ಜಾತ್ಯತೀತತೆ ಎಂಬುದು ಯೂರೋಪಿನದ್ದು, ಭಾರತಕ್ಕೆ ಅದರ ಅವಶ್ಯಕತೆ ಇಲ್ಲ ಎಂದು ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸೆಪ್ಟೆಂಬರ್ 22ರಂದು ಕನ್ಯಾಕುಮಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಜ್ಯಪಾಲರು, “ಭಾರತದ ಜನತೆಗೆ ಜಾತ್ಯತೀತತೆಯ ಹೆಸರಿನಲ್ಲಿ ವಂಚನೆ ಎಸಗಲಾಗಿದೆ. ಇದು ಯುರೋಪಿಯನ್ ಪರಿಕಲ್ಪನೆಯಾಗಿದ್ದು, ಭಾರತದಲ್ಲಿ ಅಗತ್ಯವಿಲ್ಲ” ಎಂದು ಹೇಳಿಕೊಂಡಿದ್ದಾರೆ.
“ಈ ದೇಶದ ಜನರ ಮೇಲೆ ಅನೇಕ ರೀತಿಯ ವಂಚನೆಗಳನ್ನು ಮಾಡಲಾಗಿದೆ. ಅವುಗಳಲ್ಲಿ ಒಂದು ಜಾತ್ಯತೀತತೆ ಎಂಬ ತಪ್ಪು ವ್ಯಾಖ್ಯಾನವಾಗಿದೆ. ಸೆಕ್ಯುಲರಿಸಂ ಎಂದರೇನು? ಸೆಕ್ಯುಲರಿಸಂ ಎಂದರೆ ಯುರೋಪಿಯನ್ ಪರಿಕಲ್ಪನೆ. ಅದು ಭಾರತೀಯ ಪರಿಕಲ್ಪನೆಯಲ್ಲ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ವಿವಾದಾತ್ಮಕ ಹೇಳಿಕೆ ಹಿನ್ನೆಲೆ; ಸಂಘಪರಿವಾರದ ಮುಖಂಡ ಶರಣ್ ಪಂಪ್‌ವೆಲ್ ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ
“ಇಡೀ ಸಂವಿಧಾನ ರಚನಾ ಸಭೆಯು ನಮ್ಮ ದೇಶದಲ್ಲಿ ಜಾತ್ಯತೀತತೆ ಇದೆ ಎಂದಿದೆಯೇ? ಯಾವುದೇ ಸಂಘರ್ಷವಿದೆಯೇ? ಭಾರತ ಧರ್ಮವನ್ನು ಮೀರಿ ಹುಟ್ಟಿದೆ. ಹಾಗಿರುವಾಗ ಧರ್ಮದಲ್ಲಿ ಸಂಘರ್ಷ ಉಂಟಾಗುವುದು ಹೇಗೆ” ಎಂದು ರಾಜ್ಯಪಾಲರು ಪ್ರಶ್ನಿಸಿದರು.
1976ರಲ್ಲಿ ಸಂವಿಧಾನದ ಪೀಠಿಕೆಯಲ್ಲಿ ‘ಜಾತ್ಯತೀತತೆ’ ಪದವನ್ನು ಪರಿಚಯಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನೂ ರಾಜ್ಯಪಾಲ ಆರ್‌ಎನ್ ರವಿ ಟೀಕಿಸಿದರು.
“ಇಪ್ಪತ್ತೈದು ವರ್ಷಗಳ ನಂತರ, ತುರ್ತು ಪರಿಸ್ಥಿತಿಯ ಸಮಯದಲ್ಲಿ, ಅಸುರಕ್ಷಿತ ಪ್ರಧಾನಿ ಕೆಲವು ವರ್ಗದ ಜನರನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ, ಜಾತ್ಯತೀತತೆಯನ್ನು ಸಂವಿಧಾನದಲ್ಲಿ ಪರಿಚಯಿಸಿದರು,” ಎಂದು ಹೇಳಿದ್ದಾರೆ.
'Secularism is a European concept and it has no place in India.' – RN Ravi ( Tamilnadu Governor) pic.twitter.com/fa1ZH6JCiX
— Political_News (@Political_Newss) September 23, 2024
