ಗಣಪತಿ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿದ್ದಾಗ ಎರಡು ಗುಂಪಿನ ನಡುವೆ ವಾಗ್ವಾದ ಉಂಟಾಗಿ, ಓರ್ವ ಯುವಕನಿಗೆ ಚಾಕು ಇರಿದ ಗಂಭೀರ ಗಾಯಗೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ನಡೆದಿದೆ.
ಶಿವು ಮಾದಿಗ ಗಂಭೀರ ಗಾಯಗೊಂಡ ಯುವಕ ಎಂದು ತಿಳಿದು ಬಂದಿದೆ.
ನಗರದ ಗುಂಡಮ್ಮ ಕ್ಯಾಂಪಿನ ಗಣೇಶ ಮೆರವಣಿಗೆಯು ಯಶೋಧ ಆಸ್ಪತ್ರೆ ಮುಂದೆ ಬಂದಾಗ ಡ್ಯಾನ್ಸ್ ವಿಚಾರವಾಗಿ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಗಲಾಟೆಯಾಗಿದೆ. ಈ ವೇಳೆ ಗಣೇಶ, ಶ್ರೀನಿವಾಸ, ಮಂಜು, ಶಂಕ್ರಪ್ಪ, ಸಾಗರ, ಮನೋಹರ ಎಂಬ ಯುವಕರ ಮೇಲೆ ಹಲ್ಲೆಯಾಗಿದೆ.
ಶಿವು ದುರುಗಪ್ಪ ಮಾದಿಗನಿಗೆ ಎಂಬ ಯುವಕನಿಗೆ ಇದೇ ವೇಳೆ ಚಾಕುವಿನಿಂದ ಇರಿಯಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಲವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದೆ.
ಮುತ್ತಣ್ಣ , ಧರ್ಮಣ್ಣ ಹಾಗೂ 15 ಜನರು ಸೇರಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ನಗರದ ವಿವಿಧ ಭಾಗದಲ್ಲಿ ನಿನ್ನೆ 17 ಗಣಪತಿ ವಿಸರ್ಜನೆ ಮೆರವಣಿಗೆ ನಡೆಯಿತು.
