ವಿಜಯಪುರ ಜಿಲ್ಲೆ ಸೂಫಿ ಸಂತ ಶರಣರ ನಾಡಾಗಿದೆ. ಎಲ್ಲರನ್ನೂ ಸರಿಸಮಾನರಾಗಿ ಕಾಣುವ ಮಾತೃ ಸ್ವರೂಪಿ ಜಿಲ್ಲೆಯಾಗಿದ್ದರ ಹಿನ್ನಲೆ ಇಂದು ವಿಜಯಪುರ ಐತಿಹಾಸಿಕ ಪಾರಂಪರಿಕವಾಗಿ ಗುರುತಿಸಿಕೊಂಡಿದ್ದು, ಇಡೀ ದೇಶಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.
ವಿಜಯಪುರ ನಗರದ ಕಂದಗಲ್ ಹನಮಂತರಾಯ ರಂಗಮಂದಿರದಲ್ಲಿ ಮೊಹಮೀದಿಯ ನಾಥ್ ಕಮಿಟಿಯಿಂದ ಆಯೋಜಿಸಿರುವ ರಾಜ್ಯ ಮಟ್ಟದ ನಾಥ್ ಹಾಗೂ ಜಿಲ್ಲಾ ಮಟ್ಟದ ರಸಪ್ರಶ್ನೆ(ಕ್ವಿಜ್ ಕಾಂಪಿಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ದೇಶ ಕಟ್ಟುವುದಕ್ಕೆ ಮಕ್ಕಳ ಪಾತ್ರ ಬಹುಮುಖ್ಯವಾಗಿದ್ದರಿಂದ ಕಳೆದ 40 ವರ್ಷದಿಂದ ಇಂತಹ ಚಟುವಟಿಕೆ ಹಮ್ಮಿಕೊಂಡು ಬರುತ್ತಿರುವುದು ಶ್ಲಾಘನೀಯ. ಮಕ್ಕಳ ಉತ್ತಮ ಬೆಳವಣಿಗೆಗೆ ರಸಪ್ರಶ್ನೆ ಕಾರ್ಯಕ್ರಮ ಅವಶ್ಯಕವಾಗಿದೆ. ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಸುಗಮ ದಾರಿಯಾಗುವುದು” ಎಂದರು.
“ಇಂತಹ ಸಂಸ್ಥೆ ಮಕ್ಕಳ ಪ್ರತಿಭೆಯನ್ನು ಹೊರತಂದು ಅವರನ್ನು ಸಮಾಜದ ಮುಖ್ಯವಾಹಿನಿಗೆ ದೇಶ ಕಟ್ಟುವುದಕ್ಕೆ ಮುಖ್ಯಪಾತ್ರವಾಗಿದೆ ಹಾಗೂ ಮಕ್ಕಳು ಇತ್ತೀಚಿನ ದಿನದಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ತಮ್ಮ ಭವಿಷ್ಯವನ್ನು ಉಜ್ವಲಗೊಳಿಸಬೇಕು. ಇಂದಿನ ಆಧುನಿಕ ದಿನಮಾನದಲ್ಲಿ ಮೊಬೈಲ್ ಲೋಕದಿಂದ ಹೊರಬಂದು ಕ್ರೀಡಾ ಚಟುವಟಿಕೆ, ಓದಿನತ್ತ, ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು” ಎಂದು ಸಲಹೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬೆಳ್ಳುಳ್ಳಿ ಬೆಳೆಗೆ ಉತ್ತಮ ಬೆಲೆ; ರೈತರ ಮುಖದಲ್ಲಿ ಮಂದಹಾಸ
ಮಾಜಿ ಶಾಸಕ ಡಾ. ಮಕ್ಬುಲ್ ಭಗವಾನ್, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ್, ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಗಯಾಸ ಪಾಶಾ ಜಾಹಗೀರಾದರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ಸಿರಾಜ ಜಮಖಂಡಿ, ಪ್ರಧಾನ ಕಾರ್ಯದರ್ಶಿ ಜಾಹಂಗೀರ ಹಿಪ್ಪರಗಿ, ಖಜಾಂಚಿ ಸೈಯದರಸುಲ ಕೋಲಾರ, ಹಿರಿಯ ಸದಸ್ಯರುಗಳಾದ ಅಬ್ದುಲ್‌ರಜಾಕ ಕೋಲಾರ, ಜಾಕೀರಹುಸೇನ ಸುರಕಿ, ಫಯಾಜ ಕಲಾದಗಿ, ಎಂ ಎಸ್ ಪಾಟೀಲ ಗಣಿಯಾರ, ಅಬುಬಕರ ಅಂಬರಕಾನೆ, ಹಸನ ನದಾಫ್, ಅಲ್ತಾಪ್ ಭಗವಾನ, ಮಹಾದೇವ ರಾವಜಿ, ಮುಜಾಮಿಲ್ ಮುಲ್ಲಾ, ಸಾಹೇಬ ಅವಟಿ ಸೇರಿದಂತೆ ಬಹುತೇಕರು ಇದ್ದರು.