ಸಿಡಿಲು ಬಡಿದು ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಧಾರವಾಡ ತಾಲೂಕಿನ ಹನುಮನಾಳ ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟ ರೈತನನ್ನು ಹನುಮನಾಳ ಗ್ರಾಮದ ನಿವಾಸಿ 64 ವರ್ಷದ ಭೀಮನಗೌಡ ಮಲ್ಲನಗೌಡ ಪಾಟೀಲ್ ಎಂದು ಗುರುತಿಸಲಾಗಿದೆ.
ಜಿಲ್ಲೆಯ ವಿವಿಧೆಡೆಗಳಲ್ಲಿ ಗುಡುಗು, ಸಿಡಿಲು ಸಹಿತ ಮಳೆ ಶುರುವಾಗಿದ್ದು, ಆ ಹಿನ್ನೆಲೆಯಲ್ಲಿ ಧಾರವಾಡ ತಾಲೂಕಿನಲ್ಲೂ ಸಿಡಿಲು ಸಹಿತ ಮಳೆ ಸುರಿದು ರೈತನ ಪ್ರಾಣ ತೆಗೆದಿದೆ.
ಇದನ್ನು ಓದಿದ್ದೀರಾ? ಕಾರವಾರ | ರಸ್ತೆ ಸೌಲಭ್ಯದ ಕೊರತೆ: ಕಟ್ಟಿಗೆಗೆ ಮೃತದೇಹ ಕಟ್ಟಿ ಕೊಂಡೊಯ್ದ ಗ್ರಾಮಸ್ಥರು!
ರವಿವಾರ ಹೊಲದಿಂದ ಮನೆಗೆ ವಾಪಸ್ಸು ಹೊರಟಿದ್ದ ಸಮಯದಲ್ಲಿ ಸಿಡಿಲು ಬಡಿದ ಪರಿಣಾಮ ಭೀಮನಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.