ತುಮಕೂರು | 80ರ ದಶಕದ ಹೋರಾಟ ಮರೆತು, ಮನುವಾದಿಗಳ ಜೊತೆ ಕೈಜೋಡಿಸಿದ್ದೇವೆ : ಡಾ. ನಾಗಣ್ಣ ಆತಂಕ

Date:

Advertisements

80ರ ದಶಕದ ಹೋರಾಟಗಳನ್ನ ಮರೆತು ಡಾ.‌ ಬಿ.ಆರ್. ಅಂಬೇಡ್ಕರ್ ವಿಚಾರಧಾರೆಗಳಿಗೆ ವಿರುದ್ಧವಾಗಿರುವ ಮನುವಾದಿಗಳ ಜೊತೆ ಕೈಜೋಡಿಸಿರುವುದು ಬೇಸರ ಹಾಗೂ ಭಯ ಆಗ್ತಿರುವ ಸಂಗತಿಯಾಗಿದೆ ಎಂದು ಗೃಹ ಸಚಿವರ ಕರ್ತವ್ಯ ವಿಶೇಷಾಧಿಕಾರಿ ಡಾ. ನಾಗಣ್ಣ ಆತಂಕ ವ್ಯಕ್ತಪಡಿಸಿದರು.

ತುಮಕೂರು ನಗರದ ರವೀಂದ್ರ ಕಲಾಗ್ಯಾಲರಿಯಲ್ಲಿ ಅರುಣೋದಯ ಸಹಕಾರ ಸಂಘ ಆಯೋಜನೆ ಮಾಡಿದ್ದಂತಹ 5ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

80ರ ದಶಕದಲ್ಲಿ ಅನ್ಯಾಯ ಹಾಗೂ ಅಸ್ಪೃಶ್ಯತೆ ನಿವಾರಣೆಗಾಗಿ ದೊಡ್ಡ ಹೋರಾಟ ಮಾಡಿದ್ದೇವು. ಉರುಳು ಸೇವೆ, ಪಂಜಿನ ಮೆರವಣಿಗೆ ಮಾಡಿ ತಮಗಾಗುತ್ತಿದ್ದಂತಹ ಅನ್ಯಾಯದ ವಿರುದ್ಧ ಪ್ರತಿಭಟಿಸಲಾಗಿತ್ತು. ಆದ್ರೆ, ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿರುವ ಮನುವಾದಿಗಳ ಜೊತೆ ಕೈಜೋಡಿಸಿದ್ದೇವೆ. ಈ ನಡುವೆ ದೇಶ ಕೂಡ ಬಹಳ ಸಂಕಷ್ಟದಲ್ಲಿ ಇದೆ ಅಂತಾ ಬೇಸರ ವ್ಯಕ್ತಪಡಿಸಿದರು.

Advertisements

1947ರಲ್ಲಿ ನಮಗೆ ಸ್ವಾತಂತ್ರ್ಯ ಬಂದಾಗ ಬ್ರಿಟೀಷರು ನಮಗೆ ದೇಶ ಬಿಟ್ಟುಕೊಟ್ಟಾಗ ಗಡಿ ಇರಲಿಲ್ಲ, ಆಹಾರ ಇರ್ಲಿಲ್ಲ, ಆರೋಗ್ಯ-ಆಸ್ಪತ್ರೆ ಇರಲಿಲ್ಲ. ರಸ್ತೆ, ಕರೆಂಟ್ ಕೂಡ ಇರಲಿಲ್ಲ.
ಅಂತಹ ಪರಿಸ್ಥಿತಿಯಲ್ಲಿ ದೇಶವನ್ನ ಅಂದಿನ ಪ್ರಧಾ‌ನ ಮಂತ್ರಿಗಳು ಈ ಮಟ್ಟಕ್ಕೆ ತಂದು ಕೊಟ್ರು ಆದ್ರೆ, ನಾವೇ ಎಲ್ಲವನ್ನೂ ಮಾಡಿದ್ದೇವೆ ಎಂಬ ಭ್ರಮೆಯಲ್ಲಿ ಜನರನ್ನ ಮನುವಾದಿಗಳು ದಾರಿ ತಪ್ಪಿಸುತ್ತಿದ್ದಾರೆ ದಯಮಾಡಿ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ನಾಗಣ್ಣ ಎಚ್ಚರಿಕೆ ನೀಡಿದರು.

ಯಾರು ನಿಜವಾದ ರಾಜಕಾರಣಿ, ನಿಜವಾದ ಸಹಾಯಕ, ಜನ ಸೇವಕನನ್ನ ನಾವೆಲ್ಲಾ ಗುರ್ತಿಸಿ ಅವರನ್ನ ಗೆಲ್ಲಿಸಿದ್ರೆ ಮಾತ್ರ ಸುಂದರವಾದ ಸಮಾಜ, ಸುಂದರವಾದ ರಾಜ್ಯ, ಸುಂದರವಾದ ದೇಶ ನಿರ್ಮಾಣ ಆಗ್ತದೆ ಎಂದರು.

