ರೌಡಿಶೀಟರ್‌ ಮಣಿಕಂಠ ಪರ ಪ್ರಧಾನಿ ಮೋದಿ ಪ್ರಚಾರ ಕೊನೆಗೂ ರದ್ದು

Date:

Advertisements
  • 40 ಪ್ರಕರಣಗಳನ್ನು ಹೊತ್ತಿರುವ ಮಣಿಕಂಠಗೆ ಬಿಜೆಪಿ ಟಿಕೆಟ್‌
  • ಪ್ರಧಾನಿ ಮೋದಿಯ ಮೇ 6ರ ಚಿತ್ತಾಪುರ ಪ್ರಚಾರ ರದ್ದಾಗಿದೆ

ಬಿಜೆಪಿಯ ಸ್ಟಾರ್‌ ಪ್ರಚಾರಕ ಪ್ರಧಾನಿ ಮೋದಿ ಅವರು ಚಿತ್ತಾಪುರದ ಅಭ್ಯರ್ಥಿ, ರೌಡಿಶೀಟರ್‌ ಮಣಿಕಂಠ ರಾಥೋಡ್‌ ಪರವಾಗಿ ಮಾಡಬೇಕಿದ್ದ ಪ್ರಚಾರ ರದ್ದಾಗಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಅವರನ್ನು ಮಣಿಸಲು ಬಿಜೆಪಿ ರೌಡಿಶೀಟರ್‌ನನ್ನು ಕಣಕ್ಕಿಳಿಸಿತ್ತು. ಬೆನ್ನಲ್ಲೇ ಸ್ವತಃ ಪ್ರಧಾನಿ ಮೋದಿ ರಾಥೋಡ್‌ ಪ್ರಚಾರಕ್ಕೆ ಸಮಯ ನಿಗದಿಯಾಗಿತ್ತು,

ಆದರೆ, ಮಣಿಕಂಠ ವಿರುದ್ಧದ ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಸಾಬೀತಾಗಿದ್ದು, ಮೋದಿ ಅವರ ಮೇ 6ರ ಚಿತ್ತಾಪುರ ಪ್ರಚಾರ ಕಾರ್ಯಕ್ರಮ ರದ್ದಾಗಿದೆ. ಈಗಾಗಲೇ ಫೈಟರ್ ರವಿ, ರೌಡಿ ಶೀಟರ್ ಮುದ್ದುಕೃಷ್ಣ ಮೋದಿ ಜೊತೆ ವೇದಿಕೆ ಹಂಚಿಕೊಂಡಿರುವುದರಿಂದ ಸಾಕಷ್ಟು ಮುಜುಗರಕ್ಕೀಡಾಗಿದ್ದಾರೆ.

Advertisements

ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್​ ವಿರುದ್ಧ 40 ಅಪರಾಧ ಪ್ರಕರಣಗಳಿವೆ. ಈ ಬಗ್ಗೆ ಪ್ರತಿಪಕ್ಷಗಳು ಕಿಡಿಕಾರುತ್ತಲೇ ಇವೆ. ಇದೀಗ ಮಣಿಕಂಠನ ಮೇಲಿದ್ದ ಕಳ್ಳತನ ಆರೋಪವೊಂದು ಸಾಬೀತಾಗಿದ್ದು, ಇದರಿಂದ ಮೋದಿ ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್ ಪರ ನಡೆಸಬೇಕಿದ್ದ ಪ್ರಚಾರ ರದ್ದಾಗಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏಪ್ರಿಲ್​ 28 ರಂದು ಚಿತ್ತಾಪುರದಲ್ಲಿ ಮಣಿಕಂಠ ರಾಠೋಡ್​ ಪರ ರೋಡ್ ಶೋ ನಡೆಸಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಹ ಮಣಿಕಂಠ ರಾಥೋಡ್‌ ಪರ ಮತಯಾಚಿಸಿದ್ದರು.

ಈ ಸುದ್ದಿ ಓದಿದ್ದೀರಾ? ಬಿಜೆಪಿಯದ್ದು ಡಬಲ್ ದೋಖಾ ಸರ್ಕಾರ : ಬಿ ಕೆ ಹರಿಪ್ರಸಾದ್

ಮಣಿಕಂಠಗೆ ಕೇವಲ 26 ವರ್ಷ. ಆದರೆ ಆತನ ವಿರುದ್ಧ ಕರ್ನಾಟಕದಲ್ಲಿ ಮಾತ್ರವಲ್ಲದೇ ನೆರೆ ರಾಜ್ಯಗಳಲ್ಲಿ ಸೇರಿದಂತೆ ಬರೋಬ್ಬರಿ 40 ಪ್ರಕರಣಗಳು ದಾಖಲಾಗಿವೆ.

ಪಡಿತರ ಅಕ್ಕಿ ಕಳ್ಳ ಸಾಗಣೆ, ಅಂಗನವಾಡಿ ಮಕ್ಕಳ ಹಾಲಿನ ಪುಡಿ ಕಳ್ಳ ಸಾಗಣೆ ಕೂಡ ಸೇರಿದೆ. ಎಸ್‌ಎಸ್‌ಎಲ್‌ಸಿ ಫೇಲ್ ಆಗಿರುವ ಈತ 29 ಕೋಟಿ ರೂ.ಗಳ ಆಸ್ತಿ ಒಡೆಯ. ಕೆಲವು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೆಲವು ಪ್ರಕರಣಗಳಿಗೆ ಹೈಕೋರ್ಟ್ ತಡೆ ನೀಡಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ಬಣದಲ್ಲಿ ಅಸಮಾಧಾನ : ಎಂಎಲ್ ಸಿ ಕಾರು ತಡೆ ವಾಗ್ವಾದ

ಎಂಎಲ್ ಸಿ ಶರಣಗೌಡ ಪಾಟೀಲ್‌ ಅವರ ಕಾರಿಗೆ ಡಿ ಎಸ್ ಹುಲಗೇರಿ...

ಕಲಬುರಗಿ | ಮೂರು ತಿಂಗಳಿಂದ ಪಾವತಿಯಾಗದ ʼಗೃಹಲಕ್ಷ್ಮೀʼ ಹಣ : ವೆಲ್ಫೇರ್ ಪಾರ್ಟಿ ಆಕ್ರೋಶ

ಕರ್ನಾಟಕ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿಯ ಗೃಹಲಕ್ಷ್ಮೀ ಯೋಜನೆಯ ಹಣ...

ಬೆಳಗಾವಿ : ಮೂರು ವರ್ಷದ ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋದ ತಂದೆ ತಾಯಿ

ತಾಯಿಯ ಮಡಿಲಿಗೆ ತವಕಿಸುತ್ತಿರುವ ಮೂರು ವರ್ಷದ ಹೆಣ್ಣುಮಗುವನ್ನು ಆಸ್ಪತ್ರೆಯಲ್ಲಿ ತಂದೆ ತಾಯಿಗಳು...

Download Eedina App Android / iOS

X