ಕಲಬುರಗಿ ನಗರದ ಹಳೆ ಜೇವರ್ಗಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಅಗೆದಿರುವ ಗುಂಡಿಯಲ್ಲಿ ಸಂಗ್ರಹವಾದ ನೀರಿನಲ್ಲಿ ಬಿದ್ದು ವ್ಯಕ್ತಿಯೊಬ್ಬರು ಮತಪಟ್ಟಿದ್ದಾರೆ.
ಎಂಎಸ್‌ಕೆ ಮಿಲ್ ನಿವಾಸಿ ಅಸ್ಲಾಂ (42) ಮೃತ್ತರು. ಒಳಚರಂಡಿ (ಯುಜಿಡಿ) ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆಯು ಹಳೆ ಜೇವರ್ಗಿ ರಸ್ತೆ ಬದಿಯಲ್ಲಿ ಗುಂಡಿ ತೆಗೆದಿದ್ದರು. ಸೋಮವಾರ ರಾತ್ರಿ ಜೋರು ಮಳೆ ಸುರಿದು ಗುಂಡಿಯ ತುಂಬಾ ನೀರು ನಿಂತಿತ್ತು. ರಸ್ತೆ ಬದಿಯಿಂದ ನಡೆದುಕೊಂಡು ಹೋಗುವ ವೇಳೆ ತಗ್ಗಿನ ಬಗ್ಗೆ ಅರಿವಿರದೆ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಸ್ತೆಯಲ್ಲಿ ಸುಮಾರು ಆರು ಅಡಿ ಗುಂಡಿ ತೆಗೆಯಲಾಗಿದ್ದು, ಗುಂಡಿಯ ಬದಿಯಲ್ಲಿ ಬ್ಯಾರಿಕೇಡ್ ಸಹ ಹಾಕಿರಲಿಲ್ಲ. ರಸ್ತೆ ಮೇಲಿನ ಮಳೆ ನೀರಿನಿಂದ ಗುಂಡಿ ತುಂಬಿತ್ತು.
ಸ್ಥಳಕ್ಕೆ ಶಾಸಕ ಅಲ್ಲಮಪ್ರಭು ಪಾಟೀಲ್ ಮೇಯರ್ ಯಲ್ಲಪ್ಪ ನಾಯ್ಕೋಡಿ ಹಾಗೂ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.