ಜಾತಿ ನಿಂದಕ, ಅತ್ಯಾಚಾರ ಆರೋಪ ಹೊತ್ತಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮುನಿರತ್ನನನ್ನು ಈ ಕೂಡಲೇ ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಪ್ರಜಾ ಪರಿವರ್ತನಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಆನಂದ್ ಕುಮಾರ್ ಕುಡುತಿನಿ ಇವರು ಆಗ್ರಹಿಸಿದ್ದಾರೆ.
ಕಳೆದ ಒಂದು ವಾರದಿಂದ ಹಾಲಿ ಶಾಸಕ ಮುನಿರತ್ನನ ಬಗ್ಗೆ ಮೊದಲು ಸುಲಿಗೆ ಪ್ರಕರಣ, ನಂತರ ಜಾತಿ ನಿಂದನೆ ಪ್ರಕರಣ ನಂತರ ರೇಪ್ ಪ್ರಕರಣ ನಂತರ ಏಡ್ಸ್ ನಂತಹ ಮಹಾಮಾರಿ ಸೋಂಕು ಹರಡುವ ಪ್ರಕರಣಗಳು ಹೀಗೆ ಇನ್ನೂ ವಿಚಿತ್ರ ರೀತಿಯಲ್ಲಿ ಪ್ರಕರಣಗಳು ಈ ವ್ಯಕ್ತಿಯ ವಿರುದ್ಧ ಬೆಳಕಿಗೆ ಬಂದಿವೆ.
ಈಗಾಗಲೇ ಧಾಖಲಾದ ಪ್ರಕರಣಗಳಲ್ಲಿ ಜೈಲು ಸೇರಿರುವುದು ಎಲ್ಲರಿಗೂ ತಿಳಿದ ವಿಷಯ. ಹಾಗಾಗಿ ಮುನಿರತ್ನ ಅವರು ರಾಜಕಾರಣದಲ್ಲಿ ಮುಂದುವರೆಯಲಿಕ್ಕೆ ಲಾಯಕ್ಕಿಲ್ಲ. ಇಂತಹ ವ್ಯಕ್ತಿ ಶಾಸಕ ಸ್ಥಾನದಲ್ಲಿ ಮುಂದುವರೆದಲ್ಲಿ ಆ ಕ್ಷೇತ್ರದ ಜನಗಳಿಗೆ ಅಪಾಯಕಾರಿ ಆಗುವುದಂತೂ ಸತ್ಯ ಎಂದು ಕುಡುತಿನಿ ತಿಳಿಸಿದ್ದಾರೆ.
ಮುನಿರತ್ನರಂತಹ ಕೊಳಕು ರಾಜಕಾರಣಿಗಳು ರಾಜಕೀಯದಲ್ಲಿ ಮುಂದುವರೆಯಬಾರದು. ಅವರಿಂದ ರಾಜಕಾರಣಕ್ಕೆ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರದ ಮತದಾರರಿಗೂ ಅಪತ್ತು ಅನಾಹುತ, ಅಭದ್ರತೆ,ಅಸುರಕ್ಷಿತತೆ ಕಾಡುತ್ತಿದೆ. ಹಾಗಾಗಿಯೇ ಶಾಸಕ ಸ್ಥಾನದಲ್ಲಿ ಮುನಿರತ್ನ ಮುಂದುವರೆಯಬಾರದು ಎಂಬುದು ಬಳ್ಳಾರಿ ಜಿಲ್ಲಾ ಪ್ರಜಾ ಪರಿವರ್ತನಾ ವೇದಿಕೆಯ ಆಗ್ರಹ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜಕಾರಣವನ್ನು ಶುಚಿಗೊಳಿಸಬೇಕಾದ ಅವಶ್ಯಕತೆ ಇದೆ. ಮುನಿರತ್ನರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಜಾ ಪರಿವರ್ತನೆ ವೇದಿಕೆಯ ಹಲವಾರು ಪದಾಧಿಕಾರಿಗಳು ಮತ್ತು ಸದಸ್ಯರು ಹಾಜರಿದ್ದರು.
