೀನು ಏನು ಮಾಡಿದ್ದಿಯ ಅನೋದನ್ನ ತಿಳಿದುಕೊ ಮೂರ್ಖ

  3. ರೀ ಸ್ವಾಮಿ ಹಿಂದೆ ಇದ್ದ ನಿರ್ದೇಶಕರು ಸಾಕಷ್ಟು ಕೆಲಸ ಮಾಡಿದ್ದಾರೆ ಅಂದ್ರೆ 2012 ರಿಂದ 2021 ರ ವರೆಗೆ ಸಾಕಷ್ಟು ಕೆಲಸ ಆಗಿದೆ ತಿಳ್ಕೊ ದಡ್ಡ. ದೊಡ್ಡ ಬಿಲ್ಡಿಂಗ್ ಆಗಿದೆ ಸಾಕಷ್ಟು ಕೆಲಸಗಳು ಆಗಿವೆ.
    ಈ ಸಂಸ್ಥೆ ಉದ್ದಾರ ಆಗ್ಬೇಕು ಅಂದ್ರೆ ಧಾರವಾಡ ವಿಶ್ವವಿದ್ಯಾನಿಲಯದ ನಿರ್ದೇಶಕರು ಅಂದ್ರೆ ಬಸವನಗೌಡರು ಸರ್ ಬಂದ್ರೆ ಮಾತ್ರ ಉದ್ದಾರ ಆಗುತ್ತೆ ತಿಳ್ಕೊಳ್ಳಿ..ಪ್ರಸ್ತುತ ಇರುವ ನಿರ್ದೇಶಕರು ಕಠಿಣ ಕ್ರಮ ಕೈಕೊಂಡು ಸಾಕಷ್ಟು ಕೆಲಸ ಮಾಡೋಕ್ಕೆ ಪ್ರಯತ್ನ ಮಾಡ್ತಿದ್ದಾರೆ ಅವರಿಗೆ ಅಭಿನಂದನೆಗಳು 🌹

  4. ಈಗ ತಾನೆ ಬಾಕ್ಸನಲ್ಲಿಹಾಕಿದ ಕಮೆಂಟ್ಸ್ ಪ್ರಕಟವಾಗಲಿಲ್ಲ ಕಾರಣ ತಿಳಿಸಿ

  5. ಅಚ್ಯುತ್ ಸರ್ ಅವರು ಹೇಳಿದ ಹಾಗೆ ಅಂತೆ ಕಂತೆ ಬರೆಯೋದು ಬೇಡ ವಾಸ್ತವ ವಿಷಯ ಈ ಜಗತ್ತಿಗೆ ತಿಳಿಸುವ ಪ್ರಯತ್ನ ಈ ಪತ್ರಿಕಾ ಮಾಧ್ಯಮ ಅದರಲ್ಲೂ ಎಲೆಕ್ಟ್ರಾನಿಕ್ ಮೀಡಿಯಾ ಮಾಡಬೇಕು ಎನ್ನುವುದು ನನ್ನ ಅಭಿಪ್ರಾಯ
    ಈ ಹಿಂದೆ 10 ವರ್ಷ ಇದ್ದ ನಿರ್ದೇಶಕ ನ ಕುರಿತು ತಾವು ಪ್ರಕಟಿಸಿದಂತೆ ಅಥವಾ ನಿಮ್ಮ ಅನಿಸಿಕೆಯಂತೆ ಇದು ಸತ್ಯಕ್ಕೆ ದೂರವಾದ ವಿಚಾರ. ತಾವು ಸತ್ಯಾ ಸತ್ಯತೆ ತಿಳಿದು ಮತ್ತು ಪರಾಮರ್ಶಿಸಿ ಬರೆದರೆ ತುಂಬಾ ಚೆನ್ನಾಗಿರುತ್ತದೆ ಆತ್ಮೀಯ ಮಿತ್ರರೇ.
    ಇಲ್ಲದೇ ಹೋದರೆ ಪ್ರಸ್ತುತ ವ್ಯವಸ್ಥೆಯಲ್ಲಿ ತಾವು ಹೇಳಿದ್ದೇ ಸತ್ಯಾ ಎಂದು ಬಿಂಬಿಸುವ ಕೆಲಸ ಆಗುತ್ತದೆ.

