ಕೇರಳದಲ್ಲಿ ಬಿಜೆಪಿಗೆ ನೆರವು ನೀಡಿದವರಾರು?; ಸಿಎಂ ಪಿಣರಾಯಿ ಸರ್ಕಾರಕ್ಕೆ ಸವಾಲಿನ ಪ್ರಶ್ನೆ

Date:

Advertisements

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಗೂ ಕೆಲ ದಿನಗಳ ಮೊದಲು ತ್ರಿಶೂರ್‌ನಲ್ಲಿ ನಡೆದ ಪೂರಂ ಉತ್ಸವವು ಅಸ್ತವ್ಯಸ್ತಗೊಂಡಿದ್ದು ಕೇರಳದಲ್ಲಿ ಭಾರೀ ವಿವಾದ ಸೃಷ್ಟಿಸಿದೆ. ಪೂರಂ ಉತ್ಸವದಲ್ಲಾದ ಅಡೆತಡೆಗಳು ಬಿಜೆಪಿಗೆ ಸಹಾಯ ಮಾಡುವ ಉದ್ದೇಶದಿಂದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರವೇ ನಡೆಸಿದ ಕೃತ್ಯಗಳೆಂದು ವಿಪಕ್ಷ ಕಾಂಗ್ರೆಸ್‌ ಆರೋಪಿಸಿದೆ.

ಈ ನಡುವೆ, ಏಪ್ರಿಲ್ 19-20ರಂದು ನಡೆದ ಪೂರಂ ಉತ್ಸವದಲ್ಲಾದ ಅನಾಹುತಗಳ ಬಗೆಗಿನ ತನಿಖಾ ವರದಿಯನ್ನು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂಆರ್ ಅಜಿತ್ ಕುಮಾರ್ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅಧೀನದಲ್ಲಿರುವ ಗೃಹ ಇಲಾಖೆಗೆ ಸಲ್ಲಿಸಿದ್ದಾರೆ.

ಗಮನಾರ್ಹವೆಂದರೆ, ಎಡಿಜಿಪಿ ಅಜಿತ್ ಕುಮಾರ್ ಅವರು ಮುಖ್ಯಮಂತ್ರಿ ವಿಜಯನ್ ಅವರ ಆಪ್ತರೆಂದೇ ಹೆಸರುವಾಸಿಯಾಗಿದ್ದಾರೆ. ಅವರು ಕಳೆದ ವರ್ಷ, ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಆರೆಸ್ಸೆಸ್ ಮುಖಂಡರನ್ನು ಭೇಟಿಯಾಗಿದ್ದರು. ಅವರ ಭೇಟಿ ಕೇರಳದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿತ್ತು. ಅಜಿತ್ ಮತ್ತು ಆರ್‌ಎಸ್‌ಎಸ್‌ ಮುಖಂಡರ ನಡುವಿನ ಸಭೆಯೇ ಪೂರಂ ಉತ್ಸವಕ್ಕೆ ಪೊಲೀಸರು ಅಡ್ಡಿಪಡಸಲು ಕಾರಣ. ಈ ಘಟನೆಯು ಲೋಕಾಸಭಾ ಚುನಾವಣೆಯಲ್ಲಿ ತ್ರಿಶೂರ್‌ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಗೆಲುವಿಕೆ ಕಾಣಿಕೆಯಾಗಿದೆ ಎಂದು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ದೂರುತ್ತಿದೆ.

Advertisements

ಈ ಆರೋಪವನ್ನು ಎದುರಿಸುತ್ತಿರುವ ವಿಜಯನ್ ಅವರ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ಗೆ ಮತ್ತೊಂದು ಸವಾಲು ಎದುರಾಗಿದೆ. ವಿಜಯನ್ ಸರ್ಕಾರಕ್ಕೆ ಬೆಂಬಲ ನೀಡಿರುವ ಸ್ವತಂತ್ರ ಶಾಸಕ ಪಿ.ವಿ ಅನ್ವರ್ ಅವರೂ ಕೂಡ ಪೂರಂ ಘಟನೆಯ ವಿಚಾರದಲ್ಲಿ ಕಾಂಗ್ರೆಸ್‌ನ ಆರೋಪಗಳು ಸತ್ಯವೆಂದು ಹೇಳುತ್ತಿದ್ದಾರೆ. ಆ ಆರೋಪಗಳನ್ನು ಪ್ರತಿಧ್ವನಿಸುತ್ತಿದ್ದಾರೆ.

