ಆಗ್ರಾದಲ್ಲಿ ಭಾರಿ ಮಳೆಯ ಆರ್ಭಟ: ತಾಜ್ ಮಹಲ್‌ ಗೋಡೆಗಳಲ್ಲಿ ಬಿರುಕು

Date:

Advertisements

ಆಗ್ರಾದಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ವಿಖ್ಯಾತ ಪ್ರವಾಸಿ ತಾಣ ತಾಜ್ ಮಹಲ್‌ನ ಗೋಡೆಗಳು, ನೆಲ ಹಾಗೂ ಹಲವೆಡೆ ಬಿರುಕುಗಳು ಆಣಿಸಿಕೊಂಡಿವೆ.

ಈ ಕುರಿತಾಗಿ ಭಾರತೀಯ ಟೂರಿಸ್ಟ್‌ ಗೈಡ್ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶಕೀಲ್ ಚೌಹಾಣ್ ಅವರು ಮಾಹಿತಿ ನೀಡಿದ್ದು, ತಾಜ್ ಮಹಲ್‌ನ ಮುಖ್ಯ ಗುಮ್ಮಟದ ಸುತ್ತ ಇರುವ ಬಾಗಿಲುಗಳ ಮೇಲೆ ಅರೇಬಿಕ್ ಭಾಷೆಯಲ್ಲಿ ಕುರಾನ್‌ನ ಸಾಲುಗಳನ್ನ ಬರೆಯಲಾಗಿದೆ. ಈ ಸಾಲುಗಳು ಅಳಿಸಿ ಹೋಗುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನು ಗೋಡೆಗಳಿಗೆ ಅಳವಡಿಕೆ ಮಾಡಲಾಗಿದ್ದ ಅಮೂಲ್ಯ ಶಿಲೆಗಳೂ ಕೂಡಾ ಸವೆಯುತ್ತಿವೆ. ನೆಲ ಹಾಸಿನಲ್ಲಿ ಇದ್ದ ಕಲ್ಲುಗಳೂ ಕಿತ್ತು ಹೋಗುತ್ತಿವೆ. ಗುಮ್ಮಟಗಳು, ಗೋಡೆಗಳು, ವಸ್ತು ಸಂಗ್ರಹಾಲಯದ ನೆಲ ಹಾಸುಗಳು ಬಿರುಕು ಬಿಟ್ಟಿರುವುದನ್ನು ಕಾಣಬಹುದು ಎಂದು ಅವರು ಹೇಳಿದ್ದಾರೆ.

Advertisements

ಆದರೆ ಭಾರತೀಯ ಪುರಾತತ್ವ ಇಲಾಖೆ ಮಾತ್ರ ಈ ಕಟ್ಟಡಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳುತ್ತಿದೆ. ಇದು ತಪ್ಪು ಎಂದು ಟೂರಿಸ್ಟ್‌ ಗೈಡ್‌ಗಳ ಶ್ರೇಯೋಭಿವೃದ್ದಿ ಒಕ್ಕೂಟದ ಅಧ್ಯಕ್ಷ ದೀಪಕ್ ದಾನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾಜ್ ಮಹಲ್ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಈ ತಾಣಕ್ಕೆ ಹಾನಿಯಾಗಿದೆ ಎಂಬ ಮಾಹಿತಿ ಹೊರ ಬಿದ್ದರೆ ಅದು ತಪ್ಪಾಗುತ್ತದೆ. ಹೀಗಾಗಿ, ರಾಷ್ಟ್ರದ ಅತಿ ದೊಡ್ಡ ಪ್ರವಾಸಿ ತಾಣವಾದ ತಾಜ್ ಮಹಲ್‌ನ ಅಭಿವೃದ್ದಿಗೆ ಹಾಗೂ ಹಾನಿ ಸರಿಪಡಿಸುವ ಕೆಲಸಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಯ ‘ಪಾಕಿಸ್ತಾನ’ ಹೇಳಿಕೆ: ಸುಪ್ರೀಂನಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು

ಆದರೆ, ಭಾರತೀಯ ಪುರಾತತ್ವ ಇಲಾಖೆ ಮಾತ್ರ ಗಂಭೀರ ಪ್ರಮಾಣದ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಹೇಳುತ್ತಿದೆ. ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಇರುವ ತಾಜ್ ಮಹಲ್‌ಗೆ ಸುರಕ್ಷತೆ ಬೇಕಿದೆ. ಬೇಜವಾಬ್ದಾರಿತನ, ಭ್ರಷ್ಟಾಚಾರ ಹಾಗೂ ದುರಾಡಳಿತದಿಂದಾಗಿ ತಾಜ್ ಮಹಲ್‌ಗೆ ಬಳಕೆ ಆಗಬೇಕಿದ್ದ ಅನುದಾನ ದುರ್ಬಳಕೆ ಆಗುತ್ತಿದೆ ಎಂದು ಕೆಲವರು ಆಪಾದಿಸಿದ್ದಾರೆ. ಆದರೆ, ಭಾರತೀಯ ಪುರಾತತ್ವ ಇಲಾಖೆ ಮಾತ್ರ ತಾಜ್‌ ಮಹಲ್‌ಗೆ ನೀಡಲಾಗುವ ಅನುದಾನದ ಕುರಿತಾಗಿ ಕಾಲ ಕಾಲಕ್ಕೆ ಲೆಕ್ಕ ಪತ್ರ ಪರಿಶೀಲನೆ ನಡೆಯುತ್ತಿದೆ ಎಂದೇ ಸ್ಪಷ್ಟನೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಪುರಾತತ್ವ ತಜ್ಞ ರಾಜಕುಮಾರ್ ಪಟೇಲ್, ತಾಜ್ ಮಹಲ್ ರಕ್ಷಣೆಗೆ ಆಗಾಗ ಕಾಮಗಾರಿ ನಡೆಯುತ್ತಿದೆ. ಅಲ್ಲಲ್ಲಿ ದುರಸ್ತಿ ಹಾಗೂ ತೇಪೆ ಹಾಕುವ ಕೆಲಸವನ್ನೂ ಮಾಡುತ್ತಿದ್ದೇವೆ. ಇದಕ್ಕಾಗಿ ನಾವು ವೈಜ್ಞಾನಿಕ ಮಾರ್ಗಸೂಚಿಯನ್ವಯ ಕೆಲಸ ಮಾಡುತ್ತಿದ್ದೇವೆ. ಸ್ಮಾರಕದ ರಕ್ಷಣೆಯೇ ನಮ್ಮ ಗುರಿ ಎಂದು ಮಾಹಿತಿ ನೀಡಿದ್ದಾರೆ.

ಆದರೆ ತಾಜ್ ಮಹಲ್‌ನ ಗೋಡೆಗಳಲ್ಲಿ ಗಿಡಗಳು ಬೆಳೆಯುತ್ತಿವೆ. ಅದರಲ್ಲೂ ತಾಜ್ ಮಹಲ್‌ನ ಕೇಂದ್ರೀಯ ಗುಮ್ಮಟದ ಬಳಿಯಲ್ಲೇ ಗಿಡ ಬೆಳೆದಿದೆ. ಜೊತೆಗೆ ಅಲ್ಲಲ್ಲಿ ಮಳೆ ನೀರು ಕೂಡ ನಿಲ್ಲುತ್ತಿದೆ. ಕೆಲವು ದಿನಗಳ ಹಿಂದೆ ಕಟ್ಟಡದ ಒಳಗೆ ಮಳೆ ಬಂದಾಗ ನೀರು ಸೋರುತ್ತಿತ್ತು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

Download Eedina App Android / iOS

X