  6. ಬುಡಕಟ್ಟು ಸಂಶೋಧನಾ ಸಂಸ್ಥೆ ಬಗ್ಗೆ ಸರಿಯಾಗಿ ತಿಳಿದುಕೊಂಡು ಬರೆಯ ಬೇಕು. ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ. TT Basavanagouda ರವರು ಮಾಡಿರುವ ಕೆಲಸ ಕಾರ್ಯಗಳನ್ನು thiludhukolli .ಕೇಂದ್ರ ಸರ್ಕಾರ ಅವರ ಕೆಲಸ ಕಾರ್ಯಗಳನ್ನು ಹೊಗಳಿದ್ದು thiliyuthe.ಯಾರೋ ಒಬ್ಬ ವ್ಯಕ್ತಿಯ ಹೇಳಿದರು ಎಂದು thilidhanthe bareyabedi. New building kattalu ಅವರು pattiruva ಶ್ರಮ ನಿಮಗೆ thilidhilla.ಬನ್ನಿ ಬುಡಕಟ್ಟು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮಾಹಿತಿ ಪಡೆಯಿರಿ .
    .

  7. TTBASAVANAGOUDA ರವರ ಕೆಲಸ ಕಾರ್ಯಗಳನ್ನು ನೋಡಿಯೇ ಸರ್ಕಾರ 10 ವರ್ಷ ಮುಂದುವರಿಸಿದ್ದಾರೆ. ಈಗಲೂ ಅವರು bandharu ಮಾತ್ರ ಸಂಸ್ಥೆ ಉದ್ಧಾರವಾಗುತ್ತದೆ. ಅವರ ಕಾರ್ಯವೈಖರಿ ಬಗ್ಗೆ ಮಾಹಿತಿ ತಿಳಿದು ಬರೆಯಿರಿ.

  8. ಸಂಸ್ಥೆಯ ಬಗ್ಗೆ ಸತ್ಯ ಸತ್ಯತೆ ತಿಳಿಯದೆ ಲೇಖನ ಪ್ರಕಟಿಸಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿರುತ್ತದೆ ಹಾಗಾಗಿ ಸಂಸ್ಥೆಗೆ ಖುದ್ದಾಗಿ ಭೇಟಿ ಸಂಶೋಧನಾ ಸಂಸ್ಥೆಯಲ್ಲಿ ತಾವು ಒಂದು ವಾರ ಸಂಶೋಧನೆ ಮಾಡಿ ಮಾಹಿತಿ ಪಡೆದು 15 ವರ್ಷದಿಂದ ಆಗಿರುವ ಕಾರ್ಯವೈಖರಿಗಳ ಬಗ್ಗೆ ಮರು ಲೇಖನವನ್ನು ಪ್ರಕಟಿಸುವುದು ಒಳ್ಳೆಯದು ಎಂದು ಸಲಹೆ ಮಾಡುತ್ತಿದ್ದೇನೆ

