ದಾವಣಗೆರೆ | ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇರ ನೇಮಕಾತಿಗೆ ಒತ್ತಾಯಿಸಿ ಎಐಯುಟಿಯುಸಿ ಪ್ರತಿಭಟನೆ

Date:

Advertisements

ಸುಮಾರು 20 ರಿಂದ 25 ವರ್ಷಗಳಿಂದ ಸಿ ಮತ್ತು ಡಿ ದರ್ಜೆಯ ಖಾಯಂ ಸ್ವರೂಪದ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಮತ್ತು ನೇರ ನೇಮಕಾತಿಗೆ ಒತ್ತಾಯಿಸಿ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಸಿ ಮತ್ತು ಡಿ ಗ್ರೂಪ್ ನೌಕರರ ಸಂಘವು ದಾವಣಗೆರೆಯಲ್ಲಿ ಎಐಯುಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿತು.

ದಾವಣಗೆರೆ ನಗರದ ಮಧ್ಯಭಾಗದಲ್ಲಿರುವ ರಾಜ್ಯದ ಪ್ರಥಮ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ ಎನ್ನುವ ಹೆಗ್ಗಳಿಕೆಗೆ ಪ್ರಾರಂಭವಾದ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 90ಕ್ಕೆ ಹೆಚ್ಚು ನೌಕರರು ವಿಶ್ವವಿದ್ಯಾನಿಲಯದ ಸಿ ಮತ್ತು ಡಿ ದರ್ಜೆಯ ದೀರ್ಘಕಾಲಿನ ಕಾಯಂ ಸ್ವರೂಪದ ಹುದ್ದೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ಇವರಿಗೆ ಬೆಂಗಳೂರು ಮೂಲದ ಕೆಎಸ್ಎಲ್ 9 ಎನ್ನುವ ಏಜೆನ್ಸಿಯೊಂದು ಗುತ್ತಿಗೆ ಪಡೆದುಕೊಂಡು ವೇತನವನ್ನು ಕೊಡುತ್ತಿದೆ. ಈ ವ್ಯವಸ್ಥೆಯನ್ನು ನಿಲ್ಲಿಸಿ ನೇರ ನೇಮಕಾತಿ ಮತ್ತು ಸೇವಾ ಭದ್ರತೆಗೆ ಒತ್ತಾಯಿಸಿ ಸಿ ಮತ್ತು ಡಿ ಗ್ರೂಪ್ ನೌಕರರ ಸಂಘದ 90ಕ್ಕೂ ಹೆಚ್ಚು ನೌಕರರು ಎಐಯುಟಿಯುಸಿ ನೇತೃತ್ವದಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು ಪ್ರಾರಂಭಿಸಿದ್ದಾರೆ. ನೌಕರರು ಸ್ಥಳದಲ್ಲಿಯೇ ಊಟ ತಿಂಡಿಗಳನ್ನು ತಯಾರಿಸಿಕೊಂಡು ಮುಷ್ಕರ ನೆಡೆಸುತ್ತಿದ್ದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಈ ಬಗ್ಗೆ ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕ, ನೌಕರರ ಸಂಘ ಜಿಲ್ಲಾಧ್ಯಕ್ಷರಾದ ಮಂಜುನಾಥ್ ಕೈದಾಳು, “ಯುಬಿಡಿಟಿ ಇಂಜಿನಿಯರಿಂಗ್ ಕಾಲೇಜಿನ ವಿವಿಧ ವಿಭಾಗಗಳಲ್ಲಿ 90ಕ್ಕೂ ಹೆಚ್ಚು ಹಿಂದುಳಿದ ನೌಕರರು ಸುಮಾರು 20-25 ವರ್ಷಗಳಿಂದಲೂ ಕಾರ್ಯನಿರ್ವಹಿಸುತ್ತಿದ್ದು, ಇವರು ನೇರ ನೇಮಕಾತಿಗೆ ಅರ್ಹರಾಗಿದ್ದಾರೆ.‌ ಬೆಂಗಳೂರಿನ ಏಜೆನ್ಸಿ ಒಂದಕ್ಕೆ ನೌಕರರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಟೆಂಡರ್ ಕೊಟ್ಟಿದ್ದಾರೆ. ಈ ಏಜೆನ್ಸಿಯವರು ಸಕಾಲಕ್ಕೆ ನೌಕರರಿಗೆ ವೇತನ ನೀಡದೆ 20ರಿಂದ 25ನೇ ತಾರೀಕಿನವರೆಗೆ ವಿಳಂಬ ಮಾಡುತ್ತಾರೆ ಮತ್ತು ಒಮ್ಮೊಮ್ಮೆ 2 ರಿಂದ 3 ತಿಂಗಳ ತನಕ ವೇತನ ನೀಡುವುದಿಲ್ಲ.‌ ಸಾಂದರ್ಭಿಕ ರಜೆ ಹಾಗೂ ಇತರ ಭತ್ಯೆಗಳನ್ನು ನೀಡದೆ ಶೋಷಿಸುತ್ತಿದ್ದಾರೆ. ಈ ವಿರುದ್ಧ ಮಾತೆತ್ತಿದರೆ ಅವರನ್ನು ಕೆಲಸದಿಂದ ತೆಗೆಯುವ ಮಾತನಾಡುತ್ತಾರೆ. ಈ ಮೂಲಕ ನೌಕರರು ದೌರ್ಜನ್ಯ ಎದುರಿಸುತ್ತಿದ್ದಾರೆ.‌ ಹಾಗಾಗಿ ಏಜೆನ್ಸಿಯನ್ನು ರದ್ದುಗೊಳಿಸಿ ನೌಕರರನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು” ಎಂದು ಒತ್ತಾಯಿಸಿದರು.