ಇವತ್ತಿನ ರಾಜ್ಯ ಸರ್ಕಾರದ ಹಲವಾರು ಗ್ಯಾರಂಟಿಗಳನ್ನ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಡಾ. ಜಿ. ಪರಮೇಶ್ವರ ಜಾರಿ ಮಾಡಿದ್ರು. ಈ ಹಿಂದೆ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ಬರೆದರು. ಇವತ್ತು ಗ್ಯಾರಂಟಿಗಳನ್ನ ಡಾ. ಜಿ. ಪರಮೇಶ್ವರ ಅವರು ಅನುಷ್ಠಾನದ ಸಂವಿಧಾನ ಬರೆದಿದ್ದಾರೆ. ಹಸಿವು ಯಾರಿಗೆ ಗೊತ್ತಿರುತ್ತದೆ ಅವರು ಒಳ್ಳೆಯ ಸಂವಿಧಾನವನ್ನ, ಒಳ್ಳೆಯ ಆಚರಣೆ, ಕಾನೂನುಗಳನ್ನ ರಚನೆ ಮಾಡ್ತಾರೆ. ಅಂತಹ ಆಚರಣೆಗಳ ಜೊತೆ ನಾವೆಲ್ಲ ಕೈಜೋಡಿಸಬೇಕು ಎಂದು ಡಾ. ನಾಗಣ್ಣ ಆಶಯ ವ್ಯಕ್ತಪಡಿಸಿದ್ದರು.

ಮನುವಾದಿಗಳು ಯಾವುದೋ ಬಣ್ಣದ ಲೋಕವನ್ನ, ಬಣ್ಣದ ಜೀವ್ನವನ್ನ ತೋರಿಸಿ ನಮ್ಮನ್ನ ದಾರಿ ತಪ್ಪಿಸುತ್ತಿದ್ದಾರೆ. ದಯಮಾಡಿ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಯುವಕರಿಗೆ ಎಚ್ಚರಿಕೆಯ ಮಾತುಗಳನ್ನಾಡಿದರು.

ಇನ್ನು, ಅರುಣೋದಯ ಸಂಘದ ಪದಾಧಿಕಾರಿಗಳು ಒಳ್ಳೆಯ ಜನ ಇದ್ದಾರೆ, ಬಹಳ ಒಳ್ಳೊಳ್ಳೆಯ ಕೆಲಸ ಮಾಡ್ತಿದ್ದಾರೆ. ನಿರಂತರವಾಗಿ ನನ್ನ ಜೊತೆ ಇದ್ದಾರೆ. ಏನು ನನ್ನ ಬಗ್ಗೆ ತಾವು ಆಶಯವನ್ನ ವ್ಯಕ್ತಪಡಿಸಿದ್ರಿ ಅದಕ್ಕೆ ನಾನು ಋಣಿಯಾಗಿದ್ದೇನೆ. ನನ್ನ ಉಸಿರು ಇರೋವರೆಗೂ ಅಂಬೇಡ್ಕರ್ ತತ್ವ-ಆದರ್ಶಗಳನ್ನು ಪಾಲಿಸುತ್ತೇನೆ ಎಂದರು.

ನಾನೊಂದು ಕನಸ್ಸಿದೆ. 101 ಅಡಿ ಅಂಬೇಡ್ಕರ್ ಪ್ರತಿಮೆ ಮಾಡಬೇಕು ಅಂತಾ. ಪ್ರಪ್ರಥಮವಾಗಿ ನಾನು ಶಾಸಕನಾಗಿ ಆಯ್ಕೆ ಕೂಡಲೇ ಮೊದಲು ಮಾಡುವುದೇ 101 ಅಡಿ ಅಂಬೇಡ್ಕರ್ ಪ್ರತಿಮೆ. ನಮ್ಮ‌ ಮಾಯಾವತಿ ಮೇಡಂ ಕೂಡ ಅಂಬೇಡ್ಕರ್ ಪ್ರತಿಮೆ ಮಾಡಿದ್ರು. ನಾನು ಏಕೆ ಪ್ರತಿಮೆ ಮಾಡ್ತೀನಿ ಅಂದ್ರೆ. ಜನರು ಹೋಗಬೇಕಾದಾಗ ಅದು ಏನು ಅಂತಾ ಕೇಳಿದ್ರೆ, ಪುಸ್ತಕ ಇದ್ರೂ ಓದುವುದಕ್ಕೆ ಆಗಲ್ಲ. ಪ್ರತಿಮೆ ಇದ್ರೆ, ಚಿಕ್ಕ ಮಕ್ಕಳು ಕೇಳ್ತಾರೆ. ಆಗ ವಿಚಾರವನ್ನ ನಮ್ಮ ಮುಂದಿನ ಪೀಳಿಗೆಗೆ ಹೇಳಬಹುದು ಎಂದು ಹೇಳಿದರು.