  9. ಸಂಶೋಧನೆ ಹಾಗೂ ಕೆಲಸ ಕಾರ್ಯಗಳ ಬಗ್ಗೆ ತಿಳಿಯದ ಕೆಲವು ಕಿಡಿಗೇಡಿಗಳು ಸುಳ್ಳು ಮಾಹಿತಿ ಹರಡುವಲ್ಲಿ ನಿಸ್ಸೀಮರು, ಇಂತಹ ಸುಳ್ಳು ಮಾಹಿತಿಯನ್ನು ಯಾರು ಸಹ ನಂಬಲು ಅಸಾಧ್ಯ, ಸಂಸ್ಥೆಯಲ್ಲೇ ಕೆಲಸ ಮಾಡಿಕೊಂಡು ಸಂಸ್ಥೆಗೆ ದ್ರೋಹ ಬಗೆಯುವಂತ ಇಂತಹ ದುರುಳರು ಸಂಸ್ಥೆ ಮತ್ತು ಸಮುದಾಯಗಳು ಎಂದಿಗೂ ಮುಂದೆಬರಲು ಸಾಧ್ಯವಿಲ್ಲ. ಹಿಂದೆ ಇದ್ದ ನಿರ್ದೇಶಕರು 10 ವರ್ಷಗಳ ಕಾಲ ಉತ್ತಮ ಸೇವೆ ಸಲ್ಲಿಸಿ ಬುಡಕಟ್ಟು ಸಮುದಾಯಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಯೋಜನೆಯ ಪ್ರಸ್ತಾವನೆ ಸಲ್ಲಿಸಿ ಒಳ್ಳೊಳ್ಳೆ ಕೆಲಸ ಮಾಡಿ ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಮಾದರಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದರು, ಇಂಥವರ ಬಗ್ಗೆ ಹೀಗೆಲ್ಲ ಹೇಳೋದು ಸರಿಎನಿಸದು, ಇತ್ತೀಚಿನ 3 ವರ್ಷಗಳಿಂದ ಇದ್ದೂ ಸತ್ತಂತಿದೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ. ಸಂಸ್ಥೆಗೆ ಸರಿಯಾದ ನಿರ್ದೇಶಕರು ಇಲ್ಲದೆ ಇರುವುದೇ ಮುಖ್ಯ ಕಾರಣವಾಗಿದೆ, ಸಂಶೋಧನೆ ಅನ್ನೋದು ಕುಂಟಿತವಾಗಿದೆ.ವಾಸ್ತವ ವಿಷಯ ತಿಳಿದು ಲೇಖನ ಸಿದ್ಧಪಡಿಸಿ ಆಗ ಅದಕ್ಕೆ ಗೌರವ ಕೂಡಾ ಬರುತ್ತೇ

  10. ಈ ಹಿಂದೆ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಬಸವನ ಗೌಡ ಪಾಟೀಲ್‌ ಅವರ ಸಾರಥ್ಯದಲ್ಲಿ ಹಲವಾರು ಜನಪರ ಬುಡಕಟ್ಟು ಸಮುದಾಯಕ್ಕೆ ನೆರವಾಗುವ ಸಂಶೋಧನಾ ಕಾರ್ಯಗಳನ್ನು ಮಾಡುತಿತ್ತು ಆದರೆ ಈಗ ಈ ಸಂಸ್ಥೆಗೆ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ. ಕೇವಲ ಹಣದಾಸೆಗೆ ಸಂಸ್ಥೆಯಲ್ಲಿ ಕೂತು ಬೇಕಾಬಿಟ್ಟಿ ಕೆಲಸಗಳನ್ನು ಮಾಡುತ್ತ ಸಂಸ್ಥೆ ಮಾನ ಹರಾಜು ಹಾಕುತಿದ್ದಾರೆ. ಮುಂದಾದರು ಉತ್ತಮ ಜ್ಞಾನವಿರುವ ನಿರ್ದೇಶಕರನ್ನು ನೇಮಕಮಾಡಿ ಸಂಸ್ಥೆಯ ಘನತೆಯನ್ನು ಹೆಚ್ಚು ಮಾಡುವಲ್ಲಿ ಸರ್ಕಾರ ಈ ಕೂಡಲೆ ಗಮನ ವಹಿಸಿ ಬುಡಕಟ್ಟು ಸಂಸ್ಥೆಯ ಅಭಿವೃದ್ಧಿಗೆ ಕಾರಣಕರ್ತರಾಗಲಿ.

    • ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರಿಗೆ ಬಂದಿದ್ದೆ ಇಲ್ಲಿ ಹೆಚ್ಚಿನ ಸಮುದಾಯಗಳು ಈ ಭಾಗದಲ್ಲಿ ಇದ್ದಾರೆ ಎಂಬುದಕ್ಕಾಗಿಯೆ ಆದರೆ ಇದು ಈಗ ಉತ್ತಮ ನಿರ್ದೇಶಕರ ಕೊರತೆಯಿಂದ ಸೊರಗುತ್ತಿದೆ. ಸಂಸ್ಥೆಗೆ ಒಳ್ಳೆ ಹೆಸರು ತರುವಂತ ಉತ್ತಮ ನಿರ್ದೇಶಕರು ಬಂದಗ ಈ ಸಂಸ್ಥೆಗೆ ಒಳ್ಳೆ ಹೆಸರು ಬರುತ್ತದೆ. ಇದು ಬಹಳ ಜರೂರಾಗಿ ಆಗಬೇಕಿದೆ.