Advertisements

ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸಂಬಂಧಪಟ್ಟ ಪ್ರಾಚಾರ್ಯರಾಗಲಿ, ವಿಶ್ವವಿದ್ಯಾನಿಲಯದ ಕುಲಪತಿಗಳು ಅಥವಾ ಉಪಕುಲಪತಿಗಳಾಗಲಿ ಸಮಸ್ಯೆಗಳನ್ನು ಆಲಿಸಲು ಇದುವರೆಗೆ ಭೇಟಿ ನೀಡಿಲ್ಲ. ಇದು ಅವರ ನಿರ್ಲಕ್ಷವನ್ನು ತೋರಿಸುತ್ತದೆ. ಈ ಕೂಡಲೇ ಸಂಬಂಧಪಟ್ಟವರು ನೌಕರರ ಅಹವಾಲುಗಳನ್ನು ಪರಿಗಣನೆಗೆ ತೆಗೆದುಕೊಂಡು ನೇರ ನೇಮಕಾತಿ ಮಾಡಿಕೊಳ್ಳಲು ಸಂಘಟನೆಯ ಮೂಲಕ ನಾವು ಆಗ್ರಹಪಡಿಸುತ್ತೇವೆ.‌ ಇಲ್ಲವಾದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಯುಬಿಜಿಟಿ ಕಾಲೇಜಿನಲ್ಲಿ 20 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಹೊರಗುತ್ತಿಗೆ ನೌಕರ ತುಕಾರಾಂ ಮಾತನಾಡಿ, ಕಾಲೇಜಿನ ಮತ್ತು ವಿಶ್ವವಿದ್ಯಾಲಯದ ಪ್ರಾಚಾರ್ಯರು ಕಾಲೇಜಿನಲ್ಲಿ ಅಕ್ರಮ ಗಳಲ್ಲಿ ತೊಡಗಿದ್ದಾರೆ. 60 ವರ್ಷ ನಂತರ ನಿವೃತ್ತರಾದ ನೌಕರರೊಬ್ಬನನ್ನು 50,000 ಸಂಬಳಕ್ಕೆ ಮರು ನೇಮಕಾತಿ ಮಾಡಿಕೊಂಡಿದ್ದು, ಇತರರನ್ನು ಕಡೆಗಣಿಸಿದ್ದಾರೆ. 60 ವರ್ಷದ ನಂತರ ನಿವೃತ್ತಿ ಅಂದಮೇಲೆ ಅವರನ್ನು ಮರು ನೇಮಕ ಮಾಡಿಕೊಳ್ಳುವುದು ಏಕೆ? ಇದರಲ್ಲಿ ಕಮಿಷನ್ ಪಡೆಯುವ ದುರ್ಲಾಭವಿದ್ದು, ಯುವ ಸಮೂಹದ ನಿರುದ್ಯೋಗಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ನಮ್ಮಂತ ನೌಕರರಿಗೆ ಕನಿಷ್ಠ ಮರ್ಯಾದೆ ಗೌರವವನ್ನು ಕೊಡದೆ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಂದು ಆರೋಪಿಸಿದರು.

ಕಾಲೇಜಿನಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವ ಮಹಿಳೆ ನಿರ್ಮಲಾ ಮಾತನಾಡಿ, ಹೊರಗುತ್ತಿಗೆ ಏಜೆನ್ಸಿ ಪ್ರತಿ ತಿಂಗಳು ಸಂಬಳವನ್ನು ವಿಳಂಬ ಮಾಡುತ್ತಿದ್ದು ಇದರಿಂದ ನಮ್ಮ ಜೀವನ ನಡೆಯುವುದಾದರೂ ಹೇಗೆ. ಇದನ್ನೇ ಆಧಾರವಾಗಿಟ್ಟುಕೊಂಡು ಜೀವನ ನಡೆಸುತ್ತಿದ್ದೇವೆ. ಈ ಬಗ್ಗೆ ಪ್ರಾಚಾರ್ಯರನ್ನು ಅಥವಾ ಕಾಲೇಜಿನ ಸಿಬ್ಬಂದಿಗಳನ್ನು ಪ್ರಶ್ನಿಸಿದರೆ ನಮಗೂ ಇದಕ್ಕೆ ಸಂಬಂಧವಿಲ್ಲ ಅನ್ನುತ್ತಾರೆ. ಯಾವುದೇ ಸಮಸ್ಯೆಗಳಾದರೂ ಕಾಲೇಜಿನ ಸಿಬ್ಬಂದಿ ಮತ್ತು ಪ್ರಾಚಾರ್ಯರು ಸ್ಪಂದಿಸುವುದಿಲ್ಲ. ಏಜೆನ್ಸಿಯವರು ಬೆಂಗಳೂರಿನಲ್ಲಿ ಇರುತ್ತಾರೆ. ಅವರು ನಮ್ಮ ಸಂಕಷ್ಟಕ್ಕೆ ಸ್ಪಂದಿಸುವುದಿಲ್ಲ. 20 ರಿಂದ 25 ವರ್ಷಗಳವರೆಗೂ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದೇವೆ. ಈ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ ಕೆಲಸದಿಂದ ತೆಗೆಯುವ ಮಾತನಾಡುತ್ತಾರೆ ಅಥವಾ ಬೇರೆ ವಿಭಾಗಗಳಿಗೆ ವರ್ಗಾವಣೆಗೊಳಿಸುವ ಮಾತನಾಡುತ್ತಾರೆ. ನಮ್ಮನ್ನೇ ಗುರಿಯಾಗಿಟ್ಟುಕೊಂಡು ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ ಎಂದು ಅಳಲನ್ನು ತೋಡಿಕೊಂಡರು.

ಇದನ್ನು ಓದಿದ್ದೀರಾ? ರಾಯಚೂರು | ರೈತರ ಸಮಸ್ಯೆಯ ಬಗ್ಗೆ ಡಿ ಕೆ ಶಿವಕುಮಾರ್ ಉಡಾಫೆ ವರ್ತನೆ : ಚಾಮರಸ ಮಾಲಿ ಪಾಟೀಲ್ ಆರೋಪ

ಪ್ರತಿಭಟನೆಯಲ್ಲಿ ಸಿ ಮತ್ತು ಡಿ ಗ್ರೂಪ್ ಸಂಘದ ಉಪಾಧ್ಯಕ್ಷ ಪರಮೇಶ್ವರಪ್ಪ, ಕಾರ್ಯದರ್ಶಿ ತಿಪ್ಪೆಸ್ವಾಮಿ ಅಣಬೇರ್,ಮತ್ತು ಮಂಜುನಾಥ್ ಕುಕ್ಕವಾಡ, ಇತರ ಪದಾಧಿಕಾರಿಗಳು ಮತ್ತು ನೌಕರರಾದ ಶಿವಮೂರ್ತಿ, ವಿನೋದ, ಜಯದೇವಪ್ಪ, ಮಲ್ಲಿಕಾರ್ಜುನ್, ಪ್ರಸನ್ನ, ಪ್ರಶಾಂತ್, ಪ್ರವೀಣ, ಬಸವರಾಜ್, ಹನುಮಂತಪ್ಪ, ಮಂಜು, ಗಣೇಶ, ಮಾಂತೇಶ, ಕುಮಾರಸ್ವಾಮಿ ಹಾಗೂ ಇನ್ನಿತರರು ನೌಕರರು ಭಾಗವಹಿಸಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X