ಎರಡು ವರ್ಷದ ಮಗುವೊಂದು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದು, ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಲು 18 ಲಕ್ಷ ವೆಚ್ಚ ವ್ಯಯಿಸಬೇಕಾಗಿದೆ. ಹೀಗಾಗಿ, ಮಗುವನ್ನು ಉಳಿಸಿಕೊಳ್ಳಲು ಹಣದ ನೆರವು ನೀಡುವಂತೆ ಪೋಷಕರು ದಾನಿಗಳ ಮೊರೆ ಹೋಗಿದ್ದಾರೆ.
ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ಎರಡೂವರೆ ವರ್ಷದ ಮಗುವನ್ನು ಉಳಿಸಿಕೊಳ್ಳಲು ತಾಯಿಯೇ ತನ್ನ ಲಿವರ್ ಕೊಡಲು ಸಿದ್ಧವಾಗಿದ್ದಾಳೆ. ಆದರೆ, ಟ್ರ್ಯಾನ್ಸ್ ಪ್ಲ್ಯಾಂಟ್ ಮಾಡಲು ಹಣಕಾಸಿನ ಸಮಸ್ಯೆ ಎದುರಾಗಿದ್ದು, ಸಹಾಯ ಮಾಡುವಂತೆ ಪೋಷಕರು ಮನವಿ ಮಾಡಿದ್ದಾರೆ.
ಮೂಲತಃ ನಗರದಲ್ಲಿನ ಕೌಲ್ ಬಜಾರ್ ಟೈಲರ್ ಸ್ಟ್ರೀಟ್ ನಿವಾಸಿ ಮಹೇಶ್ ಅವರು ಕ್ಷೌರಿಕ ವೃತ್ತಿ ಮಾಡುತ್ತಿದ್ದು, ತಾಯಿ ಎಂ.ಮಂಜುಳಾ ಅವರು ಗೃಹಿಣಿಯಾಗಿದ್ದಾರೆ. ಈ ದಂಪತಿಗಳಿಗೆ ಇಬ್ಬರು ಮಕ್ಕಳು ಇದ್ದಾರೆ. ಹಿರಿಯ ಮಗಳು ಪ್ರಣೀತಾ, ಎರಡನೇ ಮಗು ರಿಷಿ. ಎರಡೂವರೆ ವರ್ಷದ ರಿಷಿ ಕಳೆದ ಕೆಲವು ವರ್ಷಗಳಿಂದ ಲಿವರ್ ಸಮಸ್ಯೆಯಿಂದ ಬಳಲುತ್ತಿದೆ.
ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ತಮ್ಮ ಮಗನಿಗೆ ಚಿಕಿತ್ಸೆ ಕೊಡಿಸಲು ಈಗಾಗಲೇ ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಇದೀಗ ಮಗುವಿಗೆ ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಬೇಕಾಗಿದೆ. ಮಗುವಿನ ತಾಯಿ ಮಂಜುಳ ಅವರೇ ತನ್ನ ಮಗುವಿಗೆ ಲಿವರ್ ನೀಡಲು ಸಿದ್ಧವಾಗಿದ್ದಾರೆ ಎಂದು ಪತಿ ಮಹೇಶ್ ಹೇಳಿದ್ದು, ಆದರೆ ಲಿವರ್ ಟ್ರಾನ್ಸ್ ಪ್ಲ್ಯಾಂಟ್ ಮಾಡಲು ಸುಮಾರು 18 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನು ಓದಿದ್ದೀರಾ? ದಾವಣಗೆರೆ | ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇರ ನೇಮಕಾತಿಗೆ ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ
ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ತಮ್ಮ ಮಗನ ಉಳಿಸಿಕೊಳ್ಳಲು ಪೋಷಕರು, ದಾನಿಗಳು ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿರುವ ರಿಷಿ, ಕಿದ್ವಾಯಿ ಆಸ್ಪತ್ರೆ ಕಿಮೋಥೆರಪಿ ಚಿಕಿತ್ಸೆ ಕೊಡಿಸಲಾಗಿದೆ. ಇದೀಗ ಮಣಿಪಾಲ ಆಸ್ಪತ್ರೆಯಲ್ಲಿ ಲಿವರ್ ಟ್ರಾನ್ಸ್ ಪ್ಲೆಂಟ್ ಮಾಡಬೇಕಾಗಿದ್ದು ಚಿಕಿತ್ಸೆಗೆ ಸುಮಾರು 18 ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ದಾನಿಗಳು ಹಣಕಾಸಿನ ಸಹಾಯ ಮಾಡುವುದಾದರೆ ಈ ಕೆಳಗಿನ ವಿವರದ ಮೂಲಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ:
ಖಾತೆಯ ಹೆಸರು:ಎಂ.ಮಂಜುಳಾ,
ಕರ್ನಾಟಕ ಗ್ರಾಮೀಣ ಬ್ಯಾಂಕ್ ಬಳ್ಳಾರಿ,
ಖಾತೆ ಸಂಖ್ಯೆ: 10584101110793
IFSC CODE:PKGB0010584
Phonepe: 7406350074
ದೂರವಾಣಿ ಸಂಖ್ಯೆ: 7406350074