  11. 10 ವರ್ಷ ಇದ್ದ ನಿರ್ದೇಶಕರು ಉತ್ತಮವಾದ ಸಂಶೋಧನೆ
    ವರದಿಗಳನ್ನು ಮಾಡಿದ್ದು ರಾಜಕೀಯ ದುರದ್ದೇಶದಿಂದ
    ಸಂಸ್ಥೆಯು ಅಂತಹ ಅಧಿಕಾರಿ ಕಳೆದುಕೊಂಡ ಮೇಲೆ
    ಸಂಸ್ಥೆಗೆ ಈ ಪರಿಸ್ಥಿತಿ ಬಂದಿದೆ ನಂತರ ಬಂದ ಅಧಿಕಾರಿಗಳಿಗೆ
    ಸಂಶೋದನೆಯ ಅರಿವು ಇಲ್ಲದಂತೆ ಆಗಿ ಈ ಪರಿಸ್ಥಿತಿ ಉಂಟಾಗಿದೆ

  12. ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರಿಗೆ ಬಂದಿದ್ದೆ ಇಲ್ಲಿ ಹೆಚ್ಚಿನ ಸಮುದಾಯಗಳು ಈ ಭಾಗದಲ್ಲಿ ಇದ್ದಾರೆ ಎಂಬುದಕ್ಕಾಗಿಯೆ ಆದರೆ ಇದು ಈಗ ಉತ್ತಮ ನಿರ್ದೇಶಕರ ಕೊರತೆಯಿಂದ ಸೊರಗುತ್ತಿದೆ. ಸಂಸ್ಥೆಗೆ ಒಳ್ಳೆ ಹೆಸರು ತರುವಂತ ಉತ್ತಮ ನಿರ್ದೇಶಕರು ಬಂದಗ ಈ ಸಂಸ್ಥೆಗೆ ಒಳ್ಳೆ ಹೆಸರು ಬರುತ್ತದೆ. ಇದು ಬಹಳ ಜರೂರಾಗಿ ಆಗಬೇಕಿದೆ.

