ಸಂಸ್ಕೃತ ಭಾಷೆಯ ಸುಮಾರು 60 ಕ್ಕೂ ಹೆಚ್ಚು ಪದಗಳು ಪ್ರಸ್ತುತ ಕನ್ನಡ ಭಾಷೆಯಲ್ಲಿ ಇರುವುದು ವಿಶೇಷ ಹೆಮ್ಮೆ ಎನಿಸಿದೆ ಎಂದು ಎಸ್ ಡಿಎಂಸಿ ಅಧ್ಯಕ್ಷ ಆನಂದ್ ತಿಳಿಸಿದರು.
ಗುಬ್ಬಿ ಪಟ್ಟಣದ ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಸಂಸ್ಕೃತ ವಿಭಾಗ ಹಾಗೂ ಭಾರತಿ ಸಂಸ್ಕೃತ ವಿದ್ಯಾಲಯ ವತಿಯಿಂದ ಆಯೋಜಿಸಲಾಗಿದೆ ಆಸ್ಮಕಂ ಸಂಸ್ಕೃತಂ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷ ಅರ್ಥವನ್ನು ನೀಡುವ ಸಂಸ್ಕೃತ ಭಾಷೆಯ ಕಲಿಕೆಯು ಎಲ್ಲಾ ಮಕ್ಕಳಿಗೂ ಅನಿವಾರ್ಯವಾಗಿ ಬೇಕಾಗಿದೆ ಈ ನಿಟ್ಟಿನಲ್ಲಿ ಸಂಸ್ಕೃತ ಭಾಷೆಯ ಪರಿಚಯವನ್ನು ಪ್ರತಿಯೊಬ್ಬರು ತಿಳಿಯಬೇಕಿದೆ ಎಂದರು.
ಬೆಟ್ಟದಹಳ್ಳಿ ಮಠದ ಸಂಸ್ಕೃತಿ ಭಾಷೆಯ ಮುಖ್ಯ ಶಿಕ್ಷಕ ಸಿ.ಎಂ.ಭೋಜಯ್ಯ ಮಾತನಾಡಿ, ಭಾರತದ ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿಯಲ್ಲಿ ಮಕ್ಕಳಿಗೆ ಸಂಸ್ಕೃತಿ ಭಾಷೆಯ ಪಾಠವನ್ನು ಕಲಿಸಲಾಗುತ್ತಿತ್ತು. ಆಗಿನ ಸಂದರ್ಭದಲ್ಲಿ ಸಂಸ್ಕೃತ ಭಾಷೆಯನ್ನು ಸಂವಹನ ಭಾಷೆಯಾಗಿ ಬಳಕೆ ಮಾಡುತ್ತಿದ್ದರಿಂದ ಹೆಚ್ಚು ಮನ್ನಣೆಯನ್ನು ಗಳಿಸಿತ್ತು. ಇಂದಿಗೂ ಸಹ ಸಂಸ್ಕೃತಿ ಭಾಷೆಯು ವೈಜ್ಞಾನಿಕ ಭಾಷೆಯ ಸ್ಥಾನವನ್ನು ಪಡೆದಿದ್ದು ದೇಶದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿದ ಸಂಸ್ಕೃತ ಭಾಷೆಯು ನಮ್ಮ ಭಾರತದ ಹೆಮ್ಮೆಯ ಭಾಷೆಯಾಗಿದೆ ಎಂದ ಅವರು ಪ್ರಸ್ತುತ ಇರುವ ಎಲ್ಲಾ ಭಾಷೆಗಳಿಗೆ ಮೂಲ ಭಾಷೆಯಾಗಿ ತಾಯಿ ಭಾಷೆಯಾಗಿದೆ ಹಾಗೂ ಮಾನವನ ಸರ್ವಾಂಗಿನ ಅಭಿವೃದ್ಧಿಗೆ ಸಂಸ್ಕೃತ ಭಾಷೆಯು ಮೂಲವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಿಆರ್ ಪಿ ನಾಗಭೂಷಣ್, ಮುಖ್ಯ ಶಿಕ್ಷಕಿ ಮಂಜುಳಾ, ಸಹ ಶಿಕ್ಷಕರಾದ ಸುಮಿತ್ರಾ , ಶೋಭಾ, ನಟರಾಜು, ಪುರುಷೋತ್ತಮ್, ಸಂಸ್ಕೃತ ಶಿಕ್ಷಕರಾದ ರಘುನಾಥ್, ಕವನ, ಕುಮಾರ್, ಭಾರತಿ ಸಂಸ್ಕೃತ ವಿದ್ಯಾಲಯ ಸಂಸ್ಥೆಯ ಕಾರ್ಯದರ್ಶಿ ರಾಜಮ್ಮ, ಸಹ ಶಿಕ್ಷಕರಾದ ಕೆಂಪರಾಜು, ನಂದಿನಿ, ಭಾಗ್ಯಮ್ಮ, ಪೋಷಕರು ಎಸ್ ಡಿ ಎಂ ಸಿ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