ಡಾ. ಬಿ.ಆರ್. ಅಂಬೇಡ್ಕರ್ ಮನಸ್ಸು ಮಾಡಿದ್ರೆ, ಯಾವ ಸ್ಥಾನಕ್ಕೂ ಕಡಿಮೆ ಇರುತ್ತಿರಲಿಲ್ಲ. ಯಾವುದು ಬೇಕಾದ್ರೂ ತೀರ್ಮಾನವನ್ನ ತೆಗೆದುಕೊಳ್ಳಬಹುದಿತ್ತು. ಜೊತೆಗೆ, ಅಂಬೇಡ್ಕರ್ ಅವರು ತಮ್ಮ ತನವನ್ನ, ತಮ್ಮ ಕುಟುಂಬವನ್ನ ನಿರ್ಲಕ್ಷಿಸಿ ಬಡವರಿಗೆ ಒಳ್ಳೆಯದನ್ನ ಮಾಡಿದ್ರು. ಅಂಬೇಡ್ಕರ್ ಸಂವಿಧಾನವನ್ನ ಬರೆಯದೇ ಇದ್ದಿದ್ರೆ ನಾವ್ಯಾರೂ ಇಲ್ಲಿರುತ್ತಿರಲಿಲ್ಲ. ಯಾವುದೋ ಜಮೀನ್ದಾರರೋ, ಯಾವುದೋ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡ್ಕೊಂಡು ಇರಬೇಕಿತ್ತು. ಆ ಮಹಾತ್ಮನನ್ನ ಸ್ಮರಣೆ ಮಾಡಬೇಕು ಅಂತಾ ಕಿವಿಮಾತು ಹೇಳಿದ ಡಾ. ನಾಗಣ್ಣ ಕಿವಿಮಾತು ಹೇಳಿದರು.

ಇನ್ನು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ, ನಿವೃತ್ತ ಪ್ರಾಂಶುಪಾಲ, ಚಿಂತಕ ಡಾ ಮಣಿಗಯ್ಯ, ಉಪನ್ಯಾಸಕ, ವಿಮರ್ಶಕ ಡಾ. ರವಿಕುಮಾರ್ ನೀಹ ಅವರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರಾಧ್ಯ ಟ್ರಸ್ಟ್‌ನ ಅಧ್ಯಕ್ಷೆ ಪವಿತ್ರ, ಅರುಣೋದಯ ಸಹಕಾರ ಸಂಘದ ಅಧ್ಯಕ್ಷ ಡಾ. ಮುಕುಂದ ಎಲ್., ಉಪಾಧ್ಯಕ್ಷ ಡಾ. ಹನುಮಂತರಾಯಪ್ಪ, ಪ್ರಥಮ ದರ್ಜೆ ಗುತ್ತಿಗೆದಾರ ನವೀನ್, ದಲಿತ ಪರ ಹೋರಾಟಗಾರ ಗೂಳರಿವೆ ನಾಗರಾಜು ಹಾಗೂ ಸಂಘದ ನಿರ್ದೇಶಕರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

ಮಂಡ್ಯ | ಕಿರುಗಾವಲು ಜ್ಯುವೆಲರಿ ಶಾಪ್ ಕಳ್ಳತನ; ಆರೋಪಿ ಕಾಲಿಗೆ ಗುಂಡು

ಮಂಡ್ಯ ಜಿಲ್ಲೆ, ಕಿರುಗಾವಲು ಜ್ಯುವೆಲರಿ ಶಾಪ್ ನಲ್ಲಿ ನಡೆದ ಕಳ್ಳತನ ಹಾಗೂ...

ಬಾಗಲಕೋಟೆ | ಬೀದಿ ನಾಯಿಗಳ ಹಾವಳಿ; ಶೀಘ್ರ ಕ್ರಮಕ್ಕೆ ಡಿಸಿ ಸಂಗಪ್ಪ ಸೂಚನೆ

ಬಾಗಲಕೋಟೆ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಹಾಗೂ...

ಶಿವಮೊಗ್ಗ | ಡಿ.ಎ.ಆರ್.ಸಭಾಂಗಣದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಶಾಂತಿ ಸಮಿತಿ ಸಭೆ

ಎಲ್ಲಾ ಧರ್ಮದವರು ಹಬ್ಬಗಳನ್ನು ಸಡಗರ-ಸಂಭ್ರಮಗಳಿಂದ ಆಚರಿಸುವಂತೆ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಕರೆ...

Download Eedina App Android / iOS

X