  13. ನಾ ನೋಡಿದ ವಾಸ್ತವ ಬುಡಕಟ್ಟು ಸಂಸ್ಥೆ ಗಿಡವಾಗಿ ಮರವಾಗಿ ಬೆಳೆದದು T T BASAVANEGOWDARA ಅವಧಿಯಲಿ
    ಅವರ ಪರಿಶ್ರಮದಿಂದ ಬಾಡಿಗೆ ಕಟ್ಟಡ ಇದ್ದ ಸಂಸ್ಥೆ ಸ್ವಂತ ಕಟ್ಟಡ
    ವಾಗಿ ನಿರ್ಮಾಣಗೊಂಡಿತ್ತು
    ಅವರ ಅವಧಿಯಲ್ಲಿ ಸಂಶೋಧನ ಅಧ್ಯಯನಗಳು .ಕಾರ್ಯಗಾರಗಳು ವಿಚಾರ ಸಂಕಿರಣಗಳು ಬುಡಕಟ್ಟು ಉತ್ಸವಗಳು .ಕುಲಶಾಸ್ರಿಯ ಅಧ್ಯಯನಗಳು .ಪ್ರತಿಯೊಂದು
    ಅರ್ಥಪೂರ್ಣವಾಗಿ ನೆಡೆಯುತ್ತಿತ್ತು. ಅಂತಹ ಅಧಿಕಾರಿಗಳು
    ಬುಡಕಟ್ಟು ಸಮುದಾಯಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು
    ಇಂತಹ ಅಧಿಕಾರಿಗಳನ್ನು ಉಳಿಸಿಕೊಂಡಿದ್ದರೆ ಇಂದಿಗೆ ಸಂಸ್ಥೆ
    ಬಹಳ ಎತ್ತರಕ್ಕೆ ಹೋಗುತ್ತಿತ್ತು. ಮುಂದೆ ಸಾಗುತ್ತಾ
    ಆದರೆ ಸಂಶೋಧನಾ ಅಧಿಕಾರಿಯಾಗಿ ಬಂದ ಶಿವಕುಮಾರ್
    ಇವರಿಗೆ ಎಳ್ಳುಷ್ಟು ಸಂಶೋಧನೆ ಅರಿವು ಇಲ್ಲದೆ ಹೋದದು
    ಮನಬಂದಂತೆ ವರ್ಷಗಟ್ಟಲೆ ಕಾಲಕಳೆದರು ಯಾವುದೆ ವರದಿ
    ಓದಲಿಲ್ಲ ಬರೆಯಲಿಲ್ಲ .ಇ ದಾರಿಯೆ ಸಂಸ್ಥೆಗೆ ಮುಳುವಾಗುತ್ತ ಹೋಗಿದ್ದು ಇಲ್ಲಿಂದಲೆ ಸಂಶೋಧನೆಗಳು ನಿಂತ ನೀರಾಯಿತು.
    ಮುಂದೆ ..ಬಂದ ಅಧಿಕಾರಿಗಳು ರಾಜೇಶ್ gowda ಶ್ರೀನಿವಾಸ ಇವರುಗಳು ..ಸಂಸ್ಥೆ ಗೆ ಯಾವುದೆ ಯೋಜನೆ ತರಲಿಲ್ಲ ..
    ಒಂದು ಬುಡಕಟ್ಟು ಉತ್ಸವ ಮಾಡದ ಹಾಗೆ ಸಂಸ್ಥೆಯನ್ನು ಪಾತಾಳ ದಾರಿಗೆ ನುಾಕಿದರು .T T BASAVANA GOWDARA
    ರ ಅವಧಿಯಲ್ಲಿ ಬಂದಂತಹ ಅನುದಾನ ದಲ್ಲೆ ಸಂಸ್ಥೆಯನ್ನು
    ಮಂದಗತಿಯಲ್ಲಿ ನಡೆಸುತ್ತ ಸ್ವಂತ ಪರಿಶ್ರಮದಲ್ಲಿ ಸಂಸ್ಥೆಗೆ ಯಾವುದೆ ಅಭಿವೃದ್ಧಿ ತರುವ ಕೆಲಸ ಮಾಡುವಲ್ಲಿ ವಿಫಲರಾದರು
    ಅಲ್ಲದೆ ಸಂಸ್ಥೆಗೆ ಇದ್ದ ಸ್ತಾನಮಾನವನ್ನು ಶ್ರೀ ನಿವಾಸ್ ಹಾಳುಮಾಡಿದರು .ಇದರಲ್ಲಿ ಮುಖ್ಯವಾಗಿ ಸಂಸ್ಥೆ ಈ ಗತಿ
    ಬರಲು ಸಂಶೋಧನ ಅಧಿಕಾರಿ ಶಿವಕುಮಾರ್ ಮತ್ತು ಸಂಶೋಧನೆ ಗಾಳಿ ಗಂಧ ಗೊತ್ತಿರದ ಈ ಇಬ್ಬರು ವ್ಯಕ್ತಿಗಳು.
    ಇದೆಲ್ಲೆ ನಾ ನೋಡಿದ್ದೆನೆ 6 ವರ್ಷ ಸಂಸ್ಥೆಯಲ್ಲಿ
    ಮಾಹಿತಿ ಸಂಗ್ರಹಕಾರನಾಗಿ ಕೆಲಸ ಮಾಡಿದ್ದೇನೆ
    ನಾವು ಕಾಡು ಬೆಟ್ಟ ಗುಡ್ಧ ಅಳೆದು ಆನೆ ಹುಲಿ ಇರುವ ಪ್ರದೇಶಗಳಿಗೆ ಹೋಗಿ ಪ್ರಾಣ ಭಯ ಇಲ್ಲದೆ ಕೆಲಸ ಮಾಡಿದ್ದೆನೆ
    ಯಾರೆ ಆಗಲಿ ಸಂಸ್ಥೆ ಯ ಅಳ ತಿಳಿದು ಯಾವ ಕೆಲಸ ಯಾರು ಮಾಡಿದ್ದು ..ತಿಳಿದು ಬರೆಯಬೇಕು
    ಎಲ್ಲಾ ಕಣ್ಣುಮುಂದೆ ನಡೆದ ಚಿತ್ರಣ ..
    ಪ್ರದೀಪ್ Mysore ….

