ಮೈಸೂರಿನ ನಂಜರಾಜ ಬಹದ್ದೂರ್ ಛತ್ರದಲ್ಲಿ ‘ ಪರಿಸರಕ್ಕಾಗಿ ನಾವು ‘ ಸಂಘಟನೆಯಿಂದ ನಡೆದ ಸೊಪ್ಪು ಮೇಳದಲ್ಲಿ ‘ ಕುಲಾಂತರಿ ಬೀಜ ಮತ್ತು ಕುಲಾಂತರಿ ಆಹಾರ ಪದ್ಧತಿಗೆ ನಮ್ಮ ವಿರೋಧ ‘ ಎಂದು ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಕುಲಾಂತರಿ ಬೀಜ ಮತ್ತು ಕುಲಾಂತರಿ ಆಹಾರ ಪದ್ಧತಿ ಇವೆರಡು ವಿಷಯದಲ್ಲಿ ನೀತಿ ನಿಯಮಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿರುವ ಹಿನ್ನೆಲೆಯಲ್ಲಿ ನಿನ್ನೆ ಮತ್ತು ಇಂದು ‘ಪರಿಸರಕ್ಕಾಗಿ ನಾವು’ ಸಂಘಟನೆಯಿಂದ ಸೊಪ್ಪು ಮೇಳ ನಡೆಯಿತು.
ಕುಲಾಂತರಿ ಬೀಜ ಮತ್ತು ಕುಲಾಂತರಿ ಆಹಾರ ಪದ್ಧತಿಯಿಂದಾಗುವ ಅಪಾಯಗಳ ಕುರಿತು ತಜ್ಞರು ಬರೆದಿರುವ ಕರಪತ್ರವನ್ನು ವಿತರಿಸಿ, ಕುಲಾಂತರಿ ಬೀಜ ಮತ್ತು ಆಹಾರಕ್ಕೆ ನಿಮ್ಮ ವಿರೋಧ ಇದ್ದರೆ ಬ್ಯಾನರ್‍ನಲ್ಲಿ ಸಹಿ ಮಾಡುವಂತೆ ಕೇಳಲಾಗುತ್ತಿತ್ತು.
ಇದನ್ನು ಓದಿದ್ದೀರಾ? ಯಾದಗಿರಿ | ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಡಿದ ಸಿಡಿಲು: ನಾಲ್ವರ ಸಾವು
ಸಹಿ ಸಂಗ್ರಹ ಕಾರ್ಯಕ್ರಮದಲ್ಲಿ ಪರಶುರಾಮೇಗೌಡ, ಗಂಟಯ್ಯ, ಭಾಗ್ಯ,ಅಂಜನಾ, ಶೈಲಜೇಶ್, ಮಹದೇವ್ ಇಂದಿರಾ,ಲೀಲಾ, ಕಲಾ, ಗುರುಸ್ವಾಮಿ, ಚರಣ್, ರತೀಶ್, ಸಾರ್ಥಕ್, ಪ್ರಭಾಕರ್ ಮೊದಲಾದವರಿದ್ದರು.