ತ್ರಿಶೂರ್‌ನಲ್ಲಿ ನಡೆದ ಪೂರಂ ಉತ್ಸವದ ವೇಳೆ ಪೊಲೀಸರ ಗುಂಪು ಕಾರ್ಯಾಚರಣೆಯು ಉತ್ಸವ ಹಾಳಾಗಲು ಕಾರಣವಾಯಿತು. ಅಸ್ತವ್ಯಸ್ತಗೊಂಡಿದ್ದ ಉತ್ಸವದ ನಡುವೆ ಬಿಜೆಪಿಯ ಸುರೇಶ್ ಗೋಪಿ ಅವರು ಮಧ್ಯಪ್ರವೇಶಿಸಿ, ಸಂಘಟಕರಿಗೆ ಧೈರ್ಯ ತುಂಬುವ ಮೂಲಕ ಉತ್ಸವವು ಸರಿದಾರಿಯಲ್ಲಿ ನಡೆಯುವಂತೆ ಮಾಡಿದರು. ಈ ಕ್ರಮವು, ಆರು ದಿನಗಳ ನಂತರ ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಗೋಪಿ ಗೆಲುವಿಗೆ ಕಾರಣವಾಯಿತು. ಆ ಮೂಲಕ ರಾಜ್ಯದಲ್ಲಿ ಬಿಜೆಪಿ ಮೊದಲ ಲೋಕಸಭಾ ಸ್ಥಾನವನ್ನು ಗೆದ್ದುಕೊಂಡು, ಖಾತೆ ತೆರೆಯಿತು.

ಪೂರಂ ಅಡ್ಡಿ, ಅಡಚಣೆ ಕುರಿತು ಎಡಿಜಿಪಿ ಅಜಿತ್ ಕುಮಾರ್ ಅವರ ತನಿಖಾ ವರದಿಯನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ವಿಜಯನ್, “ಪೂರಂ ನಡೆಸಲು ಅಡ್ಡಿಪಡಿಸುವ ಪ್ರಯತ್ನ ನಡೆದಿದೆ. ಎಲ್ಲರಿಗೂ ಅದರ ಬಗ್ಗೆ ಮನವರಿಕೆಯಾಗಿದೆ. ವರದಿಯು ಡಿಜಿಪಿ ಕೈ ಸೇರಿದೆ. ಆದರೆ, ಆ ವರದಿಯನ್ನು ನಾನು ಇಲ್ಲಿಯವರೆಗೆ ನೋಡಿಲ್ಲ” ಎಂದಿದ್ದಾರೆ.

ಎಡಿಜಿಪಿ ವರದಿ ಇನ್ನೂ ಬಹಿರಂಗವಾಗಿಲ್ಲವಾದರೂ, ತ್ರಿಶೂರ್‌ನಲ್ಲಿ ಸ್ಪರ್ಧಿಸಿದ್ದ ಸಿಪಿಐ ನಾಯಕ ವಿ.ಎಸ್ ಸುನೀಲ್ ಕುಮಾರ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. “ಪೂರಂ ಅವ್ಯವಸ್ಥೆಯ ಹಿಂದೆ ಪಿತೂರಿ ಇದೆ. ಇದರ ಹಿಂದೆ ಯಾವುದೇ ಹೊರಗಿನವರ ಹಸ್ತಕ್ಷೇಪವಿಲ್ಲ ಎಂಬುದಾಗಿ ಪೊಲೀಸ್ ತನಿಖಾ ವರದಿ ಹೇಳಿದರೆ, ಅದನ್ನು ನಾವು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉತ್ಸವಕ್ಕೆ ಅಡ್ಡಿಪಡಿಸಲು ಹೊರಗಿನ ಹಸ್ತಕ್ಷೇಪವಿದೆ ಎಂಬ ಬಗ್ಗೆ ನನಗೆ ಖಾತ್ರಿಯಿದೆ” ಎಂದು ಹೇಳಿದ್ದಾರೆ.

ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ ಸತೀಶನ್ ಅವರು ಸತ್ಯವನ್ನು ಹೊರತರಲು ನ್ಯಾಯಾಂಗ ತನಿಖೆಯ ಅಗತ್ಯವಿದೆ ಎಂದು ಹೇಳಿದ್ದಾರೆ.