  14. ಬುಡಕಟ್ಟು ಸಮುದಾಯಗಳ ಬಗ್ಗೆ ಅಪಾರವಾದ ಪ್ರೀತಿ,ಕಾಳಜಿ,ಮಮತ್ತೆ ಮತ್ತು ಮಮಕಾರವನ್ನ ಹೊಂದಿದ್ದ ಇವರು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ 10 ವರ್ಷಗಳ ಕಾಲ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ, ಕರ್ನಾಟಕ ರಾಜ್ಯದಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆ ಬಗ್ಗೆ ರಾಜ್ಯ ಮತ್ತು ದೇಶಕ್ಕೆ ಮಾದರಿಯಾಗುವಂತೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರ ಅವಧಿಯಲ್ಲಿ ಬುಡಕಟ್ಟೆತರ ಕುಲವರ್ಣ ಅಧ್ಯಯನಗಳು ಹಾಗೂ ಕೇಂದ್ರ ಮತ್ತು ರಾಜ್ಯದ ಪ್ರಾಯೋಜಿತ ಬುಡಕಟ್ಟು ಅಧ್ಯಯನ ವರದಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. ಅಲ್ಲದೆ ಬಾಡಿಗೆಯಲ್ಲಿದ್ದ ಸಂಶೋಧನಾ ಸಂಸ್ಥೆಯ ಸ್ವಂತ ಬೃಹತ್ ಕಟ್ಟಡವನ್ನು ನಿರ್ಮಿಸುವಲ್ಲಿ ಇವರ ಶ್ರಮವು ತುಂಬಾ ಮಹತ್ವದ್ದಾಗಿದೆ. ಇವರ ಕಾಲಾವಧಿಯಲ್ಲಿ ಆಶ್ರಮ ಶಾಲೆ ಶಿಕ್ಷಕರಿಗೆ ವಿವಿಧ ತರಬೇತಿಗಳು, ಬುಡಕಟ್ಟು ಜನರಿಗೆ ಅರಿವು ಕಾರ್ಯಕ್ರಮಗಳು, ಆರೋಗ್ಯ ಶಿಬಿರಗಳು ಇನ್ನು ಮುಂತಾದ ಹತ್ತು ಹಲವು ತರಬೇತಿಗಳನ್ನು ನೀಡಿರುತ್ತಾರೆ. ಇದರ ಸತ್ಯ ಸತ್ಯತೆಯನ್ನು ಅರಿತು ಲೇಖನ ಸಿದ್ಧಪಡಿಸಿ

      • ಎಷ್ಟೋ ಜನಕ್ಕೆ ಅನ್ನ ಕೊಟ್ಟ ದೇವರು ಅವರು ಅವರಬಗ್ಗೆ ಸರಿಯಾಗಿ ತಿಳಿದು ಮಾತಾಡಿ ಇಲ್ಲಿ ಕಾಮೆಂಟ್ ಮಾಡಿರೋರು ಅವರ ಸಾಧನೆ ಬಗ್ಗೆ ತಿಳಿದವರು ನಿನಗೆ ಅವರ ಬಗ್ಗೆ ಗೊತ್ತಿಲ್ಲ ಅನಿಸುತ್ತದೆ. ಫ್ರೀ ಮಾಡ್ಕೊಂಡು ಕಚೇರಿಗೆ ಹೋಗಿ ಅವರ ಕೆಲಸ ಕಾರ್ಯಗಳನ್ನು ಒಮ್ಮೆ ನೋಡಿ ತಿಳಿದು ಕೋ

      • ನೇರವಾಗಿ ನೀನು ಬಾರಪ್ಪ ಚರ್ಚೆ ಮಾಡೋಣ
        ಸಂಸ್ಥೆ ಇವತ್ತು ಯಾವ ಮಟ್ಟಕ್ಕೆ ಹೋಗಿದೆ
        ನಾವು ಸಂಸ್ಥೆ ಗಾಗಿ ಕೆಲಸ ಮಾಡಿರೋರು
        ಯಾಕೆ ಬೇಡ ಅಂತಿಯಾ ವಾಸ್ತವ ತಿಳಿದು
        ಮಾತಡು ಬೇಡ ಅನ್ನೊಕೆ ನೀನು ಯಾವ ಊರ ದೊಣ್ಣೆನಾಯಕ ದಮ್ ಇದ್ದರೆ ನೇರವಾಗಿ ಬಂದು ಚರ್ಚೆ ಮಾಡು ನಾಲ್ಕು ಅಕ್ಷರ ಇಂಗ್ಲಿಷ್ಲಿ ಲಿ ಬರದುಬಿಟ್ಟರೆ
        ಬಾ ನೇರವಾಗಿ ಮುಖಾಮುಖಿ ನಾ ರೆಡಿ ಎಲ್ಲಿಯಾದರುಾ
        ಯಾವಾಗಲಾದರುಾ ..i am waiting..

  15. ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಹಿಂದಿನ ನಿರ್ದೇಶಕರ ಹತ್ತು ವರ್ಷಗಳ ಆಡಳಿತ ಅವಧಿಯಲ್ಲಿ ಮಾಡಿರೋ ಕೆಲಸಗಳು ಇತಿಹಾಸ ಹಾಗೂ ಅಜರಾಮರ ಅವರ ಅವಧಿಯಲ್ಲಿ ತಂದಿರುವ ಅನುದಾನವೇ ಪ್ರಸ್ತುತ ವರ್ಷಗಳಲ್ಲಿ ಬಳಕೆ ಆಗುತ್ತಿದೆ ಅಂದ್ರೆ ಅವರ ಹೋರಾಟದ ಫಲ ಎಂಬುದನ್ನು ಯಾರು ಮರಿಯಬಾರದು. ಅವರ ಆಡಳಿತ ಅವಧಿಯಲ್ಲಿ 50 ಕ್ಕೂ ಹೆಚ್ಚು ವಿದ್ಯಾವಂತರಿಗೆ ಕೆಲಸ ಕೊಟ್ಟಿರೋ ಸಾಕಷ್ಟು ಉದಾಹರಣೆ ಇದೆ. ಅದು ತಿಳ್ಕೊಂಡು ಮಾತಾಡ್ಬೇಕು. ಅವರ ನಂತರ ಬಂದ ನಿರ್ದೇಶಕರು ಎಷ್ಟು ಅನುದಾನ ತಂದಿದ್ದಾರೆ? ಎಷ್ಟು ವಿದ್ಯಾವಂತರಿಗೆ ಕೆಲಸ ಕೊಟ್ಟಿದ್ದಾರೆ ಮುಟ್ಟಾಳ ಅದನ್ನ ತಿಳ್ಕೊಂಡು ಲೇಖನ ಸಿದ್ಧಪಡಿಸು ಬೊಸುಡಿಕೆ.

  16. ಅವರ ಹೋರಾಟದ ಫಲವೇ ಈ ದಿನ ನ್ಯಾಯಾಂಗ ಬಡಾವಣೆಯಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯ ದೊಡ್ಡ ಬ್ಯುಲ್ಡಿಂಗ್ ಆಗಿದೆ ಅದನ್ನ ಉಳಿಸಿಕೊಳ್ಳೋ ಯೋಗ್ಯತೆ ಇಲ್ಲದೆ ಪ್ರತಿ ದಿನ ನಾಯಿ ತರ ಕಚ್ಚಡತಾ ಇದ್ದೀರಾ. ಅವರ ಹೋರಾಟದ ಫಲವಾಗಿ ಇವತ್ತು ನೀವು AC ರೂಮ್ನಲ್ಲಿ ಕೂತಿದ್ದೀರಾ. ಇಲ್ಲ ಅಂದಿದ್ರೆ ಬಾಡಿಗೆ ಮನೇಲಿ ಇರ್ಬೇಕಿತ್ತು ತಿಳ್ಕೊಂಡು ಲೇಖನ ಸಿದ್ದಪಡಿಸಬೇಕು ಈಡಿಯಟ್.