ಈ ವರದಿ ಓದಿದ್ದೀರಾ?: ಜಾತ್ಯತೀತತೆ ಯೂರೋಪಿನದ್ದು, ಭಾರತದಲ್ಲಿ ಅವಶ್ಯಕತೆ ಇಲ್ಲ: ತಮಿಳುನಾಡು ರಾಜ್ಯಪಾಲ ವಿವಾದಾತ್ಮಕ ಹೇಳಿಕೆ

ಎಡಿಜಿಪಿ-ಆರ್‌ಎಸ್‌ಎಸ್ ಸಭೆಯ ಬಗ್ಗೆ ಪ್ರತಿಕ್ರಿಯಿಸಿರುವ ವಿಜಯನ್, “ಯಾವುದೇ ರೀತಿಯ ರಾಜಕೀಯ ಚರ್ಚೆಗಳಿಗೆ ಯಾವುದೇ ಪೊಲೀಸ್ ಅಧಿಕಾರಿಯನ್ನು ಕಳಿಸುವ ಅಭ್ಯಾಸ ನಮಗೆ (ಸಿಪಿಎಂ) ಇಲ್ಲ. ಅಜಿತ್ ಕುಮಾರ್ ವಿರುದ್ಧದ ಆರೋಪಗಳ ವಿಚಾರಣೆ ನಡೆಯುತ್ತಿದೆ. ಅವರು ಯಾವುದೇ ಸಂಘಟನೆ ಅಥವಾ ಪಕ್ಷದ ಮುಖಂಡರನ್ನು ಭೇಟಿ ಮಾಡಿದ್ದರೆ, ಅಂತಹ ಸಭೆಗಳು ಅಧಿಕೃತ ಕರ್ತವ್ಯಗಳ ನಿರ್ವಹಣೆಯ ಮೇಲೆ ಪರಿಣಾಮ ಬೀರುವ ರೀತಿಯಲ್ಲಿ ಇದ್ದರೆ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ.

ಇದೆಲ್ಲದರ ನಡುವೆ, ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಯ ಕೇರಳ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಅವರೊಂದಿಗೆ ಸಭೆ ನಡೆಸಿದ್ದ ಆರೋಪದ ಮೇಲೆ ಸಿಪಿಎಂ ಮುಖಂಡ ಇ.ಪಿ ಜಯರಾಜನ್ ಅವರನ್ನು ಎಲ್‌ಡಿಎಫ್‌ ಸಂಚಾಲಕ ಸ್ಥಾನದಿಂದ ಸಿಎಂಪಿ ವಜಾಗೊಳಿಸಿದೆ.

ಎಡಿಜಿಪಿ-ಆರ್‌ಎಸ್‌ಎಸ್ ಸಭೆ ಮತ್ತು ಪೂರಂ ಉತ್ಸವದ ಅವ್ಯವಸ್ಥೆ ಭರಾಟೆಯು ಸಂಘಪರಿವಾರದೊಂದಿಗೆ ಆಡಳಿತಾರೂಢ ಸಿಪಿಎಂ ಸಂಪರ್ಕ ಹಿಂದಿದೆ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪುಷ್ಟಿ ನೀಡಿದೆ. ಸಿಪಿಎಂನ ‘ಜಾತ್ಯತೀತತೆ’ ಸಿದ್ಧಾಂತವು ಕುಸಿದಿದೆ ಎಂದು ಕಾಂಗ್ರೆಸ್‌ ನೇತೃತ್ವ ವಿಪಕ್ಷಗಳು ಆರೋಪಿಸುತ್ತಿವೆ. ಆದರೆ, ಆರೋಪಗಳನ್ನು ನಿರಾಧಾರವೆಂದು ವಿಜಯನ್ ತಳ್ಳಿಹಾಕುತ್ತಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಅಯೋಧ್ಯೆ | ಆಸ್ಪತ್ರೆಗೆ ದಾಖಲಿಸಲು ನಿರಾಕರಣೆ, ತಂದೆಯ ತೋಳಿನಲ್ಲಿ ಮೃತಪಟ್ಟ ಬಾಲಕ

ತೀವ್ರವಾಗಿ ಅಸ್ಪಸ್ಥಗೊಂಡಿದ್ದ ತನ್ನ 12 ವರ್ಷದ ಪುತ್ರನನ್ನು ಸರ್ಕಾರಿ ಆಸ್ಪತ್ರೆಗೆ ಕರೆ...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

Download Eedina App Android / iOS

X