    • ಯಾವ ಅಧಿಕಾರಿಗಳು ಅವರ ತಂದೆ ಹಣ ಅಕೋದಿಲ್ಲ ಅದು ನಮಗೆ ಗೊತ್ತಿದೆ ಗುಲಾಮ.ಆದರೆ ಅವರ ಹೋರಾಟದ ಫಲವೇ ಈ ದಿನ ದೊಡ್ಡ ಬಿಲ್ಡಿಂಗ್ ಆಗಿರುವುದು ಅವರು ತಂದಿರುವ ಅನುದಾನವೇ ಇಲ್ಲಿಯವರೆಗೆ ಬಳಕೆ ಆಗುತ್ತಿರುವುದು ನಿನಗೆ ಏನು ಗೊತ್ತು. ಬುಡಕಟ್ಟು ಸಂಶೋಧನಾ ಕೇಂದ್ರಕ್ಕೆ ಅವರ ಸೇವೆ ಇತಿಹಾಸ ಅಜರಾಮರ ತಿಳ್ಕೊ. ಅವರ ನಂತರ ಬಂದ ನಿರ್ದೇಶಕರು 3 ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಸ್ವಲ್ಪ ತಿಳಿಸಿ ಕೊಡು. ಹೊಸ ಬಿಲ್ಡಿಂಗಲಿ ಕೂತು ನಾಯಿ ತರ ಕಚ್ಚಡ್ತಾ ಇದ್ದಾರೆ ಅದು ನಿನಗೆ ಗೊತ್ತ. ಗೊತ್ತಿದ್ರೆ ನಿನಗೆ ಈ ರೀತಿ ಕಾಮೆಂಟ್ aktiralilla

    • ನಿಮ್ಮ ಅಪ್ಪ ನಿಂಗೆ ದುಡ್ಧು ಕೊಟ್ಟು ಒಂದು ಗಾಡಿ ಕೊಡಸ್ತಾರೆ ಅಂದಕೊ
      ಸರ್ವಿಸ್ ಗುಾ ಮಾಡೊಸೊಕು ದುಡ್ಡು ಕೇಳಿತ್ತಿಯಾ ಈಡಿಯಟ್
      ಹಾಗೆ ಸರ್ಕಾರ ನೆ ದುಡ್ಡುಕೊಟ್ಟಿರೋದು ಸರ್ಕಾರಿ ಸೇವೆ ಅವರ ಅವಧಿಯಲ್ಲಿ ಮಾಡಿದಾರೆ ರಾಜು ಗೋವಿಂದ .

  17. ರಿ ರಾಜು ಯಾರು ಫೇಕೆ ನೀನು ಕೊಟ್ಟಿರೋ ಹೇಳಿಕೆ ಫೇಕ್ ಅವರ ತರ ಯಾರು ಕೆಲಸ ಮಾಡೋಕೆ ಸಾಧ್ಯನೆ ಇಲ್ಲ ಒಬ್ಬರ ಬಗ್ಗೆ ತಿಳಿದು ಮಾತಾಡು

  18. ಚರ್ಚೆ ಮಾಡೋಣ ಬಾ ಎಲ್ಲಿದೀಯ. ಮೈಸೂರ್ ಗೆ ಬಂದು ಯಾವಾಗ ಬೇಕಾದ್ರು cl ಮಾಡು ಬರ್ತೀನಿ ok ಏನು ಕೆಲಸ ಆಗಿದೆ ಅದರ ಬಗ್ಗೆ ಚರ್ಚಿಸೋಣ ದೊಣ್ಣೆ ನಾಯಕ. ನೀನು ಬೇಡ ಅನ್ನೋಕ್ಕೆ ಯಾರು ನೀನು ಗುಲಾಮ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X